ರಾಮೇನಕೊಪ್ಪದಲ್ಲಿ ವಿಜೃಂಭಣೆಯ ಜಾತ್ರೋತ್ಸವ

Upayuktha
0


ಶಿವಮೊಗ್ಗ: ತಾಲೂಕಿನ ರಾಮೇನಕೊಪ್ಪ ಗ್ರಾಮದ ಶನೇಶ್ವರ ಸ್ವಾಮಿ ಮತ್ತು ಚಕ್ಕಾಪುರದಮ್ಮ ಮೂಲ ದೇವಾಲಯ ಹಾಗೂ ಮೊರಬ  ವೀರಭದ್ರ ಸ್ವಾಮಿ ದೇವಾಲಯದ 27ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  ಗಣ ಹೋಮ, ನವಗ್ರಹ ಹೋಮ, ಕುಂಭಾಭಿಷೇಕ,  ಕೆಂಡಾರ್ಚನೆ, ಮಹಾ ಮಂಗಳಾರತಿ ಮತ್ತಿತರೆ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿAದ ನಡೆದವು.


ಪವನ್ ಭಟ್  ನೇತೃತ್ವದಲ್ಲಿ ಹೊಸಕೊಪ್ಪದ ಕೃಷಿಕ ಎಸ್. ಕೇಶವಮೂರ್ತಿ ಮತ್ತು ದುರ್ಗಿಬಾಯಿ ದಂಪತಿ ಗಣಹೋಮ ನಡೆಸಿಕೊಟ್ಟರು. ನಂತರ ಕುಂಬಾಭಿಷೇಕ ನಡೆಯಿತು. ಮೂಲತಃ ಕೂಡ್ಲಿಗಿ ತಾಲೂಕಿನವರಾದ ನೀಲಗುಂದ ವಂಶಸ್ಥರು ಚಳ್ಳಕೆರೆಯಿಂದ ಶಿವಮೊಗ್ಗ ಮಾರ್ಗವಾಗಿ ತಂದಿದ್ದ ಮೊರಬ ವೀರಭದ್ರ ಸ್ವಾಮಿ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ವಾದ್ಯಮೇಳದೊಂದಿಗೆ ಉತ್ಸವ ಮೂರ್ತಿಗಳನ್ನು ಪಲಕ್ಕಿಯಲ್ಲಿ ಹೊತ್ತು ವೀರಗಾಸೆ ಒಡಪು ಹಾಡುತ್ತ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸಿ ದೇವಾಲಯದ ಆವರಣಕ್ಕೆ ತರಲಾಯಿತು.


ದೇವರಿಗೆ ಗಂಗಾಭಿಷೇಕದ ನಂತರ ವಿಶೇಷ ವಸ್ತç ಹಾಗೂ ಪುಷ್ಪದೊಂದಿಗೆ ಸಿಂಗರಿಸಲಾಯಿತು. ಅರ್ಚಕರು ಅಗ್ನಿಕುಂಡವನ್ನು ಸಿದ್ಧಗೊಳಿಸಿ ಸಾಂಪ್ರದಾಯಿಕ ಪೂಜಾವಿಧಿಗಳು ಮತ್ತು ನೈವೇದ್ಯೆ ಸಮರ್ಪಣೆ ಮಾಡಿದರು. ದೇವರÀ ಪಲಕ್ಕಿ ಹೊತ್ತವರು ಭಗವಂತನ ನಾಮಸ್ಮರಣೆ ಮಾಡುತ್ತ ಕೆಂಡದ ರಾಶಿ ಹಾಯ್ದರು. ಭಕ್ತರು ಇವರನ್ನು ಹಿಂಬಾಲಿಸಿದರು. ಪೂಜಾ ಹಾಗೂ ಸಕಲವಾದ್ಯ ಮೇಳದೊಂದಿಗೆ ದೇವಸ್ಥಾನಕ್ಕೆ ಮರಳಿದ ದೇವರ ಮೂರ್ತಿಗಳಿಗೆ ಮಹಾಮಂಗಳಾರತಿ ಮಾಡಲಾಯಿತು. ಭಕ್ತರು ದೇವಿಗೆ ಉಡಿ ತುಂಬಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.


ಹಿನ್ನೆಲೆ:

ರಾಮೇನಕೊಪ್ಪದ  ಶನೇಶ್ವರ ಸ್ವಾಮಿ ಮತ್ತು  ಚಕ್ಕಾಪುರದಮ್ಮ ಮೂಲ ದೇವಿಯ ಪೂಜೆ ಹಾಗೂ ದೇವಸ್ಥಾನದ ಉಸ್ತುವಾರಿ ಹೊಂದಿರುವ ರಘುಸ್ವಾಮಿ ಅವರು 10 ವರ್ಷದ ಬಾಲಕರಾಗಿದ್ದಾಗಲೇ ದೇವರು ಅವಗಾಹನೆಯಾಗುತ್ತಿತ್ತು. ನಂತರದ ದಿನಗಳಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಶಕ್ತಿ ಮತ್ತಷ್ಟು ಮೈಗೂಡಿತು.


ಇವರು ನಂಬಿದ ಭಕ್ತರ ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಅನಾರೋಗ್ಯ, ದುಷ್ಟ ಶಕ್ತಿಗಳ ಬಾಧೆ ಸೇರಿದಂತೆ ಮತ್ತಿತರೆ ತೊಂದರೆ, ಕಷ್ಟ- ಕಾರ್ಪಣ್ಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯಶಸ್ಸು ಕಂಡರು. ಇದರಿಂದಾಗಿ ಸ್ಥಳ ಮಹಿಮೆಯ ಮಹತ್ವ ಹೆಚ್ಚಾಗುತ್ತಾ ಸಾಗಿತು. ಅದರಲ್ಲೂ ರಘು ಸ್ವಾಮಿ ಅವರು ಪ್ರತಿ ಶನಿವಾರ ನೀಡುವ ಹೇಳಿಕೆಯ ಮಹಿಮೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಾ ಹೋಯಿತು.


ಇದರಿಂದಾಗಿ ಶಿವಮೊಗ್ಗ ಸುತ್ತಾ ಮುತ್ತಾ ಅಷ್ಟೇ ಅಲ್ಲ, ಬೆಂಗಳೂರು, ತುಮಕೂರು, ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ವಿಜಯಪುರ ಮತ್ತಿತರೆಡೆಯಿಂದ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top