ಎಸ್.ಡಿ.ಎಂ ಝೇಂಕಾರ ಸೀಸನ್ 5ಕ್ಕೆ ಚಾಲನೆ

Upayuktha
0

ಡಿಜಿಟಲ್ ತಂತ್ರಜ್ಞಾನದ ಕೌಶಲ್ಯದೊಂದಿಗೆ ಸಾಮರ್ಥ್ಯ ನವೀಕರಣಕ್ಕೆ ಸಲಹೆ


 

ಉಜಿರೆ: ಡಿಜಿಟಲ್  ತಂತ್ರಜ್ಞಾನದ ತಾಂತ್ರಿಕ ಕೌಶಲ್ಯದೊಂದಿಗೆ ಕ್ರಿಯಾಶೀಲ ಭೌದ್ಧಿಕ ಸಾಮರ್ಥ್ಯವನ್ನು ನವೀಕರಿಸಿಕೊಳ್ಳವುದರ ಕಡೆಗೆ ವಿದ್ಯಾರ್ಥಿ ಸಮೂಹ ಹೆಚ್ಚು ಆದ್ಯತೆ ನೀಡಬೇಕು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.


ಉಜಿರೆಯ ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರವು ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ಶೈಕ್ಷಣಿಕ ಸಾಂಸ್ಕೃತಿಕ ಉತ್ಸವದ ಐದನೇ ಆವೃತ್ತಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. 


ಕ್ರಿಯಾಶೀಲತೆ, ತಾರ್ಕಿಕ ಚಿಂತನೆ, ಸಂಯೋಜನಾತ್ಮಕ ಪರಿಣತಿ, ಸಂವಹನದ ಸಾಮರ್ಥ್ಯಗಳ ಜೊತೆಜೊತೆಗೆ ಹೊಸ ಕಾಲದಲ್ಲಿ ಮಾನ್ಯತೆ ಪಡೆದಿರುವ ಡಿಜಿಟಲ್ ತಾಂತ್ರಿಕತೆಯ ಸಮಗ್ರ ಅಂಶಗಳನ್ನು ತಿಳಿದುಕೊಳ್ಳಬೇಕು. ಡಿಜಿಟಲ್ ತಾಂತ್ರಿಕ ಜ್ಞಾನದ ಮೇಲಿನ ಹಿಡಿತವು ಸ್ಪರ್ಧಾತ್ಮಕ ಜಗತ್ತು ನಿರೀಕ್ಷಿಸುವ ವೃತ್ತಿಪರ ಸಾಮರ್ಥ್ಯ ಗಳಿಸಿಕೊಳ್ಳಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು. 

 

ಶೈಕ್ಷಣಿಕ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಗೆಗಳೊಂದಿಗೆ ತಾಂತ್ರಿಕ ಕೌಶಲ್ಯಗಳನ್ನು ಬೆಳಸಿಕೊಳ್ಳುವುದರ ಮೂಲಕ ವ್ಯಕ್ತಿತ್ವ  ನಿರ್ಮಿಸುವತ್ತಗಮನಹರಿಸಬೇಕು. ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚು ಅಳವಡಿಸಿಕೊಂಡಲ್ಲಿ ಉದ್ಯೋಗವಕಾಶಗಳು ತೆರೆದುಕೊಳ್ಳತ್ತವೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಅಶೋಕ್ ಎಸ್ ಆಲೂರ್ ಅಕ್ಯಾಡೆಮಿಕ್ ವಲಯವನ್ನು ಔದ್ಯಮಿಕ ರಂಗದ ನಿರೀಕ್ಷೆಗಳಿಗೆ ಅನುಗುಣವಾಗಿ ಪರಿವರ್ತಿಸಿ ಜ್ಞಾನ ಮತ್ತು ಕೌಶಲ್ಯಧಾರಿತ ಔದ್ಯೋಗಿಕ ಅವಕಾಶಗಳನ್ನು ವಿಸ್ತರಿಸುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

  

ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ ಎ ಕುಮಾರ ಹೆಗ್ಡೆ ಝೇಂಕಾರ ಉತ್ಸವದ 5ನೇ ಆವೃತ್ತಿಯ ಟ್ರೋಫಿಯನ್ನು ಅನಾವರಣಗೊಳಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಎಲ್ಲಾ ಬಗೆಯ ಮಿತಿಗಳ ನಡುವೆ ವಿನೂತನವಾಗಿ ಆಲೋಚಿಸು ಶೈಕ್ಷಣಿಕ ಮತ್ತು ವೃತ್ತಿಪರ ಸಾಧನೆಯನ್ನು ಸಾಧ್ಯವಾಗಿಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

  

ಎಸ್‌ಡಿಎಂ ಕಾಲೇಜಿನ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಸ್ನಾತ್ತಕೋತ್ತರ ಅಧ್ಯಯನ ರಸಾಯನಶಾಸ್ತç ವಿಭಾಗದ ಸಹಪ್ರಾದ್ಯಾಪಕಿ ಡಾ.ನೆಫಿಸತ್ ಪಿ ಹಾಗೂ ಸ್ನಾತ್ತಕೋತ್ತರ ಅಧ್ಯಯನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಬಿ ನಿರೂಪಿಸಿದರು. ಝೇಂಕಾರ 5ನೇ ಆವೃತ್ತಿಯ ಸಂಘಟನಾ ಕಾರ್ಯದರ್ಶಿ ಸುವೀರ್ ಜೈನ್ ವಂದಿಸಿದರು.

  

 ಯುವ ಪ್ರತಿಭಾನ್ವಿತರ ಕಲಾತ್ಮಕ ಅಭಿವ್ಯಕ್ತಿಗೆ ಅವಕಾಶ ನೀಡುವ ಸ್ಪರ್ಧೆಗಳು ಎರಡು ದಿನಗಳ ಅವಧಿಯಲ್ಲಿ ಜರುಗಲಿವೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top