ಎಸ್.ಡಿ.ಎಂ ಝೇಂಕಾರ ಐದನೇ ಆವೃತ್ತಿಯ ಉದ್ಘಾಟನಾ ಸಮಾರಂಭ
ಉಜಿರೆ: ಅಕ್ಯಾಡೆಮಿಕ್ ವಲಯವನ್ನು ಔದ್ಯಮಿಕ ರಂಗದ ನಿರೀಕ್ಷೆಗಳಿಗೆ ಅನುಗುಣವಾಗಿ ಪರಿವರ್ತಿಸಿ ಜ್ಞಾನ ಮತ್ತು ಕೌಶಲ್ಯಾಧಾರಿತ ಔದ್ಯೋಗಿಕ ಅವಕಾಶಗಳನ್ನು ವಿಸ್ತರಿಸುವ ಅನಿವಾರ್ಯತೆ ಇದೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಅಶೋಕ್ ಎಸ್.ಆಲೂರ್ ತಿಳಿಸಿದರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರವು ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ಶೈಕ್ಷಣಿಕ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ವಲಯದ ಪಠ್ಯಕ್ರಮ, ಪ್ರಾಯೋಗಿಕ ಸ್ವರೂಪವನ್ನು ಔದ್ಯಮಿಕ ಮತ್ತು ಸೇವಾ ಕ್ಷೇತ್ರಗಳ ಅಗತ್ಯಗಳಿಗೆ ಅನುಗುಣವಾಗಿ ಮಾರ್ಪಡಿಸಲು ಶಿಕ್ಷಣ-ಉದ್ಯಮಗಳೆರಡೂ ಸಂಯೋಜಿತಗೊಂಡು ಮುನಡೆಯಬೇಕು. ಹಾಗಾದಾಗ ಮಾತ್ರ ಉನ್ನತ ಶಿಕ್ಷಣ ವಲಯವನ್ನು ಪ್ರವೇಶಿಸುವ ವಿದ್ಯಾರ್ಥಿಗಳು ಹೊಸ ಕಾಲದ ಸ್ಪರ್ಧಾತ್ಮಕತೆಯನ್ನು ಎದುರಿಸಿ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯ ಎಂದರು.
ವಿಶ್ಲೇಷಣೆ, ವಿನ್ಯಾಸ, ಅಭಿವೃದ್ಧಿ, ಅನ್ವಯಿಸಿಕೊಳ್ಳುವ ಸಾಮರ್ಥ್ಯ, ಮೌಲ್ಯಮಾಪನದ ವಿವೇಚನಾತ್ಮಕ ಶಕ್ತಿಯ ಮೂಲಕ ವಿವಿಧ ಕ್ಷೇತ್ರಗಳು ನಿರೀಕ್ಷಿಸುವ ವೃತ್ತಿಪರ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಬೋಧಕ ವಲಯ ಮತ್ತು ಉದ್ಯೋಗಾವಕಾಶಗಳೊಂದಿಗಿನ ಉದ್ಯಮ ವಲಯ ಪರಸ್ಪರ ಸಹಭಾಗಿತ್ವದೊಂದಿಗೆ ಶೈಕ್ಷಣಿಕ ಕಲಿಕೆಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುವುದರ ಕಡೆಗೆ ಗಮನ ಹರಿಸಬೇಕು ಎಂದರು.
ಬೆಳವಣಿಗೆಯ ಹಾದಿಯಲ್ಲಿ ಅದೃಷ್ಟವು ಒಂದು ಸಾಂದರ್ಭಿಕ ಆಗುವಿಕೆ ಮಾತ್ರ. ಅದನ್ನಷ್ಟೇ ನೆಚ್ಚಿಕೊಳ್ಳದೇ ನಿರಂತರ ಪರಿಶ್ರಮ, ತೊಡಗಿಸಿಕೊಳ್ಳುವ ಬದ್ಧತೆ, ಹೊಸದನ್ನು ಅನ್ವೇಷಿಸುವ ಪ್ರಜ್ಞೆ ಇದ್ದಾಗ ಈ ಬಗೆಯ ಸಾಂದರ್ಭಿಕ ಆಗುವಿಕೆಯ ಸಾಧ್ಯತೆಯು ವ್ಯಕ್ತಿತ್ವದ ಬೆಳವಣಿಗೆಗೆ ಹೊಸ ಆಯಾಮ ನೀಡುತ್ತದೆ ಎಂದು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ