ಇಡೀ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಗ್ಯಾರಂಟಿ: ಕ್ಯಾ. ಬೃಜೇಶ್ ಚೌಟ

Chandrashekhara Kulamarva
0
'ದೇಶವನ್ನು ನಂಬರ್ ವನ್ ಮಾಡುವುದೇ ನಮ್ಮ ಗ್ಯಾರಂಟಿ'



ಮಂಗಳೂರು: ಇಡೀ ದೇಶಕ್ಕೆ ಇರುವ ದೊಡ್ಡ ಗ್ಯಾರಂಟಿ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಎಲ್ಲಾ ಗ್ಯಾರಂಟಿಗಳಿಗೂ ಗ್ಯಾರಂಟಿ ಪ್ರಧಾನಿ ಮೋದಿ ಎಂದು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದರು.



ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿ, ನರೇಂದ್ರ ಮೋದಿಯವರ ಸಾಧನೆಗಳು, 10 ವರ್ಷದಲ್ಲಿ ದೇಶದಲ್ಲಿ ಅವರು ಮಾಡಿರುವ ಕೆಲಸ. ಮುಂದಿನ 25 ವರ್ಷಗಳ ಕಾಲ ವಿಕಸಿತ ಭಾರತದ ಕಲ್ಪನೆ, ಎಲ್ಲರೂ ಒಟ್ಟಾಗಿ ಒಂದಾಗಿ ಸೇರಿಕೊಂಡು ದೇಶದ ಅಭಿವೃದ್ಧಿ ಮಾಡಬೇಕು ಎಂಬ ಪರಿಕಲ್ಪನೆ. ಭಾರತ ದೇಶವನ್ನು ನಂಬರ್ ಒನ್ ಮಾಡಬೇಕು ಅನ್ನೋದೇ ನಮ್ಮ ಗ್ಯಾರೆಂಟಿ‌ ಎಂದು ಹೇಳಿದರು‌.‌



ಕಾಂಗ್ರೆಸ್‌ನ ಗ್ಯಾರೆಂಟಿ ಯಾವ ರೀತಿ ಆಗುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಕಳೆದ ಒಂದು ವರ್ಷದಿಂದ ಯಾವುದೇ ಅನುದಾನ, ಯಾವುದೇ ಶಿಲಾನ್ಯಾಸ ಮಾಡದ ಮುಖ್ಯಮಂತ್ರಿ ಅಂದ್ರೆ ಅದು ಸಿದ್ದರಾಮಯ್ಯ‌. ಯಾವುದೇ ಹೊಸ ಯೋಜನೆಗೆ ಶಿಲಾನ್ಯಾಸ ಮಾಡದ ಜಿಲ್ಲಾ ಉಸ್ತುವಾರಿ ಸಚಿವ ಅಂದ್ರೆ ಅದು ದಿನೇಶ್ ಗುಂಡೂರಾವ್. ಗ್ಯಾರಂಟಿಗೆ ದುಡ್ಡು ಕೊಟ್ಟು ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲದ ಸ್ಥಿತಿಯಾಗಿದೆ.



ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿದೆ. 5 ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ದೇಶಕ್ಕೆ ಕೊಟ್ಟಿದೆ.‌ ಇಂತಹ ಪ್ರಗತಿಶೀಲ ಜಿಲ್ಲೆಯನ್ನ ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದೇ ನನ್ನ ಭಾಗ್ಯ. ಪ್ರಧಾನ ಮಂತ್ರಿಗಳ ವಿಕಸಿತ ಭಾರತದ ಕಲ್ಪನೆಯಡಿಯಲ್ಲಿ ದೇಶದ ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತೇನೆ ಎಂದು ಚೌಟ ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top