ಶಿವರಾತ್ರಿ: ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಕೋಡಂದೂರು ಅಮ್ಮ ಮಗಳ ದ್ವಂದ್ವ ಗಾಯನ

Upayuktha
0

ತ್ತೂರ ಭಕ್ತರಲ್ಲಿ ಮನೆ ಮಾಡಿದ ಪುತ್ತೂರು ಒಡೆಯನ ಮಹಾಶಿವರಾತ್ರಿಯ ಸಂಭ್ರಮದಲ್ಲಿ ಸ್ವರ ಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ಮತ್ತು ಸಿಂಚನ ಲಕ್ಷ್ಮಿ ಕೋಡಂದೂರ್ ಅಮ್ಮ ಮಗಳ ದ್ವಂದ್ವ ಗಾಯನವೂ ನಟರಾಜ ವೇದಿಕೆಯಲ್ಲಿ ಭಕ್ತರ ಮನಸೆಳೆಯಿತು. ಮಹಾ ಮಹಿಮನ ಆರಾಧನೆಯಲ್ಲಿ ಮಗ್ನರಾದ ಶಿವಭಕ್ತ ವೃಂದಕ್ಕೆ ಸಂಗೀತ ಕಲಾ ಸೇವೆಯನ್ನು ನೀಡಿ ಮನಸೆಳೆದರು.


ಜನಪ್ರಿಯ ಶಿವ ಗೀತೆಗಳು ಸುಮಧುರ ಗೀತೆಗಳನ್ನು ಹಾಡಿ ತನ್ನ ಹೆಜ್ಜೆ ಗುರುತಿನಿಂದ ಎಲ್ಲರ ಮೆಚ್ಚುಗೆ ಗಳಿಸಿದರು ಶಿವನೆಂದರೆ ದೈವಗಳಿಗೆ ಮಹಾದೇವ ಸತ್ಯ ಸತ್ವಗಳ ಅನುಭವ ಇಂತಹ ಶಿವನ ಕುರಿತು ಹತ್ತಕ್ಕೂ ಹೆಚ್ಚು ಕವಿತೆಗಳ ಮಧುರ ಕಾವ್ಯ ಗುಚ್ಚವಿದು ಸುಮಧುರ ಹಿನ್ನೆಲೆ ಪಕ್ಕ ವಾದ್ಯಗಳೊಂದಿಗೆ ಹೆಣೆದ ಸುಂದರ ಗುಚ್ಚವಿದು. ಶಿವರಾತ್ರಿ ಸಂಭ್ರಮ ಶಿವಾನಂದ ವರ್ಣ ರಂಜಿತ ಗೀತಾಂಜಲಿ ವರ್ಣದ ರೇವತಿರಾಗದ ಆದಿತಾಳ ಡಾ. ನಾಗಮಣಿ ಶ್ರೀನಾಥ್ ರಚನೆಯ ಓಂ ಶಂಭೋ ಮಹಾದೇವ ಹಾಡನ್ನು ಹಾಡಿದರು.


 


ರಾಗ ಕನಕಾಂಗಿ ಚತುರಶ್ರ ರೂಪಕ ತಾಳ ಡಾ. ಬಾಲಮುರಳಿ ಕೃಷ್ಣ ರಚನೆ ಶ್ರೀಶ ಪುತ್ರಾಯ ಹಾಡನ್ನು ಸುಂದರವಾಗಿ ಪ್ರಸ್ತಾವಳಿಸಿದರು. ತದನಂತರ ವೆಂಕಟ ಕವಿ ರಚನೆ ಕಲ್ಯಾಣ ರಾಮ ಆದಿ ತಾಳ ಹಾಡಿ ರಂಜಿಸಿದರು


ರಾಗ ರೇವಾಗುಪ್ತಿ ಮಿಶ್ರ ಚಾಪು ತಾಳದ ಸ್ವಾತಿ ತಿರುನಾಳ್ ರಚನೆಯ ಗೋಪಾಲಕ ಪಾಹಿಮಾನ್ ಹಾಡನ್ನು ಹಾಡಿದರು.....


 ಶಿವರಂಜನ್ ಭಜನ್ ಶಿವಸ್ತುತಿ ಶಿವಾಯ ಸಂಗೀತದ ನಾದ ಸುತ್ತಾಟ ರಾಗ ಚೌಳಿ ಆದಿತಾಳ ಅಣ್ಣಮಚಾರ್ಯ ರಚನೆಯ ಬ್ರಹ್ಮಮೋಕ್ಕಟೆ ಸರ್ವರನ್ನು ಬಾ.. ಎಂದು ಕರೆದಂತಿತ್ತು. ರಾಗ ಬೃಂದಾವನ ರಾಗದ ಸಾರಂಗ ಡಾ. ಬಾಲಮುರಳಿ ಕೃಷ್ಣ ರಚನೆ ತಿಲ್ಲಾನ ಹಾಡಿನೊಂದಿಗೆ ಸಮಾಪ್ತಿಯಾಯಿತು.


ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟ ದ.ಕ ಉಡುಪಿ ಅವರ ಸಹಭಾಗಿತ್ವದಲ್ಲಿ ನಡೆಯಿತು. ಹಿಮ್ಮೇಳನದಲ್ಲಿ ಕೊಳಲು ವಾದಕರಾಗಿ ವಿದ್ವಾನ್ ಕೃಷ್ಣ ಗೋಪಾಲ್, ಮೃದಂಗ ವಾದಕರಾಗಿ ವಿದ್ವಾನ್ ಡಾ. ಶ್ರೀ ಪ್ರಕಾಶ್ ತಬಲ ವಾದಕರಾಗಿ ವಿದ್ವಾನ್ ಸಾಯಿ ನಾರಾಯಣ ಕಲ್ಮಡ್ಕ , ಶ್ರೀ ರಕ್ಷಾ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು.


ಬರಹ: ಕುಮಾರ್ ಪೆರ್ನಾಜೆ ಪುತ್ತೂರು

ಪೆರ್ನಾಜೆ ಮನೆ ಪೆರ್ನಾಜೆ ಅಂಚೆ ಪುತ್ತೂರು ತಾಲೂಕು ದ. ಕ

ಮೋ: 9480240643



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top