ಎಸ್‌.ಡಿ.ಎಂ ಕಾಲೇಜಿನಲ್ಲಿ ಸಸ್ಯ ಶಾಸ್ತ್ರ ವಿಭಾಗದಿಂದ "ಫ್ಲೋರಾ ಫೀಯಸ್ಟ" ಕಾರ್ಯಕ್ರಮ

Upayuktha
0


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆಯ ಸಸ್ಯ ಶಾಸ್ತ್ರ ವಿಭಾಗದ ಸಕ್ರಿಯ ಸಂಘವಾದ 'ಸಸ್ಯಸೌರಭ' ಆಯೋಜಿಸಿದ ಫ್ಲೋರಾ ಫೀಯಸ್ಟ ಎಂಬ ಕಾರ್ಯಕ್ರಮವು ದಿನಾಂಕ ಸೋಮವಾರದಂದು ಕಾಲೇಜಿನ 'ಸಮ್ಯಗ್ಧರ್ಶನ'  ಹಾಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು. 


ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜಿನ ಪ್ರಾಂಶುಪಾಲರೂ  ಆಗಿರುವ ಡಾ. ಬಿ.ಎ. ಕುಮಾರ ಹೆಗ್ಡೆ , ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಡಾ. ಶ್ರೀ ನಾಥ್ ಎಂ.ಪಿ. ಇವರು ದೀಪ ಪ್ರಜ್ವಲನೆಯ ಮೂಲಕ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.


ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮವು  ಹಮ್ಮಿಕೊಂಡಿದ್ದು, ವೈಯಕ್ತಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಪೂರಕವಾಗಿ ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು .


ವಿಭಾಗದ ಪ್ರಾಧ್ಯಾಪಕರಾದ ಕು.ಶಕುಂತಲಾ ಬಿ, ಅಭಿಲಾಷ್ ಕೆ.ಎಸ್., ಕು.ಸ್ವಾತಿ, ಕು.ಮಂಜುಶ್ರೀ ಉಪಸ್ಥಿತರಿದ್ದರು.


ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗು ಕಾರ್ಯಕ್ರಮದ ಉದ್ಘಾಟಕರಾದ  ಡಾ. ಶ್ರೀನಾಥ್ ಎಂ.ಪಿ. ಇವರು ವಿದ್ಯಾರ್ಥಿಗಳಲ್ಲಿ ಸದಾ ಜೀವನೋತ್ಸಾಹ ಹಾಗೂ ಆತ್ಮವಿಶ್ವಾಸ ತುಂಬಿರಬೇಕು ಎಂದು ಹೇಳಿದರು.


ಈ ಕಾರ್ಯಕ್ರಮದಲ್ಲಿ ಸಸ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ರಾದ ಅಭಿಲಾಷ್ ಕೆ ಎಸ್.  ಸ್ವಾಗತಿಸಿ, ಮಂಜುಶ್ರೀ ಧನ್ಯವಾದವಿತ್ತರು ಹಾಗೂ  ಕಾರ್ಯಕ್ರಮವನ್ನು ಕು. ಶರಣ್ಯ ನಿರೂಪಸಿದರು.


200 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top