ಬೆಂಗಳೂರು: ಮಹಾಶಿವರಾತ್ರಿಯ ನಿಮಿತ್ತ ದಿನಾಂಕ 08 ಮಾರ್ಚ್ 2024ನೇ ಶುಕ್ರವಾರದಂದು ಸನಾತನ ಸಂಸ್ಥೆಯ ವತಿಯಿಂದ ಪ್ರತೀ ವರ್ಷದಂತೆ ಬೆಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ಶಿವನ ಪೂಜೆಗೆ ಸಂಬಂಧಿಸಿದ ಸಾತ್ತ್ವಿಕ ಉತ್ಪಾದನೆಗಳು ಹಾಗೂ ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನಿಯನ್ನು ಆಯೋಜಿಸಲಾಗಿದೆ.
ಮಲ್ಲೇಶ್ವರಂನ ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ವಿಜಯನಗರ ಶ್ರೀ ಆದಿಚುಂಚನಗಿರಿ ಮಠ, ಮನುವನ ಬಸ್ ಸ್ಟಾಪ್ ಹತ್ತಿರ, ಸಂಜಯನಗರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಬನಶಂಕರಿಯ ಕೆ.ಆರ್ ರಸ್ತೆಯಲ್ಲಿರುವ ಶ್ರೀ ಉಮಾಮಹೇಶ್ವರಿ ದೇವಸ್ಥಾನ, ಆನೇಕಲ್ ತಾಲ್ಲೂಕು ಬೊಮ್ಮಸಂದ್ರದ ಶ್ರೀ ಸೋಮೇಶ್ವರ ದೇವಸ್ಥಾನ, ಟಿ. ದಾಸರಹಳ್ಳಿಯ ಮಹೇಶ್ವರಿ ನಗರದ ಶಿವ ದೇವಸ್ಥಾನ ಇಲ್ಲಿ ಆಧ್ಯಾತ್ಮಿಕ ಗ್ರಂಥಗಳು ಹಾಗೂ ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶನಿಯನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಈ ಪ್ರದರ್ಶನಗಳ ಲಾಭ ಪಡೆದುಕೊಳ್ಳಬೇಕೆಂದು ಸನಾತನ ಸಂಸ್ಥೆಯು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ