ಶ್ರೀರಾಮನ ಮಂದಿರ ನಿರ್ಮಿಸಿ ಕೋಟಿ ಕೋಟಿ ಜನರ ಆಶಯ ನಿಜವಾಗಿಸಿದ ಮೋದಿ: ಡಾ.ಭರತ್ ಶೆಟ್ಟಿ ವೈ

Upayuktha
0

 ಗ್ರಾಮ ಚಲೋ ಅಭಿಯಾನ



ಕಾವೂರು:  ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ವೈಭವವನ್ನು ಮರು ಸೃಷ್ಟಿಸಿ ಶ್ರೀ ಬಾಲರಾಮನ ಪ್ರತಿಷ್ಟೆಯನ್ನು ಮಾಡಿ ಕೋಟಿ ಕೋಟಿ ಜನರ ಆಶಯ ಈಡೇರಿಸಿದ್ದು ಇದಕ್ಕಾಗಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಪ್ರಧಾನಿಗೆ ಸಾವಿರಾರು ಪೋಸ್ಟ್ ಕಾರ್ಡ್ ಮೂಲಕ ಅಭಿನಂದನೆ ಸಲ್ಲಿಸುವ ಅಭಿಯಾನ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು, ಸಂತನಂತೆ ಬದುಕು ನಡೆಸುತ್ತಾ  ಸನಾತನ ಧರ್ಮದ  ಅಸ್ಮಿತೆಯ ಪ್ರತೀಕವಾದ ಶ್ರೀರಾಮನ ಮಂದಿರವನ್ನು ನಿರ್ಮಿಸಿ ದೇಶದಲ್ಲಿ‌ ಸಂಸ್ಕೃತಿ ಪುನರೋತ್ಥಾನ ಮಾಡುವ ಕಾಯಕದಲ್ಲಿ  ಸ್ವತಃ ಪಾಲ್ಗೊಂಡು ಕೋಟಿ ಕೋಟಿ ಜನರ ಆಶಯ ನಿಜವಾಗಿಸಿದ ಪ್ರಧಾನಿ ಮೋದಿ ಅವರು ದೇಶದ ಹಿಂದೂ ಪೀಳಿಗೆಯ ಪ್ರತಿಯೊಬ್ಬನು ವರ್ಷಾನುವರ್ಷ ನೆನಪಿಸಿಕೊಳ್ಳುವ ಅವಸ್ಮರಣೀಯ ಕಾಯಕ ಮಾಡಿದ್ದಾರೆ ಎಂದು ನುಡಿದರು.



ಪೋಸ್ಟ್ ಕಾರ್ಡ್ ಅಭಿಯಾನದಲ್ಲಿ ಮಂಗಳೂರು ಉತ್ತರ ಶಾಸಕರಾದ  ಡಾ. ಭರತ್ ಶೆಟ್ಟಿ ವೈ, ಪೋಸ್ಟ್ ಕಾರ್ಡ್ ಅಭಿಯಾನದ ಜಿಲ್ಲೆಯ ಸಂಚಾಲಕರು ಹಾಗೂ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ  ಕಿಶೋರ್ ಕುಮಾರ್, ಗ್ರಾಮ ಚಲೋ ಅಭಿಯಾನದ ಸಂಚಾಲಕರು ಹಾಗೂ ಜಿಲ್ಲೆಯ ಪ್ರಧಾನಕಾರ್ಯದರ್ಶಿ ಯತೀಶ್ ಅರ್ವಾರ್, ಜಿಲ್ಲೆಯ ಉಪಾಧ್ಯಕ್ಷರಾದ  ತಿಲಕ್ ರಾಜ್ ಕೃಷ್ಣಾಪುರ,  ಪೂಜಾ ಪ್ರಶಾಂತ್ ಪೈ, ಮಂಡಲ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ, ಮಂಡಲ ಪ್ರಮುಖರು, ಮಹಾ ನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top