ಮಂಗಳೂರು : ಕರಾವಳಿಯ ಉದ್ದಕ್ಕೂ ಇರುವ ಎಲ್ಲಾ ಭಾಷೆಯ, ಸಂಸ್ಕೃತಿಯ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲ ಸಮರ್ಥ ಪತ್ರಕರ್ತ, ನಿರೂಪಕ, ಸಾಹಿತಿ ಮನೋಹರ ಪ್ರಸಾದ್ ಅವರಿಗೆ ಪರ್ಯಾಯ ಹೆಸರಿಲ್ಲ ಎಂದು ಡಾ ಎಂಪಿ ಶ್ರೀನಾಥ್ ನುಡಿದರು.
ಅವರು ಎಸ್ ಡಿಎಂ ಮಂಗಳೂರು ಕಾಲೇಜು ಆವರಣದಲ್ಲಿ ದ.ಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನೋಹರ ಪ್ರಸಾದ್ ಅವರಿಗೆ ಸಂತಾಪ ಸೂಚಿಸಿ ಮಾತನಾಡುತ್ತಿದ್ದರು. ಬಹಳ ಬೆರಗು ಮೂಡಿಸಿ ಅಕಾಲಿಕ ಮರಣ ಹೊಂದಿರುವ ಅವರು ಇನ್ನೂ ಸಾರಸ್ವತ ಲೋಕಕ್ಕೆ ದೇಣಿಗೆ ನೀಡಲು ಬಾಕಿ ಇತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಎಚ್ ವಿನಯ ಆಚಾರ್ಯ, ರಾಜೇಶ್ವರಿ ಎಂ, ವರ್ಕಾಡಿ ರವಿ ಅಲೆವೂರು, ದಯಾನಂದ ರಾವ್ ಕಾವೂರು, ಚಂದ್ರಶೇಖರ ನಾವಡ, ಪಿ ಮಹಮ್ಮದ್, ಪುಷ್ಕಳ್ ಕುಮಾರ್ ತೋನ್ಸೆ, ಅರುಣಾ ನಾಗರಾಜ್, ಬೈಕಾಡಿ ಜೆ ರತ್ನಾವತಿ, ಡಾ. ಮೀನಾಕ್ಷಿ ರಾಮಚಂದ್ರ, ರೇಮಂಡ್ ಡಿಕೂನಾ ತಾಕೊಡೆ, ಚಂದ್ರಹಾಸ ಶೆಟ್ಟಿ, ಪೂವಪ್ಪ ನೇರಳಕಟ್ಟೆ, ಡಾ ಸುರೇಶ ನೆಗಳಗುಳಿ, ಜಗದೀಶ್ ಎಡಪಡಿತ್ತಾಯ, ಮಾಧವ ಎಂಕೆ, ಸನತ್ ಕುಮಾರ್, ಗುಣವತಿ ಆರ್ ಕೆ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ