ದಾರಿ ತಪ್ಪುತ್ತಿರುವ ಯುವಕ ಯುವತಿಯರು

Upayuktha
0

 



"ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು, ಸಿಡಿಲು ಬಲದ ಹೃದಯಗಳು, ಇವೆಲ್ಲ ನಮ್ಮ ಯುವಕರಲ್ಲಿದೆ. ಆದ್ದರಿಂದ ಯುವಕರೇ ಮುಂದೆ ಬನ್ನಿ ನಾವು ನವ ಭಾರತ ನಿರ್ಮಾಣ ಮಾಡೋಣ" ಎಂಬ ಮೊರೆಯಿಟ್ಟವರು ಸ್ವಾಮಿ ವಿವೇಕಾನಂದರು. ಇದು ದೇಶ ಉಳಿಸುವಲ್ಲಿ ಯುವ ಜನತೆಯ ಪಾತ್ರವನ್ನು ಸಾರಿ ಸಾರಿ ಹೇಳುತ್ತದೆ.



 ಇಂದಿನ ಯುವಕ ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ, ದುಶ್ಚಟಗಳಿಗೆ ಮಾರುಹೋಗಿ ತಮ್ಮ ಬದುಕನ್ನು ತಾವೇ ವಿನಾಶದ ಹಾದಿಯತ್ತ ಕೊಂಡೊಯ್ಯುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹಿರಿಯರು ತೋರಿಸುತ್ತಿದ್ದ ದಾರಿಯಲ್ಲಿ ಸಾಗುತ್ತಿದ್ದ ಯುವಕರಿಂದು ದೊಡ್ಡವರ ಮಾತುಗಳನ್ನು ಗಾಳಿಯಲ್ಲಿ ತೂರಿ ಸಾಗುತ್ತಿದ್ದಾರೆ. ಸಣ್ಣಪುಟ್ಟ ಕಾರಣಗಳಿಗೂ ಆತ್ಮಹತ್ಯೆಯಂತಹ ನೀಚ ಕಾರ್ಯಗಳಿಗೆ ಇಂದಿನ ಯುವಕ ಯುವತಿಯರು ಬಲಿಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ತಂದೆ ತಾಯಿಯರು ಸ್ವಲ್ಪ ರೇಗಿದರೂ ಮನೆ ಬಿಟ್ಟು ಹೋಗುವ ಯುವಕ ಯುವತಿಯರು ಎಲ್ಲಾ ಕಡೆಗಳಿಂದಲೂ ದಾರಿತಪ್ಪುತ್ತಿದ್ದಾರೆ. ಇನ್ನು ಕೆಲವು ಕೆಲಸ ಕಾರ್ಯಗಳಿಲ್ಲದ ಜನರು ಯುವ ಜನತೆಯನ್ನು ಕೋಮುವಾದದಂತಹ ಕ್ರೂರ ಕಾರ್ಯದತ್ತ ಕೊಂಡೊಯ್ದು, ದೇಶದ ಪ್ರಗತಿಗೆ ತಡೆಯಾಗುತ್ತಿದ್ದಾರೆ. 



 ಇದನ್ನೆಲ್ಲಾ ಒಮ್ಮಿಂದೊಮ್ಮೆಲೆ ಬದಲಾಯಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಮೊದಲಿಗೆ ಇಂದಿನ ಯುವ ಜನತೆಯ ಮನಸ್ಥಿತಿ ಬದಲಾಗಬೇಕು. ಕೋಮುವಾದಗಳಂತಹ ನೀಚ ಕಾರ್ಯಗಳಿಂದ ದೂರವಾಗಿ, ದೇಶ ರಕ್ಷಣೆಯಲ್ಲಿ ತಮ್ಮ ಪಾತ್ರ ಎಷ್ಟು ಮುಖ್ಯವೆಂದು   ಅರಿಯುವಂತವರಾಗಬೇಕು. ಯುವಜನರೇ ಎದ್ದೇಳಿ ದೇಶ ರಕ್ಷಣೆ ನಮ್ಮೆಲ್ಲರ ಹೊಣೆ.



-ಸಂಶೀನ,

ದ್ವಿತೀಯ ಪತ್ರಿಕೋದ್ಯಮ,

ವಿವೇಕಾನಂದ ಕಾಲೇಜು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top