ಶಿವಮೊಗ್ಗ: ದಯವಿಟ್ಟು ಗಮನಿಸಿ ಎಂಬ ತಂಡವು ಬೆಂಗಳೂರಿನಲ್ಲಿ ಜುಲೈ 2023ರ ಸುಮಾರಿಗೆ ಅಪರಿಚಿತ ಓದುಗರು ಎಂಬ ಒಂದು ಕಾರ್ಯಕ್ರಮವನ್ನು ಶುರುಮಾಡಿತು. ಹೀಗೆ ಸಾಹಿತ್ಯದ ನಾಡಾದ ಶಿವಮೊಗ್ಗದಲ್ಲೂ ಸಾಹಿತ್ಯ ಅಭಿರುಚಿ ಉಳ್ಳವರನ್ನು ಹೆಕ್ಕಿ ತೆಗೆಯಲು ನವೆಂಬರ್ 2023ರ ಹೊತ್ತಿಗೆ ಅಪೂರ್ವ ಸಂಗಮ ಎಂಬ ತಂಡದಿಂದ ಅಪರಿಚಿತ ಓದುಗರು ಎಂಬ ಕಾರ್ಯಕ್ರಮವು ಪ್ರಾರಂಭವಾಯಿತು.
ಅಪರಿಚಿತ ಓದುಗರು ಎನ್ನುವ ತಂಡವು ಸಾಹಿತ್ಯಾಸಕ್ತ ಓದುಗರೇ ಕಟ್ಟಿಕೊಂಡು ತಿಂಗಳಿಗೊಮ್ಮೆ ಬಿಡುವು ಮಾಡಿಕೊಂಡು ಪ್ರಕೃತಿಯ ಮಡಿಲಲ್ಲಿ ಸೇರಿ ಪುಸ್ತಕ ಓದು, ಚರ್ಚೆ, ವಿಚಾರ ವಿನಿಮಯ, ಸಾಹಿತ್ಯ ಸಂವಾದ, ಹೊಸ ಬರಹಗಾರರ ಪುಸ್ತಕ ಪರಿಚಯ, ಕನ್ನಡ ಸಾಹಿತ್ಯ ಸ್ಪರ್ಧೆ ಹೀಗೆ ಕನ್ನಡ ಸಾಹಿತ್ಯದ ಅಭಿರುಚಿಗೆ ಮತ್ತಷ್ಟು ಮೆರಗು ನೀಡಿ, ಒಂದಷ್ಟು ಸಮಾನ ಮನಸ್ಕ ಅಪರಿಚಿತರ ಪರಿಚಯ ಮಾಡಿಕೊಂಡು ಎಲ್ಲಾ ಸೇರಿ ನಡೆಸಿಕೊಂಡು ಹೋಗುತ್ತಿರುವ ಕಾರ್ಯಕ್ರಮವಾಗಿದೆ.
ಅಪೂರ್ವ ಸಂಗಮ ತಂಡದ ಅಪರಿಚಿತ ಓದುಗರ ಮೂರನೇ ಕಾರ್ಯಕ್ರಮದಲ್ಲಿ ಸಾಕಷ್ಟು ಪುಸ್ತಕಗಳ ಚರ್ಚೆ ಹಾಗೂ ಸಂವಾದವು ನಡೆಯಿತು. ಈ ಕಾರ್ಯಕ್ರಮದಲ್ಲಿ ಕಳೆದ 4 ವಾರಗಳ ಸ್ಪರ್ಧೆಗಳಲ್ಲಿ ವಿಜೇತರಾದಂತಹವರಿಗೆ ಪುಸ್ತಕ ಬಹುಮಾನವನ್ನು ವಿತರಿಸಲಾಯಿತು. ಸಣ್ಣ ಕಥೆಗಳ ಬರಹ ಸ್ಪರ್ಧೆಯಲ್ಲಿ ನಾಗಭೂಷಣ್, ಮಧ್ಯಮ ವರ್ಗದವರ ಜೀವನ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಕೀರ್ತನ ಲೋಕೇಶ್, ಕವಿತೆ - ಕವನ ಸ್ಪರ್ಧೆಯಲ್ಲಿ ಅಕ್ಷತಾ ಮೊದಲ ಬಹುಮಾನ, ಕೀರ್ತನ ಲೋಕೇಶ್ ದ್ವಿತೀಯ ಬಹುಮಾನ, ಪ್ರಾಮತ್ ತೃತೀಯ ಬಹುಮಾನ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ನಿಮ್ಮ ಮನಸ್ಸಿನ ಮಾತು ಎಂಬ ಸ್ಪರ್ಧೆಯಲ್ಲಿ ಕೀರ್ತನ ಲೋಕೇಶ್ ಬಹುಮಾನ ಪಡೆದರು. ವಿಜೇತರಿಗೆ ಕಾರ್ಯಕ್ರಮದ ಆಯೋಜಕರಾದ ಗುರುದತ್ತ್ ಎಸ್ ರವರು ಪುಸ್ತಕ ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅಪರಿಚಿತ ಓದುಗರು ಉಪಸ್ಥಿತರಿದ್ದು ಪರಿಚಿತ ಓದುಗರಾದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ