ಉಜಿರೆ: ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರ ಆಯೋಜಿಸಿದ ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪರ್ವ ಝೇಂಕಾರ ಪುತ್ತೂರಿನ ವಿವೇಕಾನಂದ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಕ್ಯಾನ್ವಾಸ್ ಪೈಂಟಿಂಗ್, ಮಿಸ್ಟರ್ ಆ್ಯಂಡ್ ಮಿಸ್ ಝೇಂಕಾರ , ಗಲ್ಲಿ ಕ್ರಿಕೆಟ್ ಸೇರಿದಂತೆ ಒಟ್ಟು ಹತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಕಾಲೇಜುಗಳಿಂದ ಒಟ್ಟು 40 ತಂಡಗಳು ಮತ್ತು 457 ವಿದ್ಯಾರ್ಥಿಗಳು ಸ್ಪರ್ಧಾರ್ಥಿಗಳಾಗಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸ್ಪರ್ಧೆಗಳೊಂದಿಗೆ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸುವರ್ಣ ಪ್ರತಿಷ್ಟಾನ ಬೆಳ್ತಂಗಡಿಯ ಅಧ್ಯಕ್ಷ ಹಾಗೂ ಜೆಸಿಐ ಇಂಡಿಯಾದ ಮಾಜಿ ರಾಷ್ಟ್ರೀಯ ನಿರ್ದೇಶಕರಾದ ಜೆಸಿ. ಸಂಪತ್ ಬಿ. ಸುವರ್ಣ ವಿಜೇತರಿಗೆ ಬಹುಮಾನ ವಿತರಿಸಿದರು.
ಸ್ಪರ್ಧೆಗಳ ವಿಜೇತರ ವಿವರ
1.ಮಾಕ್ ಪ್ರೆಸ್
ಅಭಿರಾಮ್, ವಿವೇಕಾನಂದ ಕಾಲೇಜು ಪುತ್ತೂರು(ಪ್ರಥಮ)
ತನುಶ್ರೀ, ಜಿ ಎಸ್ ಜಿ ಸಿ ಕಾಲೇಜು ವಾಮನಪದವು (ದ್ವಿತೀಯ)
2.ಕಲರ್‌ಫುಲ್ ಕ್ಯಾನ್ವಾಸ್
ಅನಿರುದ್ಧ್ , ಯುನಿವರ್ಸಿಟಿ ಕಾಲೇಜು ಕೊಣಾಜೆ (ಪ್ರಥಮ)
ಕೀರ್ತನ್, ಶ್ರೀ ಗುರುದೇವ ಕಾಲೇಜು ಬೆಳ್ತಂಗಡಿ (ದ್ವಿತೀಯ)
3.ಪ್ರೊ ಪ್ರೆಸೆಂಟರ್
ಹರಿಪ್ರಸಾದ್, ವಿವೇಕಾನಂದ ಕಾಲೇಜು ಪುತ್ತೂರು(ಪ್ರಥಮ)
ಸ್ನೇಹ .ಎಸ್ ನಾಯ್ಕ , ಪೂರ್ಣಪ್ರಜ್ಞಾ ಕಾಲೇಜು ಉಡುಪಿ (ದ್ವಿತೀಯ)
4.ಗ್ರೂಪ್ ಡಾನ್ಸ್
ಪೂರ್ಣಪ್ರಜ್ಞಾ ಕಾಲೇಜು ಉಡುಪಿ(ಪ್ರಥಮ)
ಎಂಪಿಎಂ ಕಾಲೇಜು ಕಾರ್ಕಳ(ದ್ವಿತೀಯ)
5. ಫ್ಯಾಷನ್ ಪೆರೇಡ್
ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಗಳೂರು(ಪ್ರಥಮ)
ಪೂರ್ಣಪ್ರಜ್ಞಾ ಕಾಲೇಜು ಉಡುಪಿ (ದ್ವಿತೀಯ)
6.ಕ್ವಿಜ್
ಕ್ಷಿತಿಶಾ ಸಿ.ಎಸ್ , ಜೀವಿತ್ ರೈ, ಎಸ್.ಡಿ.ಎಂ. ಲಾ ಕಾಲೇಜು ಮಂಗಳೂರು(ಪ್ರಥಮ)
ಸುಲಕ್ಷಣ ಕೆ , ಪ್ರಣಮ್ ಶೆಟ್ಟಿ .ಎಂ, ವಿವೇಕಾನಂದ ಕಾಲೇಜು ಪುತ್ತೂರು (ದ್ವಿತೀಯ)
7. ಗಲ್ಲಿ ಕ್ರಿಕೆಟ್
ಜಿ ಎಫ್ ಜಿ ಸಿ ಬೆಳ್ತಂಗಡಿ(ಪ್ರಥಮ)
ಯುನಿವರ್ಸಿಟಿ ಕಾಲೇಜು ಕೊಣಾಜೆ (ದ್ವಿತೀಯ)
ಬೆಸ್ಟ್ ಬ್ಯಾಟ್ಸ್ಮನ್: ಮನೀಶ್ ಪಿ.ಎಂ, ಮಂಗಳೂರು ಯುನಿವರ್ಸಿಟಿ
ಬೆಸ್ಟ್ ಬೌಲರ್ : ಪ್ರಜ್ವಲ್ ಗೌಡ, ಜಿ ಎಫ್ ಜಿ ಸಿ ಬೆಳ್ತಂಗಡಿ
8. ರೀಲ್ ಮೇಕಿಂಗ್
ಯೋಶಿತ್, ವಿವೇಕಾನಂದ ಕಾಲೇಜು ಪುತ್ತೂರು (ಪ್ರಥಮ)
ಆದಿತ್ಯ, ಸೈಂಟ್ ಫಿಲೋಮಿನಾ ಪುತ್ತೂರು (ದ್ವಿತೀಯ)
9. ಸ್ಪಾಟ್ ಫೋಟೋಗ್ರಫಿ
ವನೀಶ್. ವಿ.ಎಸ್ ಬಂಗೇರ , ಸೈಂಟ್ ಅಗ್ನೆಸ್ ಕಾಲೇಜು ನಾರಾವಿ (ಪ್ರಥಮ)
ಶ್ರೇಯಸ್ , ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ದ್ವಿತೀಯ)
10. ಮಿಸ್ಟರ್ ಆ್ಯಂಡ್ ಮಿಸ್ ಝೇಂಕಾರ
ಮಿಸ್ಟರ್ ಝೇಂಕಾರ : ಅಭಿರಾಮ್, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಗಳೂರು
ಮಿಸ್ ಝೇಂಕಾರ : ನೇಹಾ ದೇವಾಡಿಗ , ರೋಷಿನಿ ನಿಲಯ ಕಾಲೇಜು ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ