ಕೊಪ್ಪ: ಭಾರತೀಯ ವೈದ್ಯಕೀಯ ಸಂಘ, ಕೊಪ್ಪ ಶಾಖೆಯು 'ವೈದ್ಯರ ಸಮುದಾಯ ಭವನ', ಅಮ್ಮಡಿ, ಕೊಪ್ಪ ಇಲ್ಲಿ ಏ. 16ರಂದು ಸಂಜೆ ಮಲೆನಾಡಿನ ಹೆಸರಾಂತ ಸಂಗೀತ ವಿದೂಷಿ ಶ್ರೀಮತಿ ಸಾವಿತ್ರಿ ಪ್ರಭಾಕರ್ ಮತ್ತು ಅವರ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಭಕ್ತಿ ಗೀತೆಗಳ ಜೊತೆ, ಎರಡು-ಮೂರು ದಶಕಗಳ ಹಿಂದೆ ನಿತ್ಯ ಕೇಳುತ್ತಿದ್ದ ಪ್ರಸಿದ್ದ ಕವಿಗಳ ಮದುರ ಭಾವ ಗೀತೆಗಳನ್ನು ಕಾರ್ಯಕ್ರಮದಲ್ಲಿ ಹಾಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಸಂಗೀತ ಸಂಜೆ ಕಾರ್ಯಕ್ರಮ ಗಾಯನದಲ್ಲಿ ವಿದೂಷಿ ಶ್ರೀಮತಿ ಸಾವಿತ್ರಿ ಪ್ರಭಾಕರ್‌ರವರ ಜೊತೆ, ಶ್ರೀಮತಿ ಪಾವನಿ ನಾಗಸಿಂಹ, ಕುಮಾರಿ ಸೀತಾ ಪ್ರಜ್ಞಾ, ಕುಮಾರಿ ಶಾರದಾ ಭಾಗವಹಿಸಿದ್ದರು. ಮೃದಂಗ: ವಿದ್ವಾನ್ ನೈಬಿ ಪ್ರಭಾಕರ್, ಕೀ ಬೋರ್ಡ್: ನಟರಾಜ್ ಗೋಗಟೆ, ರಿದಮ್‌ಪ್ಯಾಡ್: ಗಾಡಿಕೆರೆ ಸತ್ಯನಾರಾಯಣ ಅವರುಗಳು ಸಾಥ್ ನೀಡಿ, ನಿರ್ವಹಿಸಿದರು.
*
ಆವ ರೂಪದೊಳು ಬಂದರು ಸರಿಯೇ ಆವ ವೇಶದೊಳು ನಿಂದರು ಸರಿಯೇ
ತೆರದಿದೆ ಮನ ಓ ಬಾ ಅತಿಥಿ ಎಂಬ ಕುವೆಂಪು ವಿರಚಿತ ಗೀತೆ,
ಸಂಗೀತ ಸಾಮ್ರಾಜ್ಯ ಸಂಚಾರಿಣಿ ಎಂಬ ಶಾರದಾ ಸ್ತುತಿ,
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮಾ
ಎಂಬ ಕೃಷ್ಣನ ತುಂಟಾಟದ ಹಾಡು,
ನಿರ್ಗುಣ ಪರಬ್ರಹ್ಮ ಸ್ವರೂಪನಾದ ಶಿವನ ಸ್ಥುತಿ 'ಭೋ ಶಂಭೋ ಶಿವಶಂಭೋ ಸ್ವಯಂಭೋ' ಜೋಶ್ ಗೀತೆ,
ಕುವೆಂಪು ರಚನೆಯ ಇಳಿದು ಬಾ ತಾಯೆ ಇಳಿದು ಬಾ
ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ
ಡಾ. ಎನ್. ಎಸ್. ಲಕ್ಷ್ಮಿ ನಾರಾಯಣ ಭಟ್ಟ
ಅಕೋ ಶಾಮ ಅವಳೆ ರಾಧೆ
ಪು.ತಿ. ನರಸಿಂಹಾಚಾರ್ ರಚನೆಯ
ರಾಮ ಕೃಷ್ಣ ಗೋವಿಂದ ನಾರಾಯಣ
ಸಮೂಹ ಗೀತೆ.
ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ
ದ.ರಾ ಬೇಂದ್ರೆ
ಆವು ಈವಿನ ನಾವು ನೀವಿಗೆ
ಆನು ತಾನಾದ ತನನನ
ದ ರಾ ಬೇಂದ್ರೆಯವರ ನಾಕು ತಂತಿಯ ಗೀತೆ
ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಕೆ.ಎಸ್.ನರಸಿಂಹಸ್ವಾಮಿಯವರ ಕವನ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ
ಶ್ರೀ ಗಜಾನನ ಶರ್ಮ ವಿರಚಿತ ಪ್ರಸಿದ್ದ ಹಾಡುಗಳು ನೆರೆದ ಪ್ರೇಕ್ಷಕರ ಮನ ಸೆಳೆದವು.
ಭಾಗ್ಯಾದ ಲಕ್ಷ್ಮೀ ಬಾರಮ್ಮ
ಪುರಂದರ ದಾಸರ ಕೃತಿಯೊಂದಿಗೆ ಕಾರ್ಯ ಸಂಪನ್ನಗೊಂಡಿತು.
*
ಕಲಾವಿದರ ಪರಿಚಯವನ್ನು ಡಾ. ಉದಯಶಂಕರ್ ಪ್ರಶಮನಿ ನೆಡೆಸಿಕೊಟ್ಟರು. ಡಾ.ಅನಿತಾ ನಟರಾಜ್ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು. ಕೊಪ್ಪದ ನೂರಾರು ಜನ ಕಲಾಸಕ್ತರಿಗೆ ಸಂಗೀತ ಕಾರ್ಯಕ್ರಮ ಅತ್ಯಂತ ಚೇತೋಹಾರಿ ಕಾರ್ಯಕ್ರಮವಾಗಿತ್ತು.
ವರದಿ: ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ