ನಮ್ಮ ಅಂಚೆ, ಸ್ಪೀಡ್ ಪೋಸ್ಟ್, ಕೊರಿಯರ್ ವ್ಯವಸ್ಥೆ ಸರಿ ಇಲ್ವಾ!!?

Upayuktha
0


ಹೀಗೊಂದು ಅನುಮಾನ ಇತ್ತೀಚೆಗೆ ಕಾಡುತ್ತಿದೆ!!.  


ಸಾಮಾನ್ಯ ಅಂಚೆ, ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್, ಕೊರಿಯರ್, ಇ-ಮೆಯಿಲ್‌ ನಂತಹ ವ್ಯವಸ್ಥೆಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವಾ?  


ಅದರಲ್ಲೂ ರಾಜ್ಯ ಮತ್ತು ಕೇಂದ್ರ ಸರಕಾರಗಳ ಅತಿ ಮುಖ್ಯ ವ್ಯವಹಾರಿಕ ಪತ್ರಗಳನ್ನು ಅಂಚೆ ಸಂಬಂಧಿತ ಇಲಾಖೆಗಳು ಮತ್ತು ಕೊರಿಯರ್ ಸಂಸ್ಥೆಗಳು ಕಳೆದು ಹಾಕುತ್ತಿವೆಯಾ!!?


ಕೋಟ್ಯಾಂತರ ರುಪಾಯಿಗಳ ವ್ಯವಹಾರದ ಪತ್ರಗಳನ್ನು ಸಂಬಂಧಿಸಿದ ಸರಕಾರಗಳಿಗೆ ಮುಟ್ಟಿಸಲು ಅಂಚೆ ಇಲಾಖೆ ಮತ್ತು ಕೊರಿಯರ್ ಸಂಸ್ಥೆಗಳು ತಿಂಗಳು- ವರ್ಷಗಟ್ಟಲೆ ಸಮಯ  ತೆಗೆದುಕೊಳ್ಳುತ್ತಿವೆಯಾ?  


ಸರಕಾರದ ಇ-ಅಂಚೆ ವ್ಯವಸ್ಥೆ, ಸರಕಾರಿ ಪತ್ರಗಳನ್ನು ವಿಳಾಸದಾರರಿಗೆ ಮುಟ್ಟಿಸಲು ಬೇಕಾಗುವಷ್ಟು ನೆಟ್ವರ್ಕ್ ಸ್ಪೀಡ್ ಸಿಗುತ್ತಿಲ್ಲವಾ? 


ಈ ಎಲ್ಲ ಅನುಮಾನಗಳು ಸೃಷ್ಟಿಯಾಗಿದ್ದು, ಇತ್ತೀಚಿನ ಕೇಂದ್ರ ಮತ್ತು ರಾಜ್ಯ ಸರಕಾರದ ಸಚಿವರುಗಳ ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ಓದಿದಾಗ!!!


==========


ಒಂದೆರಡು ಸ್ಯಾಂಪಲ್ ಪತ್ರಿಕಾ ವರದಿಗಳು: 


ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿದಿಲ್ಲ. ರಾಜ್ಯ ಸರ್ಕಾರದ ಪತ್ರಕ್ಕೆ ನಾನು ಕಾಯುತ್ತಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.


ಬರ ಪರಿಹಾರದ ನೆರವು ಬೇಕಾದರೆ ರಾಜ್ಯ-ಕೇಂದ್ರ ಸರಕಾರದ ಹೆಸರಿನಲ್ಲಿ ಜಂಟಿಯಾಗಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದರು.  ಆದರೆ ಇದುವರೆಗೂ ಇಂತಹ ಯಾವುದೇ ನಿರ್ದೇಶನದ ಪತ್ರವೂ ರಾಜ್ಯ ಸರಕಾರಕ್ಕೆ ಬಂದಿಲ್ಲ


=============


ಅತಿವೃಷ್ಟಿಯಾಗಿ ರೈಲು, ವಿಮಾನಗಳ ಸಂಚಾರ ನಿಂತಿಲ್ಲ,  ಕೊರೋನಾದಂತಹ ಸಾಂಕ್ರಾಮಿಕ ರೋಗಗಳಿಂದಾಗಿ ಲಾಕ್‌ಡೌನ್ ಆಗಿಲ್ಲ,  ಸರಕಾರದ ಸಾಫ್ಟ್‌ವೇರ್ ವ್ಯವಸ್ಥೆ ಹ್ಯಾಕ್ ಆಗಿ ವಿದ್ಯುನ್ಮಾನ ಅಂಚೆ ವಿಫಲವಾದ ವರದಿ ಇಲ್ಲ!!!.  ಆದರೂ ಹಣಕಾಸಿನ ವಿಚಾರಗಳ ರಾಜ್ಯ ಮತ್ತು ಕೆಂದ್ರ ಸರಕಾರಗಳ ನಡುವಿನ ಪತ್ರಗಳು ತಿಂಗಳುಗಳಾದರೂ ಪರಸ್ಪರ ಸರಕಾರಗಳಿಗೆ ತಲುಪದಿರುವುದಕ್ಕೆ ಕಾರಣವಾದರೂ ಏನು?


ಸರಕಾರಗಳ ಫೈನಾನ್ಷಿಯಲ್ ರಿಲೇಟೆಡ್ ಪತ್ರಗಳು ಸಕಾಲದಲ್ಲಿ ಪರಸ್ಪರ ಸರಕಾರಗಳನ್ನು ತಲುಪಿದ್ದಿದ್ದರೆ ಬರ ನಿರ್ವಹಣೆ, ಬೆಳೆ ಪರಿಹಾರ, ಜಂಟಿ ಖಾತೆಗಳನ್ನು ತೆರೆಯುವ ಪ್ರಸ್ತಾಪಗಳು ತತ್‌ಕ್ಷಣ ಕಾರ್ಯಗತವಾಗುತ್ತಿದ್ದವು!!! ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಚಿವರುಗಳು ಸಂಪೂರ್ಣ ಪರಸ್ಪರ ಹಣದ ಚಕ್, ಪ್ರಸ್ತಾಪ, ಅನುಮತಿ, ಆದೇಶ ಪತ್ರಗಳಿಗೆ ನಿತ್ಯ ಅಸಹನೆಯಿಂದ ಕಾಯುತ್ತ ಕೂರುವ ಪ್ರಮೇಯ ಇರುತ್ತಿರಲಿಲ್ಲ!!! ಕೈ ಮುಗಿದು ನಿಂತ ಸಚಿವರು "ಒಳಗೆ ಬನ್ನಿ" ಅಂತ ಕರೆಯಲು ಸಿದ್ದರಾಗಿ ಕುಳಿತಿದ್ದರೂ.... ಅಂಚೆಯವರೇಕೆ ಪತ್ರ ತರುತ್ತಿಲ್ಲ!!!?


ಧೈರ್ಯವಾಗಿ ಪ್ರಶ್ನಿಸಿ ಸರಿ, ಆದರೆ ಈ ಪತ್ರ ತಲುಪದಿರುವಿಕೆಯನ್ನು ಯಾರಲ್ಲಿ ಪ್ರಶ್ನಿಸುವುದು!!? 


- ಅರವಿಂದ ಸಿಗದಾಳ್, ಮೇಲುಕೊಪ್ಪ.

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top