ಮಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಾಳೆ (ಮಾ.10) ಸಂಜೆ 6 ಗಂಟೆಗೆ ನಡೆಯುವ ಅಷ್ಟಾವಧಾನ ಸೇವೆಯಲ್ಲಿ ನಮ್ಮೂರಿನ ನೃತ್ಯ ಕಲಾವಿದೆ ವಿದುಷಿ ಶ್ರೀಮತಿ ಸ್ನೇಹಾ ಭಟ್ ಚೂಂತಾರು ಅವರ ನೃತ್ಯಸೇವೆ ನಡೆಯಲಿದೆ.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಲೋಕಾರ್ಪಣೆಗೊಂಡ ಬಳಿಕ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಂಡಲೋತ್ಸವ ನಡೆಯುತ್ತಿದ್ದು, ಈ ಉತ್ಸವ ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ.
ಮಂದಿರ ಉದ್ಘಾಟನೆಯಾದ ಬಳಿಕ ಪ್ರತಿದಿನವೂ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದು ವಿವಿಧ ಸೇವೆಗಳನ್ನು ನಡೆಸಿ ಕೃತಾರ್ಥರಾಗುತ್ತಿದ್ದಾರೆ.
ನಾಳಿನ ಅಷ್ಟಾವಧಾನ ಸೇವೆಯಲ್ಲಿ ವಿದುಷಿ ಸ್ನೇಹಾ ಭಟ್ ಅವರಿಗೆ ನಾಟ್ಯ ಸೇವೆ ನಡೆಸಲು ಅವಕಾಶ ದೊರೆತಿದೆ. ಸ್ನೇಹಾ ಭಟ್ ಅವರು ವೇದಮೂರ್ತಿ ಮಹೇಶ್ ಭಟ್ ಚೂಂತಾರು ಮತ್ತು ಗಂಗಾಲಕ್ಷ್ಮಿ ದಂಪತಿಗಳ ಪುತ್ರಿಯಾಗಿದ್ದು ಪುತ್ತೂರಿನ ನೃತ್ಯ ಗುರು ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಅವರ ಶಿಷ್ಯೆಯಾಗಿದ್ದಾರೆ.
ಸ್ನೇಹಾ ಭಟ್ ಅವರು ಪ್ರಸ್ತುತ ಶಿವಮೊಗ್ಗದ ನಿವಾಸಿಯಾಗಿರುವ ಉದ್ಯಮಿ, ಮರವಂತೆಯ ವಿವೇಕ್ ಹೆಬ್ಬಾರ್ ಅವರ ಪತ್ನಿ,
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ