ಅಯೋಧ್ಯೆ: ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಾಧೀಶ ನ್ಯಾ ಮೂ ದೇವದಾಸ್ ರವರು ಪತ್ನಿ ಕುಟುಂಬಸ್ಥರೊಡನೆ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದರು.
ರಾಮರಾಜ್ಯದ ಪರಿಕಲ್ಪನೆಯಲ್ಲಿ ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ರಜತ ಕಲಶ ಸೇವೆಯನ್ನು ನೀಡಿದ ನ್ಯಾಯಾಧೀಶರು, ವೈದಿಕರ ಮೂಲಕ ಯಜ್ಞ ಮತ್ತು ಕಲಶಾರಾಧನೆಯ ಸಂಕಲ್ಪ ಸ್ವೀಕರಿಸಿ ಶ್ರೀಗಳ ಮೂಲಕ ರಾಮದೇವರಿಗೆ ಕಲಶಾರಾಧನೆ ಕಲಶಾಭಿಷೇಕ ಸಹಿತ ಪೂಜೆಯನ್ನು ರಾಮನಿಗೆ ಅರ್ಪಿಸಿ, ಶ್ರೀಗಳಿಂದ ರಜತ ಕಲಶ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದರು.
ನಂತರ ಮಾತನಾಡಿ, ರಾಮನ ದರ್ಶನದಿಂದ ಅತೀವ ಸಂತಸವಾಗಿದೆ. ರಾಮರಾಜ್ಯ ನಿರ್ಮಾಣ ಮಾಡಬೇಕೆಂಬ ಕಲ್ಪನೆಯಲ್ಲಿ ಸಾಮಾಜಿಕ ಕಾರ್ಯ ನಡೆಸಿದವರಿಗೆ ರಾಮನ ಸೇವೆಗೆ ಅವಕಾಶ ಮಾಡಿಕೊಡುವ ಶ್ರೀಗಳ ಚಿಂತನೆ ಅತ್ಯಂತ ಶ್ಲಾಘನೀಯವಾಗಿದೆ. ಸಮಾಜದ ಒಳಿತಿಗೆ ತಮ್ಮ ಸಂಪತ್ತನ್ನು ಧಾರೆಯೆರೆಯಲು ಶಕ್ತರಿರುವ ಎಲ್ಲರೂ ಈ ಸತ್ಕಾರ್ಯದಲ್ಲಿ ಭಾಗವಹಿಸಿ ರಾಮರಾಜ್ಯ ಅಭಿಯಾನಕ್ಕೆ ಕೈಜೋಡಿಸಬೇಕೆಂದರು.
ಬಳಿಕ ಶ್ರೀಗಳ ಪಾದಪೂಜೆ ನೆರವೇರಿಸಿ ಗುರುಕಾಣಿಕೆ ಅರ್ಪಿಸಿ ಗೌರವಿಸಿದರು.
ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್ ದಂಪತಿಗಳೂ ಭಾಗವಹಿಸಿದ್ದರು. ಮಾಜಿ ಶಾಸಕ ಕೆ ರಘುಪತಿ ಭಟ್, ವಾಸುದೇವ ಭಟ್ ಪೆರಂಪಳ್ಳಿ, ಶ್ರೀನಿವಾಸ ಪ್ರಸಾದ್ ಮೈಸೂರು, ಸುವರ್ಧನ ನಾಯಕ್, ವೇದಮೂರ್ತಿ ಶಶಾಂಕ ಭಟ್, ಲಕ್ಷ್ಮೀನಾರಾಯಣ ಭಟ್, ವಿಷ್ಣುಮೂರ್ತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ