40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಮಾಲಾಡಿ ಕೋರ್ಟ್ ಪಾರ್ಕ್ ಉದ್ಘಾಟನೆ

Upayuktha
0


ಕೊಟ್ಟಾರ ಚೌಕಿ: ಬಂಗ್ರಕೂಳೂರು ವಾರ್ಡ್‍ಗೆ ಒಳಪಟ್ಟ ಮಾಲಾಡಿಕೋರ್ಟ್ ಬಡಾವಣೆಯಲ್ಲಿ ನಿರ್ಮಾಣಗೊಂಡ ಪಾರ್ಕ್‍ನ ಉದ್ಘಾಟನೆ ಬುಧವಾರ ನಡೆಯಿತು.


ಮಂಗಳೂರು ಉತ್ತರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಉದ್ಘಾಟಿಸಿ ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಅನುದಾನ ಅಂದಾಜು 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.


ಈ ಹಿಂದಿನ ನನ್ನ ಶಾಸಕತ್ವದ ಅವಧಿಯಲ್ಲಿ ಇದಕ್ಕೆ ಮುಡಾದ ವತಿಯಿಂದ ಅನುದಾನ ಮೀಸಲಿಡಲಾಗಿತ್ತು. ಅನೇಕ ಕಿರು ಪಾರ್ಕ್  ಗಳನ್ನು ನಿರ್ಮಿಸಿ ಹಸಿರು ವಾತಾವರಣ ಹಾಗೂ ಕೆರೆಗಳ ಪುನರುಜ್ಜೀವನಕ್ಕೆ ಒತ್ತು ನೀಡಿ ಕಾಮಗಾರಿಗಳು ನಡೆದಿವೆ ಎಂದರು.


ಕೊಟ್ಟಾರಚೌಕಿಯಲ್ಲಿ ಪಾರ್ಕ್ ನಿರ್ಮಾಣ ಸಹಿತ ಕಾಮಗಾರಿ ಮುಂದುವರಿಯಲಿದೆ. ನಿರ್ವಹಣೆಗೆ ಖಾಸಗೀ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ ಎಂದರು.


ಸ್ಥಳೀಯ ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಮಾತನಾಡಿ, 23 ಸೆಂಟ್ ಸರಕಾರಿ ಜಾಗ ಉಪಯೋಗವಾಗದೆ ಗಿಡಗಂಟಿ ಬೆಳೆದು ಹೆಬ್ಬಾವು, ಹಾವು ಮತ್ತಿತರ ಅಪಾಯಕಾರಿ ಸರೀಸೃಪಗಳ ನೆಲೆಯಾಗಿತ್ತು.


ಬಡವಾಣೆ ನಿವಾಸಿಗಳು ಈ ಬಗ್ಗೆ ಆತಂಕ ವ್ಯಕ್ತ ಪಡಿಸಿ ಮನವಿ ಅರ್ಪಿಸಿದ ಮೇರೆಗೆ ಶಾಸಕರು ಅನುದಾನ ನೀಡಿ ಪಾರ್ಕ್ ಇದೀಗ ನಿರ್ಮಿಸಲಾಗಿದೆ. ಸಮೀಪದಲ್ಲೇ ಎಂಸಿಎಫ್ ವತಿಯಿಂದ 25 ಲಕ್ಷ ರೂ.ಅನುದಾನದಲ್ಲಿ ಅಂಗನವಾಗಿ ನಿರ್ಮಾಣವಾಗುತ್ತದೆ. ಬಡಾವಣೆ ನಿವಾಸಿಗಳ ಸಮಿತಿ ರಚಿಸಿ ಈ ಪಾರ್ಕ್ ನಿರ್ವಹಣೆ, ಸ್ವಚ್ಚತೆ ಕಾಪಾಡಿಕೊಳ್ಳಲು ಸೂಚಿಸಲಾಗಿದ್ದು ಒಪ್ಪಿಗೆ ಸೂಚಿಸಿದ್ದಾರೆ. ಇದೊಂದು ಉತ್ತಮ ಕೆಲಸ ಎಂದರು.


ಮುಡಾ ಕಮೀಷನರ್, ಎಂಜಿನಿಯರ್, ಬಿಜೆಪಿ ಮುಖಂಡ ಉಮೇಶ್ ಮಲರಾಯ ಸಾನ, ಜಯಪ್ರಕಾಶ್ ಕುಲಾಲ್, ಗುತ್ತಿಗೆದಾರ ಅಜಿತ್ ಅಡ್ಯಾರ್, ಬಡಾವಣೆ ನಿವಾಸಿಗಳು ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top