ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2, ರೇಂಜರ್ ಮತ್ತು ರೋವರ್ ಹಾಗೂ ಭಾರತೀಯ ಯುವ ರೆಡ್ ಕ್ರಾಸ್ ಇದರ ಸಹಯೋಗದಲ್ಲಿ ನಿಮಾನ್ಸ್ ಬೆಂಗಳೂರು ಮತ್ತು ಯುವ ಸ್ಪಂದನ ದ.ಕ. ಸಂಘಟಿಸಿದ "ಒಂದು ದಿನದ ಜೀವನ ಕೌಶಲ್ಯ ತರಬೇತಿ" ಕಾರ್ಯಕ್ರಮವನ್ನು ಇಂದು (ಮಾ.25) ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಕಾಂತ್ [ಜೀವನ ಕೌಶಲ್ಯ ತರಬೇತುದಾರರು ಮತ್ತು ಮೇಲ್ವಿಚಾರಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು] ಮತ್ತು ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ.ರಾಜೇಶ್ವರಿ ಎಚ್.ಎಸ್. [ಸ.ಪ್ರ.ದ. ಕಾ. ಬೆಳ್ತಂಗಡಿ, ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯ ವಿಭಾಗ] ಇವರು ಆಗಮಿಸಿದ್ದರು.
ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ಇವರು ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಳಿಕ ಪ್ರೊ. ರಾಜೇಶ್ವರಿ ಎಚ್ ಎಸ್ ಇವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ ಮಾಧವ ಎಂ ಇವರು ಅಧ್ಯಕ್ಷತೆ ವಹಿಸಿದ್ದರು. ಎಲ್ಲಾ ಘಟಕದ ಸ್ವಯಂ ಸೇವಕರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಡಾ| ಅವಿತಾ ಮರಿಯ ಕ್ವಾಡ್ರಸ್, ವಿದ್ಯಾರ್ಥಿ ಪ್ರತಿಭಾ ವೇದಿಕೆಯ ಸಂಚಾಲಕರಾದ ಡಾ|ವೈಶಾಲಿ ಯು., ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ. ಸಂತೋಷ್ ಪ್ರಭು ಹಾಗು ಪ್ರೊ. ಚಿತ್ರಾ ಪಡಿಯಾರ್, ರೆಡ್ ಕ್ರಾಸ್ ನ ಸಂಚಾಲಕರಾದ ಡಾ|ವೈಶಾಲಿ ಯು ಹಾಗೂ ಪ್ರೊ.ಶೇಖರ್ ಕೆ, ರೋವರ್ಸ್ ಮತ್ತು ರೇಂಜರ್ಸ್ ನ ಸಂಚಾಲಕ ಪ್ರೊ. ಆಂಜನೇಯ ಎಂ.ಎನ್ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕು.ಅಂಬಿಕಾ ಸ್ವಾಗತಿಸಿ, ಕು.ಹರಿಣಾಕ್ಷಿ ಧನ್ಯವಾದವಿತ್ತರು ಹಾಗೂ ದೀನಕೃಪಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ