ಚಿತ್ರ, ವರದಿ: ದಿನೇಶ್ ಕುಲಾಲ್
ಮುಂಬಯಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ, ಅವನನ್ನೊಮ್ಮೆ ನೋಡಿ ಬರಬೇಕು ಎನ್ನುವ ಭಕ್ತರ ಅವನನ್ನು ನೋಡಿ ಬಂದರೆ ಸಾಲದು. ರಾಮನು ನಮ್ಮನ್ನು ನೋಡಬೇಕು, ಅದಕ್ಕಾಗಿ ನಾವು ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು, ಶ್ರೀ ರಾಮಚಂದ್ರ ದೇಶಭಕ್ತಿಯ ಪಾಠ ಮಾಡಿದ್ದಾನೆ. ಅವನು ನಮಗೆ ಆದರ್ಶ, ಯಾರು ದೇಶ ಭಕ್ತನಲ್ಲವೂ ಅವನು ರಾಮ ಭಕ್ತನಾಗಲು ಸಾಧ್ಯವಿಲ್ಲ, ದೇಶಭಕ್ತನಾದವನು ರಾಮಭಕ್ತನಾಗುತ್ತಾನೆ, ರಾಮಭಕ್ತಿ ಬೇರೆಯಲ್ಲ ದೇಶಭಕ್ತಿ ಬೇರೆಯಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಶ್ರೀ ರಾಮನ ಸೇವೆ ಮಾಡಬೇಕೆನ್ನುವವನು ದೇಶ ಸೇವೆ ಮಾಡಬೇಕು. ಅದು ಏಕೆಂದರೆ ನಮ್ಮ ಪರಿಸರದ ಬಡ ಕಡು ಬಡತನದ ಕುಟುಂಬಗಳಿಗೆ ಸಹಕಾರ ನೀಡಿದ್ದಾರೆ ಅದು ರಾಮದೇವರ ಸೇವೆಯಾಗುತ್ತದೆ, ನಮ್ಮ ಸೇವೆಗಳನ್ನು ಅಯೋಧ್ಯೆಯಲ್ಲಿ ನೆಲೆ ನಿಂತ ರಾಮನಿಗೆ ಹೋಗಿ ಹೇಳೋಣ. ಅದೇ ರಾಮನ ದರ್ಶನ ಪಡೆದ ಭಾಗ್ಯವಾಗುತ್ತದೆ. ರಾಮಸೇವೆ ಮಾಡುವಾಗ ಆಪತ್ತುಗಳು ಬಂದಾಗ ರಾಮದೇವರು ಅದನ್ನೆಲ್ಲವನ್ನು ದೂರ ಮಾಡುತ್ತಾನೆ, ಎಂದು ನುಡಿದರು.
ಪೇಜಾವರ ಶ್ರೀಗಳು ಅಯೋಧ್ಯೆಯಲ್ಲಿ ರಾಮಲಲ್ಲಾನ ನೂತನ ಶ್ರೀರಾಮಮಂದಿರದಲ್ಲಿ ಜ.22 ರಂದು ಪ್ರಧಾನಿ ಮೋದಿಯವರು ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನೆರವೇರಿಸಿ. ಅನಂತರ ಸರಯೂ ನದಿಯ ಸಹಿತ ದೇಶದ ಪವಿತ್ರ ನದಿಗಳ 1008 ಕಲಶಗಳ ಬ್ರಹ್ಮಕಲಶಾಭಿಷೇಕ- ಬ್ರಹ್ಮಕಲಶೋತ್ಸವ ಹಾಗೂ ಜ. 23 ರಿಂದ 48 ದಿನಗಳ ಮಂಡಲೋತ್ಸವ - ಮಂಡಲ ಪೂಜೆಯ ನೇತೃತ್ವವನ್ನು ಯಶಸ್ವಿಯಾಗಿ ನೆರವೇರಿಸಿ ಸ್ವಾಮೀಜಿಯವರು ಮಂಗಳವಾರ, ಮಾರ್ಚ್ 12ರಂದು ಅಯೋಧ್ಯೆ ಯಿಂದ ಮುಂಬಯಿ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮುಂಬೈಯ ಭಕ್ತ ಜನ ಸಾಗರ ಅವರನ್ನು ಭಕ್ತಿಯಿಂದ ಸ್ವಾಗತಿಸಿ. ಜೈ ಶ್ರೀ ರಾಮ್ ಎನ್ನುವ ಮಂತ್ರಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ವಿದ್ವಾನ್ ಡಾ ರಾಮದಾಸ ಉಪಾಧ್ಯಾಯ ರೆಂಜಾಳ ಅಯೋಧ್ಯೆಯಲ್ಲಿ ಸ್ವಾಮೀಜಿಯವರು ನಡೆಸಿದ ವಿವಿಧ ಪೂಜೆ ಕಾರ್ಯಗಳು ಮತ್ತು ಧಾರ್ಮಿಕ ವೈದಿಕ ಕಾರ್ಯಗಳನ್ನು ವಿಸ್ತಾರವಾಗಿ ತಿಳಿಸಿದರು. ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಶ್ರೀರಾಮನ ಪ್ರತಿಷ್ಠೆಯ ಮೂಲಕ ದೇಶದಲ್ಲಿ ಹಿಂದೂ ಧರ್ಮ ಜಾಗೃತವಾಗಿದೆ, ನಮ್ಮ ಜಿಲ್ಲೆಗೆ ಕೀರ್ತಿಯನ್ನು ತರುವ ಸೇವೆಯನ್ನು ಸ್ವಾಮೀಜಿಯವರು ಆ ಪವಿತ್ರ ಮಣ್ಣಿನಲ್ಲಿ ಮಾಡುವ ಮೂಲಕ ನಮ್ಮೆಲ್ಲರನ್ನು ಭಕ್ತಿ ಪರವಶರಂತೆ ಮಾಡಿದ್ದೆದಾರೆ. ಇಂದು ಸ್ವಾಮೀಜಿಯವರ ಪೀಠಾರೋಹಣದ ವರ್ಧಂತಿ ಮಾಡುವ ಸೌಭಾಗ್ಯ ನಮಗೆಲ್ಲರಿಗೂ ಬಂದಿದೆ ಎಂದು ನುಡಿದರು.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ಅದ್ಯಪಾಡಿ ಹರಿದಾಸ ಭಟ್ಟರು ಪ್ರಾಸ್ತಾವಿಕ ಮಾತುಗಳ ನಾಡಿದರು, ಸ್ವಾಮೀಜಿಯವರನ್ನು ಮುಂಬೈಯ ವಿಮಾನ ನಿಲ್ದಾಣದ ದಿಂದ ಪೇಜಾವರ ಮಠಕ್ಕೆ ಜೈ ಶ್ರೀ ರಾಮ್ ರಾಮನ ಮಂತ್ರಘೋಷದೊಂದಿಗೆ ಮಠಕ್ಕೆ ಕರೆತರಲಾಯಿತು, ಮಠದಲ್ಲಿ ವಿಶೇಷವಾದ ಗೌರವವನ್ನು ಸಲ್ಲಿಸಲಾಯಿತು, ಮಠದ ಪ್ರಧಾನ ದೇವರಿಗೆ ಮಹಾಮಂಗಳಾರತಿ ನಡೆದವು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಎ. ಎಸ್. ರಾವ್, ಕಾರ್ಯದರ್ಶಿ ಗುರುಮೂರ್ತಿ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಧಾರ್ಮಿಕ ಮುಂದಾಳು ಡಾ. ಸೀತಾರಾಮ್ ಆಳ್ವ, ಪೇಜಾವರ ಮಠದ ಪ್ರಕಾಶ್ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೈ, ಸಮಾಜ ಸೇವಕರಾದ ಶೇಖರ್ ಸಾಲಿಯಾನ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಸೇರಿದಂತೆ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು. ಶ್ರೀಗಳಿಂದ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.
ಸ್ವಾಮೀಜಿಯವರ ಆಗಮನದ ಸಂದರ್ಭದಲ್ಲಿ ಮಧ್ವೇಶ ಭಜನಾ ಮಂಡಳಿಯಿಂದ ಭಜನೆ, ಜರಿ ಮೇರಿ ದಿನೇಶ್ ಕೋಟ್ಯಾನ್ ಬಳಗದವರಿಂದ ಚೆಂಡೆ ಮದ್ದಳೆ, ಸ್ಯಾಕ್ಸೋ ಫೋನ್ ವಾದನದೊಂದಿಗೆ ಮಠಕ್ಕೆ ಸ್ವಾಗತಿಸಲಾಯಿತು.
ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಚಾರಿತ್ರಿಕ ಉತ್ಸವ
ಅಯೋಧ್ಯೆಯಲ್ಲಿ ಜನವರಿ 22 ರಂದು ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಯಜಮಾನಿಕೆಯಲ್ಲಿ ನೂತನ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾನೆಯು ವಿಧ್ಯಕ್ತವಾಗಿ ನೆರವೇರಿತ್ತು . ಮರುದಿನದಿಂದ ಶ್ರೀ ಪೇಜಾವರ ಶ್ರೀಗಳ ದಿವ್ಯ ನೇತೃತ್ವದಲ್ಲಿ 48 ದಿನಗಳ ಮಂಡಲೋತ್ಸವ ಆರಂಭವಾಗಿತ್ತು, ಅದರ ಕೊನೆಯ ದಿನವಾಗಿದ್ದು ಶ್ರೀರಾಮನಿಗೆ ವೈಭವದಿಂದ 1008 ಕಲಶಾಭಿಷೇಕ ಸಹಿತ ಬ್ರಹ್ಮಕಲಶೋತ್ಸವ ನೂರಾರು ಋತ್ವಿಜರ ಉಪಸ್ಥಿತಿಯಲ್ಲಿ ತತ್ವ ಹೋಮ ಸಹಿತ ವಿವಿಧ ಹೋಮ ಹವನಾದಿಗಳು, ಕಲಶ ಸ್ಥಾಪನಾ ಪೂರ್ವಕ ಕಲಶ ಪೂಜೆ ವಿಧಿ ವಿಧಾನಗಳು ನಡೆದವು.
ಮಂದಿರದಲ್ಲಿ ಇವತ್ತೂ ಅಸಂಖ್ಯ ಭಕ್ತರು ಸಾಲು ಸಾಲು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಪವಿತ್ರ ಕಲಶಾಭಿಷೇಕಕ್ಕೆ ಶ್ರೀಗಳು ಸರಯೂ ಮಾತ್ರವಲ್ಲದೇ ಗಂಗಾ ಅಲಕನಂದಾ ಸಹಿತ ಅನೇಕ ನದಿಗಳ ಪವಿತ್ರ ಜಲವನ್ನು ತರಿಸಿ ಬಳಸಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಸಂಭ್ರಮ ಸಡಗರ ಮನೆಮಾಡಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ