ರ
ಬೆಂಗಳೂರು: ಮಾ.08 ರಂದು ಬೆಂಗಳೂರಿನ ಅಂಚೆ ಮಹಾಕಾರ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ “ನಮ್ಮ ಸಂವಿಧಾನದ ಸಂಸ್ಥಾಪಕ ತಾಯಂದಿರು” ವಿಷಯದ ಕುರಿತಾಗಿ QR ಕೋಡ್ ಒಳಗೊಂಡ 15 ಸಚಿತ್ರ ಪೋಸ್ಟಕಾರ್ಡ್‌ಗಳ ಸೆಟ್ ಮತ್ತು “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ” ವಿಶೇಷ ರದ್ದತಿಯನ್ನು ಎಸ್ ರಾಜೇಂದ್ರ ಕುಮಾರ್, ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ವೃತ್ತದ ಅಂಚೆ ಸೇವೆಯ ನಿರ್ದೇಶಕರಾದ ಶ್ರೀಮತಿ ಕೈಯಾ ಅರೋರಾ ಮತ್ತು ಮುಖ್ಯ ಅತಿಥಿ, ಏರೋ ಸ್ಪೇಸ್ ಇಂಜಿನಿಯರ್ ಮತ್ತು ರಿಕ್ಲೇಮ್ ಸಂವಿಧಾನದ ಸಂಸ್ಥಾಪಕರಾದ ವಿನಯ್ ಕುಮಾರ್ ಉಪಸ್ಥಿತರಿದ್ದರು.
QR ಕೋಡ್ ಒಳಗೊಂಡಿರುವ 15 ಸಚಿತ್ರ ಪೋಸ್ಟಕಾರ್ಡ್‌ಗಳು, ಅಂಚೆಚೀಟಿಗಳ ಸಂಗ್ರಹಣಾ ಬ್ಯೂರೋಗಳಾದ ಬೆಂಗಳೂರು GPO, ಮೈಸೂರು HO, ಮಂಗಳೂರು HO ಮತ್ತು ಬೆಳಗಾವಿ HO ಅಂಚೆಚೀಟಿಗಳ ಸಂಗ್ರಹಾಲಯಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ. ಈ ಪೋಸ್ಟ್ ಕಾರ್ಡ್‌ಗಳು ಮಹನೀಯರಾದ ಹಂಸಾ ಮೆಹ್ತಾ, ರಾಜ್ ಕುಮಾರಿ ಅಮೃತ್ ಕೌರ್, ಬೇಗಂ ಐಜಾಜ್ ರಸೂಲ್, ಕಮಲಾ ಚೌಧರಿ, ಸರೋಜಿನಿ ನಾಯ್ಡು, ಲೀಲಾ ರಾಯ್, ಅನ್ನಿ ಮ್ಯಸ್ಕರೀನ್, ರೇಣುಕಾ ರೇ, ದಾಕ್ಷಾಯಣಿ ವೇಲಾಯುಧನ್, ಮಾಲತಿ ಚೌಧರಿ, ಸುಚೇತಾ ಕೃಪಲಾನಿ, ಪೂರ್ಣಿಮಾ ಬ್ಯಾನರ್ಜಿ, ವಿಜಯಲಕ್ಷ್ಮಿ ಪಂಡಿತ್, ಅಮ್ಮು ಸ್ವಾಮಿನಾಥನ್ ಮತ್ತು ದುರ್ಗಾಬಾಯಿ ದೇಶ್‌ಮುಖ್ ಅವರ ಚಿತ್ರಗಳನ್ನು ಒಳಗೊಂಡಿದೆ.
ರದ್ದತಿ ಇಲ್ಲದ ಸಚಿತ್ರ ಪೋಸ್ಟ್ ಕಾರ್ಡ್‌ಗಳ ಬೆಲೆ ₹. 300 /- ಮತ್ತು ರದ್ದತಿ ಸಹಿತ ಸಚಿತ್ರ ಪೋಸ್ಟ ಕಾರ್ಡ್‌ಗಳ ಬೆಲೆ ₹. 400/- “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ” ಯ ವಿಶೇಷ ರದ್ದತಿ ಅಂಚೆಚೀಟಿಗಳ ಸಂಗ್ರಹಾಲಯಗಳಾದ, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಅಂಚೆಚೀಟಿ ಸಂಗ್ರಹಕಾರರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟಕ್ಕೆ ಲಭ್ಯವಿರುತ್ತವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ