ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿಗೆ ‘ಸ್ಕಿಲ್ ಫೋರ್ಜ್’ ಪುರಸ್ಕಾರ

Upayuktha
0

 


ಮೂಡುಬಿದಿರೆ: ಸ್ಮಾರ್ಟ್ ಬ್ರಿಡ್ಜ್ ಸಂಸ್ಥೆಯು ಸೇಲ್ಸ್ ಫೋರ್ಸ್ ಸಹಯೋಗದಲ್ಲಿ ಈಚೆಗೆ ಹೈದರಾಬಾದ್‌ನಲ್ಲಿ ಆಯೋಜಿಸಿದ ಅಕಾಡೆಮಿಯ ಎಕ್ಸಲೆನ್ಸ್ ಅವಾರ್ಡ್ಸ್ ಸಮಾರಂಭದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು (ಎಐಇಟಿ) ‘ಸ್ಕಿಲ್ ಫೋರ್ಜ್’ ಪುರಸ್ಕಾರಕ್ಕೆ ಪಾತ್ರವಾಗಿದೆ. 


ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ (ಎಐಇಟಿ) 300ಕ್ಕೂ ಅಧಿಕ ವಿದ್ಯಾರ್ಥಿಗಳು ಎಐಸಿಟಿಇ ಸಹಯೋಗದ ಸ್ಮಾರ್ಟ್ ಬ್ರಿಡ್ಜ್ ಹಾಗೂ ಸೇಲ್ಸ್ ಫೋರ್ಸ್ ಬೆಂಬಲಿತ ವರ್ಚ್ಯುವಲ್ ಇಂಟರ್‌ಶಿಫ್ ಪ್ರೋಗ್ರಾಮ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ದಾಖಲಾರ್ಹ ಪ್ರಗತಿಯಾಗಿದೆ. ಎಐಇಟಿ ಈ ಸಾಧನೆ ಮಾಡಿದ ರಾಜ್ಯದ ಏಕೈಕ ಇಂಜಿನಿಯರಿಂಗ್ ಕಾಲೇಜು. ಆಳ್ವಾಸ್ ನಿಯೋಜನೆ ಮತ್ತು ತರಬೇತಿ ಘಟಕದ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ ಪ್ರಶಸ್ತಿ ಸ್ವೀಕರಿಸಿದರು. 


ಅಲ್ಲದೇ, ಎಐಇಟಿಯು ಪ್ರತಿಷ್ಠಿತ ಕಂಪೆನಿಗಳಾದ ಸರ್ವೀಸ್‌ನೌ, ಯುಐಪಾತ್, ಇನ್ಫೋಸಿಸ್, ಸ್ಪ್ರಿಂಗ್‌ ಬೋರ್ಡ್, ವಿಪ್ರೊ. ಟ್ಯಾಲೆಂಟ್ ನೆಕ್ಸ್ಟ್ ಮತ್ತಿತರ ಕಂಪೆನಿಗಳ ಸಹಯೋಗದಲ್ಲಿದ್ದು, ಕಾಲೇಜಿನ ಹಲವಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿದೆ. ಕಾಲೇಜಿನ ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top