ಟಾಟಾ ಎಐಎ ರೈಸಿಂಗ್ ಇಂಡಿಯಾ ಫಂಡ್ ಆರಂಭ

Upayuktha
0


ಮಂಗಳೂರು: ಭಾರತದ ಪ್ರಮುಖ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಟಾಟಾ ಎಐಎ ಲೈಫ್ ಇನ್ಶೂರೆನ್ಸ್ (ಟಾಟಾ ಎಐಎ) ಟಾಟಾ ಎಐಎ ರೈಸಿಂಗ್ ಇಂಡಿಯಾ ಫಂಡ್ ಪ್ರಾರಂಭಿಸಿದೆ. ಇದು ಭಾರತದ ಬೆಳವಣಿಗೆಯ ಕಥೆಯ ಪಾಲುದಾರರಾಗಲು ಗ್ರಾಹಕರಿಗೆ ವಿಶಿಷ್ಟ ಮಾರ್ಗವನ್ನು ತೆರೆಯುತ್ತಿದೆ. ಹೊಸ ಫಂಡ್ ಆಫರಿಂಗ್ (ಎನ್‍ಎಫ್‍ಓ) ಈ ತಿಂಗಳ 31ರವರೆಗೆ ಮುಕ್ತವಾಗಿರಿತ್ತದೆ. ಎನ್‍ಎಫ್‍ಓ ಅವಧಿಯಲ್ಲಿ ಪ್ರತಿ ಯೂನಿಟ್‍ಗೆ ರೂ.10 ಎನ್‍ಎವಿಯಂತೆ ನೀಡಲಾಗುತ್ತದೆ.


ರೈಸಿಂಗ್ ಇಂಡಿಯಾ ಫಂಡ್ ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುತ್ತಿರುವ ಪ್ರಮುಖ ವಲಯಗಳು ಮತ್ತು ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ. ಇವುಗಳಲ್ಲಿ ಮೂಲಸೌಕರ್ಯ, ಉತ್ಪಾದನೆ, ಬ್ಯಾಂಕಿಂಗ್, ಡಿಜಿಟಲ್, ರಕ್ಷಣೆ ಇತ್ಯಾದಿ ಕ್ಷೇತ್ರಗಳು ಸೇರಿವೆ. ಈ ಫಂಡ್ ಮಾರುಕಟ್ಟೆಯ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ ಭಾರತದ ಬೆಳವಣಿಗೆಯ ಹಾದಿಯಲ್ಲಿ ಎದುರಾಗುವ ವೈವಿಧ್ಯಮಯ ಅವಕಾಶಗಳನ್ನು ಬಳಸಿಕೊಳ್ಳಲು ಉತ್ತೇಜನ ನೀಡುತ್ತದೆ ಎಂದು ಪ್ರಕಟಣೆ ಹೇಳಿದೆ.


ಬಂಡವಾಳದ ಗಳಿಕೆಯನ್ನು ಸೃಷ್ಟಿಸಲು, ಫಂಡ್‍ನ ಹೂಡಿಕೆಯ 70%- 100% ಭಾಗವನ್ನು ಈಕ್ವಿಟಿ ಮತ್ತು ಈಕ್ವಿಟಿ-ಸಂಬಂಧಿತ ಸಾಧನಗಳಲ್ಲಿ ಹೂಡಿಕೆ ಮಾಡಲಾಗುವುದು ಮತ್ತು 0%- 30% ಭಾಗ ಸಾಲ ಮತ್ತು ಹಣದ ಮಾರುಕಟ್ಟೆ ಸಾಧನಗಳಲ್ಲಿ ಹೂಡಿಕೆ ಮಾಡಲಾಗುವುದು.


ಟಾಟಾ ಎಐಎ ಲೈಫ್ ತನ್ನ ವೈವಿಧ್ಯಮಯ ಯುನಿಟ್ ಲಿಂಕ್ಡ್ ಉತ್ಪನ್ನಗಳೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಸತತವಾಗಿ ಪರಿಚಯಿಸುತ್ತಾ ಬಂದಿದೆ. ಈ ಕೊಡುಗೆಗಳು ಮಾನದಂಡಗಳನ್ನು ಸ್ಥಿರವಾಗಿ ಮೀರುತ್ತಾ ಬಂದಿದ್ದು, ಉತ್ತಮ ಆದಾಯವನ್ನು ನೀಡುತ್ತದೆ. ಕೆಳಗಿನ ಕೋಷ್ಟಕವು ವೈವಿಧ್ಯಮಯ ಥೀಮ್‍ಗಳಾದ್ಯಂತ ಬಹು ಟಾಟಾ ಎಐಎ ಯುಲಿಪ್‍ಗಳ ಕಾರ್ಯಕ್ಷಮತೆಯನ್ನು ತೋರಿಸುತ್ತದೆ ಎಂದು ಪ್ರಕಟಣೆ ವಿವರಿಸಿದೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top