'ಝೆಂಕಾರ 5' ಸಮಾರೋಪ ಸಮಾರಂಭ
ಉಜಿರೆ: ಭಾರತದ ವೈವಿಧ್ಯಮಯ ಸಂಸ್ಕೃತಿಯ ಅಂತಃಸತ್ವವನ್ನು ಸಮಗ್ರವಾಗಿ ತಿಳಿದುಕೊಂಡರೆ ಕಲಾರಂಗದಲ್ಲಿ ವಿನೂತನ ಕಲಾಪ್ರತಿಭೆಯನ್ನು ಅನಾವರಣಗೊಳಿಸಿ ವಿಶೇಷ ಸಾಧನೆ ಸಾಧ್ಯವಾಗಿಸಿಕೊಳ್ಳಬಹುದು ಎಂದು ಎಂದು ಬೆಳ್ತಂಗಡಿಯ ಸುವರ್ಣ ಪ್ರತಿಷ್ಟಾನದ ಅಧ್ಯಕ್ಷ, ಜೆ.ಸಿ.ಐ ಇಂಡಿಯಾದ ಮಾಜಿ ನಿರ್ದೇಶಕ ಜೆ.ಸಿ. ಸಂಪತ್.ಬಿ ಸುವರ್ಣ ಹೇಳಿದರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಎರಡು ದಿನಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ ಝೇಂಕಾರ ಸೀಸನ್ ಐದರ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಚಾಂಪಿಯನ್‌ಷಿಪ್ ಟ್ರೋಫಿ ವಿತರಿಸಿ ಮಾತನಾಡಿದರು.
ಭಾರತದ ಸಾಂಸ್ಕೃತಿಕ ಅರಿವಿನೊಂದಿಗೆ ಇದ್ದಾಗ ವಿವಿಧ ಬಗೆಯ ಕಲಾತ್ಮಕತೆಯನ್ನು ಅರ್ಥಪೂರ್ಣಗೊಳಿಸಲು ಸಾಧ್ಯ. ಕಲಾತ್ಮಕ ಸ್ಪರ್ಧೆಗಳಲ್ಲಿ ಸೋಲುಗಳನ್ನು ಸವಾಲನ್ನಾಗಿ ಸ್ವೀಕರಿಸುವ ಮನೋಭಾವದೊಂದಿಗೆ ಇರಬೇಕು. ಹಾಗಾದಾಗ ಮಾತ್ರ ವಿಶೇಷ ಯಶಸ್ಸು ದಕ್ಕುತ್ತದೆ. ನಮ್ಮ ಜೀವನವನ್ನು ಸರಿಯಾದ ದಾರಿಯಲ್ಲಿ ನಾವು ರೂಪಿಸಿಕೊಳ್ಳಬೇಕು. ಭಾರತ ದೇಶಕ್ಕೆ ಪ್ರತಿಭಾನ್ವಿತ ಕಲಾವಿದರು ಮತ್ತು ಶ್ರೇಷ್ಟ ಸಾಧಕರನ್ನು ಪರಿಚಯಿಸಲು 'ಝೇಂಕಾರ'ದಂತಹ ಕಾರ್ಯಕ್ರಮಗಳು ಸಹಾಯಕವಾಕವಾಗಿದೆ ಎಂದು ನುಡಿದರು.
ಸೋಲಿರಲಿ ಗೆಲುವಿರಲಿ ಜೀವನದ ಹಾದಿಯಲಿ ಪ್ರತೀ ಪಾಠಗಳು ಬೆಳಕಾಗಲಿ. ಝೇಂಕಾರದಂತಹ ಉತ್ಸವಗಳು ಇದಕ್ಕೆ ಪೂರಕವಾಗಿರಲಿ ಎಂದು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿದರು.
ಉಪ ಪ್ರಾಂಶುಪಾಲ ಎಸ್.ಎನ್. ಕಾಕತ್ಕರ್, ಸಂಘಟಕ ಕಾರ್ಯದರ್ಶಿ ಸುವೀರ್ ಜೈನ್, ಪಿ.ಜಿ ಡೀನ್ ಡಾ.ವಿಶ್ವನಾಥ.ಪಿ ಹಾಗೂ ನಿವೃತ್ತ ಪ್ರಾಧ್ಯಾಪಕ ಬಿ.ಎಸ್ ಹೊಳ್ಳ ಉಪಸ್ಥಿತರಿದ್ದರು. ವಿವಿಧ ಕಾಲೇಜುಗಳಿಂದ ಭಾಗವಹಿಸಿದ ವಿದ್ಯಾರ್ಥಿಗಳು ಅಭಿಪ್ರಾಯ ತಿಳಿಸಿದರು.
ವಿದ್ಯಾರ್ಥಿ ಶಾಮ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕಿ ಡಾ. ಧನೇಶ್ವರಿ ಸ್ವಾಗತಿಸಿ, ಪ್ರಾಧ್ಯಾಪಕ ಡಾ.ನವೀನ್ ಕುಮಾರ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ