ರಾಜಕೀಯದ ಎಲ್ಲೆ ಮೀರಿ ಧರ್ಮನಿಷ್ಠೆ ಮೆರೆದ ಮುನಿಯಾಲು ಶೆಟ್ಟಿ, ಮಂಜುನಾಥ ಭಂಡಾರಿ
ಅಯೋಧ್ಯೆ: ಪ್ರಸಿದ್ದ ಲೋಕೋಪಯೋಗಿ ಗುತ್ತಿಗೆದಾರರೂ, ಕೊಡುಗೈ ದಾನಿಯೂ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರೂ ಆಗಿರುವ ಮುನಿಯಾಲು ಉದಯಕುಮಾರ್ ಶೆಟ್ಟರು ಗುರುವಾರದಂದು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದರು.
ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ರಜತ ಕಲಶಾಭಿಷೇಕದ ಸೇವೆ ನೀಡಿ, ಆ ಪ್ರಯುಕ್ತ ನಡೆದ ಹೋಮ ಹವನಗಳಲ್ಲಿ ವಿಧಿಪೂರ್ವಕ ಸಂಕಲ್ಪ ನೆರವೇರಿಸಿದರು. ಹೋಮದ ಪೂರ್ಣಾಹುತಿಯ ಬಳಿಕ ಶ್ರೀಗಳವರಿಂದ ರಾಮ ದೇವರಿಗೆ ಕಲಶಾಭಿಷೇಕ, ಮಂಗಳಾರತಿ ನಡೆಯಿತು.
ಶ್ರೀಗಳವರಿಂದ ಆಶೀರ್ವಾದ ಪೂರ್ವಕ ರಜತ ಕಲಶವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಕೆ ರಘುಪತಿ ಭಟ್, ಪ್ರಸಿದ್ಧ ನ್ಯಾಯವಾದಿ ಪೆಲತ್ತೂರು ಉಮೇಶ ಶೆಟ್ಟಿ, ವಾಸುದೇವ ಭಟ್ ಪೆರಂಪಳ್ಳಿ, ಸುವರ್ಧನ ನಾಯಕ್ ವಿಷ್ಣು ಅಚಾರ್ಯ ಕೃಷ್ಣ ಭಟ್ ಮೊದಲಾದವರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ