ಬೆಂಗಳೂರು: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಸ್ಥೆಯ ವಜ್ರಮಹೋತ್ಸವ 2024-25ರ ಅಂಗವಾಗಿ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ ಏಪ್ರಿಲ್ 20, ಶನಿವಾರ ಸಂಜೆ 6-00 ಗಂಟೆಗೆ ವಿ|| ಐಶ್ವರ್ಯ ನಿತ್ಯಾನಂದ ಮತ್ತು ವಿ|| ಅನುರಾಧ ಬದರಿ ಇವರುಗಳಿಂದ ಯುಗಳ ಗಾಯನ (ವಿಶೇಷ ಸಂಗೀತ ಕಾರ್ಯಕ್ರಮ) ಏರ್ಪಡಿಸಲಾಗಿದೆ.
ಇವರ ಗಾಯನಕ್ಕೆ ವಿ|| ಎಂ.ಎಸ್. ಗೋವಿಂದಸ್ವಾಮಿ ಪಿಟೀಲು ವಾದನದಲ್ಲಿ, ವಿ|| ಬಿ.ಎಸ್. ಆನಂದ್ ಮೃದಂಗ ವಾದನದಲ್ಲಿ ಮತ್ತು ವಿ|| ಜಿ. ಲಕ್ಷ್ಮೀನಾರಾಯಣ ಮೋರ್ಚಿಂಗ್ ವಾದನದಲ್ಲಿ ಸಾಥ್ ನೀಡಲಿದ್ದಾರೆ. ಕೃತಿಗಳ ರಚನೆ ಮತ್ತು ನಿರೂಪಣೆ ವಿ|| ವಸಂತಮಾಧವಿ ಅವರದ್ದು. ಈ ಕಾರ್ಯಕ್ರಮದಲ್ಲಿ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಪದಾಧಿಕಾರಿಗಳು ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ