ಶಿವಮೊಗ್ಗ: ನಗರದ ಹವ್ಯಾಸಿ ರಂಗತಂಡಗಳ ಒಕ್ಕೂಟವಾದ ಕಲಾವಿದರು ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘವು ಕುವೆಂಪು ರಂಗಮಂದಿರದಲ್ಲಿ 2024ರ ಮಾರ್ಚ್ 26ರಿಂದ 28ರ ವರೆಗೆ ಮೂರು ದಿನಗಳ ಶಿವಮೊಗ್ಗ ರಂಗಹಬ್ಬ ಎಂಬ ಹೊಸ ನಾಟಕಗಳ ಉತ್ಸವವನ್ನು ಆಯೋಜಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಘಟನೆಯ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ಮತ್ತು ಪ್ರ. ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್, ಈ ನಾಟಕೋತ್ಸವದಲ್ಲಿ ಮೊದಲ ದಿನ ಮಾರ್ಚ್ 26ರಂದು ಸಂಜೆ 6:45ಕ್ಕೆ ಸಹ್ಯಾದ್ರಿ ಕಲಾ ತಂಡವು ನಾ. ಶ್ರೀನಿವಾಸ್ ಅವರು ರಚಿಸಿರುವ ಗಾಂಧಿಯ ಕನ್ನಡಕ ನಾಟಕವನ್ನು ಡಾ. ಲವ ಜಿ.ಆರ್. ನಿರ್ದೇಶನದಲ್ಲಿ ಅಭಿನಯಿಸಲಿದೆ ಎಂದರು.
ಮಾರ್ಚ್ 27ರಂದು ಸಂಜೆ 6:45ಕ್ಕೆ ರಂಗಬೆಳಕು ತಂಡವು ಶಿವಕುಮಾರ್ ಮಾವಲಿ ಅವರ ಪ್ರೇಮಪತ್ರದ ಆಫೀಸು ಮತ್ತು ಇತರೆ ಕತೆಗಳು ಹಾಗೂ ಶೇಕ್ಸ್‌ಪಿಯರ್ ಕೃತಿ ಆಧರಿಸಿದ ಒಲವಿನ ಜಂಕ್ಷನ್ ನಾಟಕವನ್ನು ಅಜಯ್ ನೀನಾಸಂ ಅವರ ನಿರ್ದೇಶನದಲ್ಲಿ ಅಭಿನಯಿಸಲಿದೆ. ಮಾರ್ಚ್ 28ರಂದು ಸಂಜೆ 6:45 ಕ್ಕೆ ಹೊಂಗಿರಣ ರಂಗತಂಡವು ಡಾ. ಸಾಸ್ವೆಹಳ್ಳಿ ಸತೀಶ್ ಅವರ ನಿರ್ದೇಶನದಲ್ಲಿ ಮಹಿಳಾ ಭಾರತ ನಾಟಕ ಪ್ರದರ್ಶಿಸಲಿದೆ. ಈ ನಾಟಕದ ಫ್ರೆಂಚ್ ಮೂಲ ಕೆ. ಮಾಧವನ್ ಅವರದ್ದಾಗಿದ್ದು, ಕನ್ನಡಕ್ಕೆ ಅಭಿಲಾಷಾ ಎಸ್. ಅನುವಾದಿಸಿದ್ದಾರೆ ಎಂದು ಮಾಹಿತಿ ನೀಡಿದರು.
ರಂಗಭೂಮಿ ದಿನಾಚರಣೆ ಪ್ರಯುಕ್ತ ರಂಗಗೀತೆಗಳ ಗಾಯನ ಕಾರ್ಯಕ್ರಮವೂ ಇರುತ್ತದೆ. ಒಂದು ನಾಟಕಕ್ಕೆ ಒಬ್ಬರಿಗೆ ಪ್ರವೇಶ ದರ ರೂ. 50 ನಿಗದಿ ಮಡಲಾಗಿದೆ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ