‘ಸಾಮರ್ಥ್ಯವನ್ನು ಸಮರ್ಥ, ಸಮಾಜಮುಖಿಯಾಗಿ ಬಳಸಿ’

Upayuktha
0

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ



ವಿದ್ಯಾಗಿರಿ (ಮೂಡುಬಿದಿರೆ): ಅಡುಗೆ ಮನೆಯಿಂದ ಯುದ್ಧಭೂಮಿವರೆಗೆ ಸಾಮರ್ಥ್ಯ ಪ್ರದರ್ಶಿಸಲು ಮಹಿಳೆ ಶಕ್ತಳು. ಆಕೆ ತನ್ನ ಸಾಮರ್ಥ್ಯವನ್ನು ಸಮರ್ಥ ಹಾಗೂ ಸಮಾಜಮುಖಿಯಾಗಿ ಬಳಸಿಕೊಳ್ಳಬೇಕು ಎಂದು ಬೆಂಗಳೂರು ಅದಮ್ಯ ಚೇತನ ಫೌಂಡೇಷನ್ ಸ್ಥಾಪಕಾಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಹೇಳಿದರು.  


ಅಂತರರಾಷ್ಟ್ರೀ ಯ ಮಹಿಳಾ ದಿನಾಚರಣೆ -2024 ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಕಾಲೇಜಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣ (ಕೃಷಿಸಿರಿ)ದಲ್ಲಿ ಗುರುವಾರ ಹಮ್ಮಿಕೊಂಡ ‘ಆಳ್ವಾಸ್ ಮಹಿಳಾ ವೇದಿಕೆಯ ಉದ್ಘಾಟನೆ ಹಾಗೂ ಲಾಂಛನ ಅನಾವರಣ ಮತ್ತು ವೈವಿಧ್ಯಮಯ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಒಬ್ಬ ವ್ಯಕ್ತಿ ದಿನಕ್ಕೆ ಸುಮಾರು 700 ಕೆ.ಜಿ. ಆಮ್ಲಜನಕ ಬಳಸಿದರೆ, ಒಂದು ಮರ 100 ಕೆಜಿ ಉತ್ಪಾದಿಸುತ್ತದೆ. ಹೀಗಾಗಿ ಒಬ್ಬ ವ್ಯಕ್ತಿ ಬದುಕಲು ಏಳು ಮರಗಳ ಅವಶ್ಯಕತೆ ಇದೆ. ಆದರೆ, ಬೆಂಗಳೂರಿನಲ್ಲಿ 14 ಲಕ್ಷ ಮರಗಳಿದ್ದು, ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಇದರ ತೀವ್ರತೆ ಅರಿತು ಸಸಿ ನೆಡುವ ಕಾರ್ಯಕ್ರಮವನ್ನು ಅದಮ್ಯ ಫೌಂಡೇಶನ್ ಹಾಕಿಕೊಂಡಿದೆ ಎಂದರು. 


ಪ್ರಸ್ತುತ ಗ್ರಾಮೀಣ ಮಕ್ಕಳಲ್ಲೂ ಪರಿಸರ ಆಸಕ್ತಿ ಇಳಿಕೆಯಾಗುತ್ತಿದೆ. ಹೀಗಾಗಿ ಶಿಕ್ಷಣದಲ್ಲಿ ಪರಿಸರದ ಜಾಗೃತಿ ಅವಶ್ಯ ಎಂದರು.   


ಲಾಂಛನ ಅನಾವರಣ ಮಾಡಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪೋಷಕರು ಲಿಂಗ ತಾರತಮ್ಯ ಮಾಡಬಾರದು. ಲಿಂಗ ತಾರತಮ್ಯದ ಮನಸ್ಥಿತಿಯನ್ನು ನಿವಾರಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು. 


ವೈಟ್ ಕಾಲರ್ (ಬೌದ್ಧಿಕ) ಉದ್ಯೋಗ ಸಿಗುವುದು ಕಷ್ಟವಾಗಿದ್ದು, ಬ್ಲೂö್ಯ ಕಾಲರ್ (ದೈಹಿಕ) ಉದ್ಯೋಗ ಇಷ್ಟವಿಲ್ಲ. ಹೀಗಾಗಿ ಯೆಲ್ಲೋ ಕಾಲರ್ (ಉದ್ಯಮಶೀಲತೆ) ಮನಸ್ಥಿತಿ ಬೆಳೆಸಿಕೊಳ್ಳಬೇಕಾಗಿದೆ ಎಂದರು. 


ಮುಂದಿನ ಜನ್ಮವಿದ್ದರೆ ನಾನು ಹೆಣ್ಣಾಗಿ ಹುಟ್ಟಲು ಬಯಸುತ್ತೇನೆ ಎಂದರು. 

ಸನ್ಮಾನ ಸ್ವೀಕರಿಸಿ  ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ, ನಿವೃತ್ತ ಪ್ರಾಧ್ಯಾಪಕಿ ಪ್ರೊ. ಹಿಲ್ಡಾ ರಾಯಪ್ಪನ್, ಮಹಿಳೆಯರು ಸಾಮಾಜಿಕವಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಪರಿಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಪ್ರಸ್ತುತ ಎಲ್ಲವೂ ಪುರಷ ಪ್ರಧಾನವಾಗಿದ್ದು, ಮಹಿಳೆಯರು ಸರಿ ಸಮಾನರಾಗಿ ಬರಬೇಕು ಎಂದರು. 


ಮಕ್ಕಳನ್ನು ಪ್ರೀತಿಸಿ. ಆದರೆ, ಅತಿಯಾದ ಕೊಂಡಾಟ ಬೇಡ ಎಂದರು.   

ಮಂಗಳೂರಿನ ಸಿಸಿಬಿ ಪೊಲೀಸ್ ಸಹಾಯಕ ಆಯುಕ್ತೆ ಗೀತಾ ಡಿ. ಕುಲಕರ್ಣಿ ಮಾತನಾಡಿ, ತಂತ್ರಜ್ಞಾನದ ದಾಸರಾಗದೇ, ಸಮರ್ಥ ಬಳಕೆ ಮಾಡಿದಾಗ ಅಪರಾಧ ಚಟುವಟಿಕೆ ನಿಯಂತ್ರಣ ಸಾಧ್ಯ ಎಂದರು. 

ಸಂಚಾರ ಸುರಕ್ಷತೆ ಬಗ್ಗೆ ಎಚ್ಚರ ಅವಶ್ಯ. ಸಂಚಾರ ನಿಯಮ ಪಾಲನೆಯೇ ಇದಕ್ಕೆ ಪರಿಹಾರ ಎಂದರು. 


‘ಆಳ್ವಾಸ್ ಮಹಿಳಾ ವೇದಿಕೆಯ ಹೆಸರು- ಸಕ್ಷಮ ಹಾಗೂ ಲೋಗೋದ ಅನಾವರಣ ಕರ‍್ಯಕ್ರಮ ನಡೆಯಿತು. 

ಬೆಂಗಳೂರಿನ ಟೆಕ್ ಅವಂತ್ ಗಾರ್ಡ್ ಬೋಧನಾ ವಿಜ್ಞಾನ ಮತ್ತು ಶೈಕ್ಷಣಿಕ ಆವಿಷ್ಕಾರದ ಮಖ್ಯಸ್ಥೆ ರೂಪಾ ಅರುಣ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿಯ ಡಾ. ಗ್ರೀಷ್ಮಾ ವಿವೇಕ್ ಆಳ್ವ ಇದ್ದರು. 


ಎನ್‌ಸೈಕ್ಲೋಪಿಡಿಯಾ ಆಫ್ ಫಾರೆಸ್ಟ್ ಖ್ಯಾತಿಯ ತುಳಸಿ ಗೌಡ, ಸಾಮಾಜಿಕ ಕಾರ್ಯಕರ್ತೆ ಹಿಲ್ಡಾ ರಾಯಪ್ಪನ್, ಪ್ರಾಣಿ ಸಂರಕ್ಷಕಿ ರಜನಿ ಶೆಟ್ಟಿ, ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರಾದ ಸಿವಿಲ್ ನ್ಯಾಯಾಧೀಶೆ ಗೀತಾ ಡಿ, ಇಸ್ರೋ ವಿಜ್ಞಾನಿ ಡಾ.ನಂದಿನ, ಚಲನಚಿತ್ರ ನಟಿ- ಗಾಯಕಿ ಆಶಾ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕಿ ಡಾ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು. 


ನಂತರ ನಡೆದ ಸಮಕ್ಷಮ ಸಂವಾದ ಕರ‍್ಯಕ್ರಮದಲ್ಲಿ ಮಹಿಳೆ ಮತ್ತು ಸಾಮಾಜಿಕ ಸಂವರ್ಧನೆ ’ ಕುರಿತು ಟೆಕ್-ಅವಂತ್-ಗಾರ್ಡ್ನ  ಬೋಧನಾ ವಿಜ್ಞಾನ ಮತ್ತು ಶೈಕ್ಷಣಿಕ ಆವಿಷ್ಕಾರದ ಮುಖ್ಯಸ್ಥೆ ರೂಪಾ ಅರುಣ್,  ‘ಆಯ್ಕೆಯ ರೂಪಾಂತರ’ ಕುರಿತು ಚಲನಚಿತ್ರ ನಟಿ ಹಾಗೂ ಗಾಯಕಿ ಆಶಾ ಭಟ್, ‘ದೈಹಿಕ ಸದೃಢತೆ’ ಕುರಿತು ಮಂಗಳೂರಿನ ಅಸ್ಟೆರಾಯ್ಡ್ ಸಂಸ್ಥೆಯ ಮಾರಾಟ ವಿಭಾಗದ ಮುಖ್ಯಸ್ಥೆ ಮೇಹವಿಶ್, ‘ಮಹಿಳಾ ಸಶಕ್ತೀಕರಣ’ ಕುರಿತು  ನಿಟ್ಟೆ ವಿಶ್ವವಿದ್ಯಾನಿಲಯದ ಸಿಬ್ಬಂದಿ ಅಭಿವವೃದ್ಧಿ ಕೇಂದ್ರದ ನಿರ್ದೇಶಕಿ ಸಾಧನಾ ದೇಶಮುಖ್ ಹಾಗೂ ಯೆನೆಪೋಯ ವಿಶ್ವವಿದ್ಯಾನಿಲಯದ ಸಹಪ್ರಾದ್ಯಾಪಕಿ ಡಾ. ದೀಪ ಕೊಠಾರಿ ಅವರು ಉಪನ್ಯಾಸ ನೀಡಿದರು. ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆಯ ಡಾ ಸುರೇಖಾ ಪೈ ಸಂವಾದ ನಡೆಸಿಕೊಟ್ಟರು. 

ವಿಶ್ವ ಮಹಿಳಾ ದಿನಾಚರಣೆಯ ಹಿನ್ನಲೆಯಲ್ಲಿ ಎರಡು ವಾರಗಳ ಕಾಲ ಹಮ್ಮಿಕೊಂಡ ವಿವಿಧ ಸ್ಫರ್ಧೆಗಳ ಬಹುಮಾನವನ್ನು ಈ ವೇದಿಕೆಯಲ್ಲಿ ನೀಡಲಾಯಿತು. 


ಅಪರಾಹ್ನದ ಅಧಿವೇಶನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಿರುನಾಟಕ, ಮೈಮ್ ಶೋ, ನೃತ್ಯ ಪ್ರದರ್ಶನ,  ಡಾ ವಿವೇಕ ನೇತೃತ್ವದಲ್ಲಿ ಜುಂಬಾ ನೃತ್ಯ, ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆದವು. 


ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ರಂಗಭೂಮಿ ಕಲಾವಿದೆ, ಚಿತ್ರನಟಿ ರೂಪಶ್ರೀ ವರ್ಕಾಡಿ ಮಾತನಾಡಿ, ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಇಂದು ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳಾ ದಿನವನ್ನು ನಮ್ಮ ಜೀವನದಲ್ಲಿ ಮತ್ತು ಪ್ರಪಂಚದಾದ್ಯಂತ ಮಹಿಳೆಯರ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಎಲ್ಲರೂ ಅಂಗೀಕರಿಸುವ ದಿನವೆಂದು ಪರಿಗಣಿಸಬೇಕು ಎಂದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚರ‍್ಯ   ಪ್ರೋ ಮೊಹಮ್ಮದ್ ಸದಾಕತ್ ಇದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಗ್ರೀಷ್ಮ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ದಿವ್ಯಾ ಡೆಂಬಳ ಸಮಾರೋಪ ಸಮಾರಂಭದ ಕರ‍್ಯಕ್ರಮವನ್ನು ನಿರೂಪಿಸಿದರು. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top