ಕಟಪಾಡಿ: ಸಿ.ಎಸ್.ಐ ಕ್ರೆಸ್ಟ್ ಚಚ್೯ , ಕೋಟೆ ಗ್ರಾ.ಪಂ , ಲೋoಬಾಡ್೯ ಮೆಮೋರಿಯಲ್ ಮಿಷನ್ ಆಸ್ಪತ್ರೆ ಉಡುಪಿ , ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಜನೌಷಧಿ ಕೇಂದ್ರ ಅಜ್ಜರಕಾಡು ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಜೇಸಿಐ ಕಟಪಾಡಿ ಮತ್ತು ಕಂಪಾನಿಯೋ ಇದರ ಸಹಯೋಗದೊಂದಿಗೆ ಸಾಮಾನ್ಯ ಆರೋಗ್ಯ ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಉಚಿತ ಥೆರಪಿ ಶಿಬಿರ ಮಾ. 3ರಂದು ಪಳ್ಳಿ ಗುಡ್ಡೆ ಕಟಪಾಡಿ ಜೆಸಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ್ಯಯನ್ನು ಜೆಸಿ ಅಧ್ಯಕ್ಷರಾದ ಪ್ರಶಾಂತ್ ವಹಿಸಿದ್ದರು. ವೇದಿಕೆಯಲ್ಲಿ ತಜ್ಞ ವೈದ್ಯರಾದ ಡಾ|| ಅರ್ಜುನ್ ಬಳ್ಳಾಲ್ , ಡಾ|| ರೂಪಶ್ರೀ, ಡಾ|| ಗಣೇಶ್ ಕಾಮತ್ ಡಾ|| ನಾಗೇಶ್ ನಾಯಕ್ ,ಚರ್ಚಿನ ರೆ.ಫಾ ಅಕ್ಷಯ್ ಅಮ್ಮಣ್ಣ, ದಯಾನಂದ್ ಕುಂದರ್, ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ ಜತ್ತನ್, ನರೇಂದ್ರ, ವೈದ್ಯಕೀಯ ಪ್ರತಿನಿಧಿ ಸಂಘದ ಪ್ರಸನ್ನ ಕಾರಂತ್, ಶ್ರೀನಾಥ್ ಕೋಟ, ರಾಘವೇಂದ್ರ ಪ್ರಭು ಕವಾ೯ಲು , ರೋಹಿ ರತ್ನಾಕರ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು 200 ಜನರು ಶಿಬಿರದ ಪ್ರಯೋಜನ ಪಡೆದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ