ಮಂಗಳೂರು: ಇಎಎಸ್‍ಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಕೇರ್ ಹೆಲ್ತ್ ಇನ್ಶೂರೆನ್ಸ್ ನಿನ್ನೆ ಕಾರ್ಪೋರೇಟ್ ಏಜೆನ್ಸಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಒಪ್ಪಂದ ಗ್ರಾಹಕರಿಗೆ ಅನುಕೂಲಕರ ಹಣಕಾಸು ಪರಿಹಾರಗಳ ಶ್ರೇಣಿಯನ್ನು ಸಮೃದ್ಧಗೊಳಿಸುವ ಗುರಿಯನ್ನು ಹೊಂದಿದೆ.
ಈ ಮೈತ್ರಿಯು ಗ್ರಾಹಕ ಕೇಂದ್ರಿತ ಮತ್ತು ಪ್ರಗತಿಯ ವಾತಾವರಣವನ್ನು ಬೆಳೆಸಲು ಬದ್ಧವಾಗಿರುವ ಎರಡು ಘಟಕಗಳನ್ನು ಒಂದುಗೂಡಿಸುತ್ತದೆ. ಈ ಒಪ್ಪಂದವು ಇಎಎಸ್‍ಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸುವ ಮತ್ತು ಬ್ಯಾಂಕಿಂಗ್ ಸೌಲಭ್ಯ ಇಲ್ಲದ ಮತ್ತು ಕಡಿಮೆ ಬ್ಯಾಂಕಿಂಗ್ ಸೌಲಭ್ಯ ಹೊಂದಿದ ಜನಸಮುದಾಯಕ್ಕೆ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಬ್ಯಾಂಕ್ ಎಂಡಿ ಮತ್ತು ಸಿಇಓ ಕೆ.ಪಾಲ್ ಥಾಮಸ್ ಮತ್ತು ಕೇರ್ ಹೆಲ್ತ್ ಎಂಡಿ ಅನುಜ್ ಗುಲಾಟಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಪಾಲುದಾರಿಕೆಯ ಮೂಲಕ ಕೇರ್ ಹೆಲ್ತ್ ಇನ್ಶೂರೆನ್ಸ್‍ನ ವಿಶೇಷವಾದ ಮತ್ತು ನವೀನ ಶ್ರೇಣಿಯ ಆರೋಗ್ಯ ವಿಮಾ ಪರಿಹಾರಗಳನ್ನು ಬ್ಯಾಂಕ್ ತನ್ನ ವ್ಯಾಪಕವಾದ ಗ್ರಾಹಕ ಜಾಲಕ್ಕೆ ವಿಸ್ತರಿಸುತ್ತದೆ. ಈ ಉತ್ಪನ್ನಗಳು ಬ್ಯಾಂಕ್‍ನ ಗ್ರಾಹಕರ ಚಿಲ್ಲರೆ ಮತ್ತು ಗುಂಪು ವಿಭಾಗಗಳೆರಡನ್ನೂ ಪೂರೈಸುತ್ತವೆ. ಈ ಸಹಯೋಗವು ಬ್ಯಾಂಕಿನ ಅಸ್ತಿತ್ವದಲ್ಲಿರುವ ತಂತ್ರಜ್ಞಾನ ಚಾಲಿತ ಮತ್ತು ಸೂಕ್ತವಾದ ಸೇವೆಗಳ ಶ್ರೇಣಿಯನ್ನು ಹೆಚ್ಚಿಸುತ್ತದೆ, ಗ್ರಾಹಕರಿಗೆ ಅವರ ಆರೋಗ್ಯ ವಿಮಾ ಅಗತ್ಯತೆಗಳಿಗೆ ಸೂಕ್ತವಾದ ಸಮಗ್ರ ಪರಿಹಾರವನ್ನು ಒಂದೇ ಸೂರಿನಡಿಯಲ್ಲಿ ಒದಗಿಸುತ್ತದೆ ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ