ಆಳ್ವಾಸ್‌ನಲ್ಲಿ ಪದ್ಮಶ್ರೀ ಪುರಸ್ಕೃತೆ ಸೀತವ್ವ ದುಂಡಪ್ಪ ಜೋಡಟ್ಟಿ
ಮೂಡುಬಿದಿರೆ: ‘ಸಾಮಾಜಿಕ ಪಿಡುಗುಗಳಿಗೆ ಮೂಲ ಕಾರಣ ಮನುಷ್ಯನ ಸ್ವಾರ್ಥ’ ಎಂದು ಸಾಮಾಜಿಕ ಕಾರ್ಯಕರ್ತೆ, ಪದ್ಮಶ್ರೀ ಪುರಸ್ಕೃತೆ ಸೀತವ್ವ ದುಂಡಪ್ಪ ಜೋಡಟ್ಟಿ ವಿಶ್ಲೇಷಿಸಿದರು.
ಆಳ್ವಾಸ್ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ರೋಸ್ಟçಮ್- ಸ್ಪೀರ‍್ಸ್ ಕ್ಲಬ್ ಹಮ್ಮಿಕೊಂಡ ‘ಮಹಿಳೆಯರು, ಮಕ್ಕಳು ಹಾಗೂ ಸಾಮಾಜಿಕ ಸಮಸ್ಯೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಪಿಡುಗುಗಳು ನಗರ ಪ್ರದೇಶಕ್ಕೆ ಹೋಲಿಸಿದರೆ, ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಬಾಲ್ಯ ವಿವಾಹವೂ ಒಬ್ಬ ಮಹಿಳೆಗೆ ಮಾತ್ರವಲ್ಲದೆ ಸಮಾಜಕ್ಕೂ ಶಾಪವಾಗಿದೆ ಎಂದರು.
ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಸ್ವಾತಂತ್ರö್ಯ ಕಿತ್ತುಕೊಂಡು ಅವರನ್ನು ಗುಲಾಮರಾಗುವಂತೆ ಮಾಡುತ್ತದೆ. ಇದಕ್ಕೆ ಮೂಲ ಗುರಿಯಾಗುವುದು ಮಹಿಳೆಯರು ಹಾಗೂ ಮಕ್ಕಳು ಎಂದರು.
ಮಕ್ಕಳು ಸಮಾಜ ಆಸ್ತಿ ಆಗಬೇಕು. ಅದಕ್ಕಾಗಿ ಅವರಿಗೆ ಅಂಗನವಾಡಿಯಿಂದಲೇ ಉತ್ತಮ ಶಿಕ್ಷಣ ಸಿಗುವಂತೆ ಮಾಡಬೇಕು. ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎನ್ನುವುದಕ್ಕಿಂತ ಇಂದಿನ ಮಕ್ಕಳು ಇಂದಿನ ಪ್ರಜೆಗಳೇ ಎಂದು ಭಾÀವಿಸುವುದು ಸೂಕ್ತ. ಇದಕ್ಕಾಗಿ ಅವರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಅಗತ್ಯ ಎಂದು ಹೇಳಿದರು.
ಪ್ರಶಸ್ತಿಗಾಗಿ ಕೆಲಸ ಮಾಡದೇ, ಬಡ ಜನರ ಸಾಮಾಜಿಕ ಹಾಗೂ ಆರ್ಥಿಕ ಸದೃಢತೆಗಾಗಿ ಕೆಲಸ ಮಾಡಿದರೆ, ಪ್ರಶಸ್ತಿ ತಾನಾಗಿಯೇ ನಮ್ಮ ಬಾಗಿಲಿಗೆ ಬರುತ್ತದೆ ಎಂದು ಹೇಳಿದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ‘ದೇವದಾಸಿ ಪದ್ಧತಿ ನಮ್ಮ ದೇಶದಲ್ಲಿ ಇಂದಿಗೂ ಚಲಾವಣೆಯಲ್ಲಿರುವುದು ಅಘಾತಕಾರಿಯಾಗಿದೆ’ ಎಂದರು.
ದೇವದಾಸಿ ಪದ್ಧತಿ, ಹೆಣ್ಣು ಮಕ್ಕಳ ಮಾರಾಟ ಯಾರಿಗೂ ತಿಳಿಯುವುದಿಲ್ಲ. ಯಾಕೆಂದರೆ ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವುದಿಲ್ಲ ಹಾಗೂ ಅದನ್ನು ವಿರೋಧಿಸುವುದು ಯಾವ ರಾಜಕೀಯ ಪಕ್ಷದ ಸಿದ್ಧಾಂತವೂ ಆಗಿಲ್ಲ ಎಂದರು.
‘ಇದರ ವಿರುದ್ಧ ಹೋರಾಟ ಮಾಡುತ್ತಿರುವ ಸೀತವ್ವ ಅವರಂತಹ ವ್ಯಕ್ತಿಗಳು ಸಮಾಜದ ನಿಜವಾದ ನಾಯಕರು. ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಆಲೋಚಿಸುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿನಿ ಅಂಕಿತಾ ಪರಾಡ್ಕರ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ