ಮತದಾನ ಸ್ಫೂರ್ತಿಗೆ ಬಂಗೂರ್ ಅಭಿಯಾನ

Upayuktha
0



ಮಂಗಳೂರು: ದೇಶದ ನಾಗರಿಕರು ಮತದಾನದ ತಮ್ಮ ಹಕ್ಕನ್ನು ಚಲಾಯಿಸಲು ಸ್ಫೂರ್ತಿ ನೀಡುವ ಉದ್ದೇಶದಿಂದ ಬಂಗೂರ್ ಸಿಮೆಂಟ್ ಒಂದು ಮಲ್ಟಿಮೀಡಿಯಾ ಅಭಿಯಾನವನ್ನು ಅನಾವರಣಗೊಳಿಸಿದೆ.


'ದೃಢ ಮತದಾನ, ಸದೃಢ ದೇಶ' (ವೋಟ್ ಸಾಲಿಡ್, ದೇಶ್ ಸಾಲಿಡ್') ಎಂಬ ಈ ಆಂದೋಲನವು ದೇಶವನ್ನು ಸದೃಢವಾಗಿಸುವಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮತದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಖ್ಯಾತ ಬಾಲಿವುಡ್ ನಟ ಸನ್ನಿ ಡಿಯೋಲ್ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಾರೆ ಎಂದು ಶ್ರೀ ಸಿಮೆಂಟ್‍ನ ಆಡಳಿತ ನಿರ್ದೇಶಕ ನೀರಜ್ ಅಖೌರಿ ಹೇಳಿದ್ದಾರೆ.


ಇಷ್ಟು ಮಾತ್ರವಲ್ಲದೆ, ತನ್ನ ವೆಬ್‍ಸೈಟ್  votekavachan.bangurcement.com ನಲ್ಲಿ 'ಮತದಾನದ ಪ್ರತಿಜ್ಞೆ' ಗುಂಡಿಯನ್ನು ಒತ್ತುವ ಮೂಲಕ ಮತ ಚಲಾಯಿಸುವ ಪ್ರತಿಜ್ಞೆ ಕೈಗೊಳ್ಳಲು ನಾಗರಿಕರಿಗೆ ಬ್ರಾಂಡ್ ಉತ್ತೇಜನ ನೀಡುತ್ತದೆ. ಮತದಾನ ಮಾಡುವ ಪ್ರತಿಯೊಂದು ಪ್ರತಿಜ್ಞೆಗೆ 1 ಕೆಜಿ ಸಿಮೆಂಟ್ ದಾನ ಮಾಡಲು ಬಂಗೂರ್ ಸಿಮೆಂಟ್ ನಿರ್ಧರಿಸಿದ್ದು, ಇದನ್ನು ಸಾಮಾಜಿಕ ಕಲ್ಯಾಣ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.


ಒಂದು ದೃಢವಾದ ಮನೆಯನ್ನು ನಿರ್ಮಿಸಲು ಬಂಗೂರ್ ಸಿಮೆಂಟ್ ನಿಮಗೆ ಹೇಗೆ ನೆರವಾಗುವುದೋ ಅದೇ ರೀತಿಯಲ್ಲಿ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಸದೃಢವಾದ ದೇಶವನ್ನು ಕಟ್ಟಲು ನೀವು ನೆರವಾಗಬಹುದು ಎಂಬ ಸಂದೇಶವನ್ನು ಈ ಅಭಿಯಾನ ಸಾರುತ್ತದೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top