ಎಸ್‌.ಡಿ.ಎಂ. ಕಾಲೇಜ್‌ ರಾಜ್ಯಶಾಸ್ತ್ರ ವಿಭಾಗದಿಂದ ರಾಷ್ಟ್ರೀಯ ಮಟ್ಟದ ವೆಬಿನಾರ್ ಕಾರ್ಯಕ್ರಮ

Upayuktha
0


ಉಜಿರೆ: ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನಾದ್ಯಂತ ಸಂಚಲನವನ್ನು ಮೂಡಿಸಿದ್ದು ಇದು ಜಾಗತಿಕ ಬೆಳವಣಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದು ಕೇರಳದ ತಿರುವನಂತಪುರಂನ IGNOU ಪ್ರಾದೇಶಿಕ ಕೇಂದ್ರದ ಹಿರಿಯ ನಿರ್ದೇಶಕ ಡಾ. ರಾಜೇಶ್ ಮೋಹನ್ ಹೇಳಿದರು.


ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಮಾರ್ಚ್ 6 ರಂದು ನಡೆದ "ಹಮಾಸ್- ಇಸ್ರೇಲ್ ಸಂಘರ್ಷದ ಹಿನ್ನೋಟ ಮತ್ತು ನಿರೀಕ್ಷೆ " ಎಂಬ ವಿಷಯದ ಕುರಿತಾದ ರಾಷ್ಟ್ರೀಯ ಮಟ್ಟದ ವೆಬಿನಾರ್ ನಲ್ಲಿ ಅವರು ಮಾತನಾಡಿದರು.


ಹಮಾಸ್ ಮತ್ತು ಇಸ್ರೇಲ್ ಎರಡು ಕೂಡ ಬೆಳೆದು ಬಂದ ದಾರಿ ,ಅದರ ಇತಿಹಾಸ ಸಾಮಾಜಿಕ ರಾಜಕೀಯ ಕಾರಣಗಳು ಮತ್ತು ಇಸ್ರೇಲ್ ತನ್ನ ನೆಲದ ಅಸ್ತಿತ್ವಕ್ಕಾಗಿ ಹೇಗೆ ಬಡಿದಾಡಿತು ಎಂಬ ವಾಸ್ತವ ಅಂಶವನ್ನು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ರಿಜಿಸ್ಟ್ರಾರ್ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶಲೀಫ್ ಎ.ಪಿ., ಉಪನ್ಯಾಸಕರುಗಳಾದ ನಟರಾಜ್ ಹೆಚ್ ಕೆ  ,ಭಾಗ್ಯಶ್ರೀ, ಶಿವಕುಮಾರ್ ಉಪಸ್ಥಿತರಿದ್ದರು. ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಎಸ್. ಡಿ.ಎಮ್ ಕಾಲೇಜಿನ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಚಂದನ ಸ್ವಾಗತಿಸಿ ,ರಿತಿಕಾ ವಂದಿಸಿದರು. ಕೀರ್ತನಾ ಕಾರ್ಯಕ್ರಮ ನಿರೂಪಣೆ ಮಾಡಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top