ಎನ್‍ಐಟಿಕೆಗೆ ಕ್ವಿಜ್ ಪ್ರಶಸ್ತಿ

Upayuktha
0


ಮಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರ ಪ್ರವರ್ತಿಸಿದ ಸ್ವಾಯತ್ತ ಸಂಸ್ಥೆಯಾದ ಐಟಿ ಶಿಕ್ಷಣ ಮಾನದಂಡಗಳ ಮಂಡಳಿ (ಬೈಟ್ಸ್) ಸಂಯುಕ್ತವಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ 15ನೇ ಆವೃತ್ತಿಯ ಟಿಸಿಎಸ್ ಟೆಕ್ ಬೈಟ್ಸ್ ಕ್ವಿಜ್ ಸ್ಪರ್ಧೆಯ ಮಂಗಳೂರು ಪ್ರಾದೇಶಿಕ ಫೈನಲ್‍ನಲ್ಲಿ ಸುರತ್ಕಲ್ ಎನ್‍ಐಟಿಕೆಯ ಕೌಶಿಕ್ ಎಸ್.ನಂದನ್ ಪ್ರಶಸ್ತಿ ಜಯಿಸಿದ್ದಾರೆ.


ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪುರುಷೋತ್ತಮ ಎಚ್.ಡಿ ರನ್ನರ್ ಅಪ್ ಸ್ಥಾನ ಗೆದ್ದಿದ್ದಾರೆ. ವಿಜೇತರು ಕ್ರಮವಾಗಿ ರೂ 12,000 ಮತ್ತು ರೂ 10,000 ಮೌಲ್ಯದ ಉಡುಗೊರೆ ವೋಚರ್‍ಗಳನ್ನು ಗೆದ್ದಿದ್ದಾರೆ. ಫೈನಲ್ ತಲುಪಿದ ಎಲ್ಲಾ ಸ್ಪರ್ದಿಗಳಿಗೂ ಉಡುಗೊರೆ ವೋಚರ್‍ಗಳನ್ನು ನೀಡಲಾಯಿತು ಎಂದು ಟಿಸಿಎಸ್ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮತ್ತು ಬೈಟ್ಸ್ ಅಧ್ಯಕ್ಷ ಎಸ್.ಸಡಗೋಪನ್ ಹೇಳಿದ್ದಾರೆ.


ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎಸ್.ಇಂಜಗನೇರಿ ರವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ವಿಜೇತರು ಏಪ್ರಿಲ್ 5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಫೈನಲ್‍ನಲ್ಲಿ ಮಂಗಳೂರನ್ನು ಪ್ರತಿನಿಧಿಸಲಿದ್ದಾರೆ.


ವಿದ್ಯಾರ್ಥಿಗಳ ಜ್ಞಾನ ಮತ್ತು ಅರಿವನ್ನು ಹೆಚ್ಚಿಸುವುದು ಮತ್ತು ತಂತ್ರಜ್ಞಾನದ ತೀವ್ರ ಉದ್ಯಮದಲ್ಲಿ ಸ್ಪರ್ಧಿಸಲು ಅವರನ್ನು ಸಕ್ರಿಯಗೊಳಿಸುವುದು ಇದರ ಉದ್ದೇಶವಾಗಿದೆ. ಟಿಸಿಎಸ್ ಟೆಕ್ ಬೈಟ್ಸ್ ನ ಪ್ರಾದೇಶಿಕ ಫೈನಲ್‍ಗಳನ್ನು ಮಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ತುಮಕೂರು ಮತ್ತು ಬೆಂಗಳೂರು ಸೇರಿದಂತೆ ಕರ್ನಾಟಕದ ಆರು ನಗರಗಳಲ್ಲಿ ನಡೆಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top