ಬೆಂಗಳೂರು: ರಂಗ ಚಂದಿರ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ ಆಯೋಜಿಸಿರುವ ಸ್ತ್ರೀ ಸಂವೇದನೆಯ ಸೂಕ್ಷ್ಮ ಭಾವನೆಗಳನ್ನು ಅಭಿವ್ಯಕ್ತಿಸುವ ಒಂದು ಆಪ್ತ ರಂಗ ಪ್ರಯೋಗ "ಲೀಕ್ ಔಟ್" ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ.
ಒಂದಷ್ಟು ನಮ್ಮದೇ ಕಥೆಯ ಕಥಾ ಪಾತ್ರದ ಜೊತೆ ಭಾವನೆಗಳನ್ನು ಹೊರ ಹಾಕುವುದೇ "ಲೀಕ್ ಔಟ್" ಪ್ರಯೋಗದ ಉದ್ದೇಶವಾಗಿದೆ. ಇದೇ ಮಾ.11ರಂದು ಸಂಜೆ 7 ಗಂಟೆಗೆ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ಸಭಾಂಗಣದಲ್ಲಿ ನಡೆಯಲಿದೆ.
ಕಥೆ ಮತ್ತು ಕಥನ ಪ್ರದರ್ಶನವನ್ನು ರಂಗಕರ್ಮಿ, ಚಲನಚಿತ್ರ ನಟಿ ಅಕ್ಷತಾ ಪಾಂಡವಪುರ ಅವರು ಪ್ರಸ್ತುತ ಪಡಿಸಲಿದ್ದಾರೆ. ಟಿಕೆಟ್‌ಗಾಗಿ ಜಿಪಿಒ ಚಂದ್ರು 91130 81894, 98565 43697 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ