ಮಂಗಳೂರು: ಥಂಡರ್ ಕಿಡ್ಸ್ ತಂಡದ ಬಾಲಪ್ರತಿಭೆ ಲಿಖಿತಾ ಯು ಮಾರ್ನಬೈಲು ಹಾಡಿದ ಜಗದ ಅಭಿರಾಮ ಶ್ರೀರಾಮ ಎಂಬ ಹಾಡು ಸೋಮವಾರ (ಏ.15) ಮಂಗಳೂರಿನ ಮಲ್ಲಿಕಟ್ಟೆ ಕದ್ರಿ ಯಲ್ಲಿರುವ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಬರಹಗಾರ್ತಿ , ಮಂಗಳೂರು ಆಕಾಶವಾಣಿಯ ಉದ್ಘೋಷಕಿ ಅಕ್ಷತಾ ರಾಜ್ ಪೆರ್ಲ ಹಾಡನ್ನು ಬಿಡುಗಡೆಗೊಳಿಸಿದರು. ಅವರು ಮಾತನಾಡಿ- ಇಂದಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರದ ಪ್ರಜ್ಞೆ ಗಳನ್ನು ಬೆಳೆಸುವುದು ಅತಿ ಅಗತ್ಯ. ಸಾಹಿತ್ಯ ಸಂಗೀತದ ಮೂಲಕ ಈ ಪ್ರಜ್ಜೆಗಳನ್ನು ಮಕ್ಕಳಲ್ಲಿ ಇನ್ನಷ್ಟು ಜಾಗೃತಗೊಳಿಸಬಹುದು. ಈ ನಿಟ್ಟಿನಲ್ಲಿ ಹೆತ್ತವರು ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಸಂಘಟಕ ಸುಧಾಕರ ರಾವ್ ಪೇಜಾವರ ಮಾತನಾಡಿ ''ಬಾಲ ಪ್ರತಿಭೆ ಲಿಖಿತಾ ಚೆನ್ನಾಗಿ ಹಾಡುವ ಮೂಲಕ ಜಗದಭಿರಾಮ ಹಾಡನ್ನು ಪ್ರಸ್ತುತಪಡಿಸಿದ್ದಾಳೆ. ಎಲ್ಲೂರು ಶ್ರೀನಿವಾಸರಾವ್ ಕಟ್ಟಿ ಬೆಳೆಸಿದ ಥಂಡರ್ ಕಿಡ್ಸ್ ಉತ್ತಮ ಸಂಗೀತದ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಮಕ್ಕಳ ಪ್ರತಿಭೆಗಳು ಬೆಳೆಯುವುದಕ್ಕೆ ಇದೊಂದು ಸದಾವಕಾಶವಾಗಿದೆ'' ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆ ಗಾಯಕಿ ಕು. ಲಿಖಿತಾ ಯು ಮಾರ್ನಬೈಲ್, ಥಂಡರ್ ಕಿಡ್ಸ್ ತಂಡದ ನಿರ್ದೇಶಕರಾದ ಎಲ್ಲೂರು ಶ್ರೀನಿವಾಸರಾವ್, ತಂಡದ ಕಾರ್ಯದರ್ಶಿ ರಘು ಇಡ್ಕಿದು ಹಾಡಿನ ಚಿತ್ರೀಕರಣ ಮತ್ತು ಸಂಕಲನವನ್ನು ಮಾಡಿದ ವಿದ್ಯಾ.ಯು ಉಪಸ್ಥಿತರಿದ್ದರು. ಹಾಡನ್ನು ಹಾಡಿದ ಲಿಖಿತಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು .
ಕಾರ್ಯಕ್ರಮದಲ್ಲಿ ಎಲ್ಲರೂ ಶ್ರೀನಿವಾಸ್ ರಾವ್ ಸ್ವಾಗತಿಸಿದರು. ರಘು ಇಡ್ಕಿದು ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ