ಉದಯೋನ್ಮುಖ ಯಕ್ಷಪ್ರತಿಭೆ - ಅಭಿಜಿತ್ ಕೆರೆಕಾಡು

Upayuktha
0


ಕ್ಷಗಾನ ರಂಗದಲ್ಲಿ ಅನೇಕ ಯುವ ಕಲಾವಿದರು ನಮಗೆ ನೋಡಲು ಸಿಗುತ್ತಾರೆ. ಅದರಲ್ಲಿ ಒಬ್ಬರು ಯುವ ವೇಷಧಾರಿ ಅಭಿಜಿತ್ ಕೆರೆಕಾಡು. ಮನೆಯ ಹತ್ತಿರ ನಡೆಯುತ್ತಿದ್ದ ಯಕ್ಷಗಾನ ನೋಡಲು ತಂದೆ ಹಾಗೂ ತಾಯಿಯ ಜೊತೆಗೆ ಹೋಗುತ್ತಾ ಇದ್ದೆ ಹಾಗೂ ಮನೆಯಲ್ಲಿ ಯಕ್ಷಗಾನದ ವಾತಾವರಣ ಇದ್ದುದರಿಂದ ಕಲೆಯ ಮೇಲೆ ಆಸಕ್ತಿ ಬೆಳೆಯಿತು. ಶಾಲೆಯಲ್ಲಿ ವಾರ್ಷಿಕೋತ್ಸವಕ್ಕೆ ಯಕ್ಷಗಾನ ಕಲಿಸುತ್ತಿದ್ದರು. ಆಗ ಅಲ್ಲಿ ಯಕ್ಷಗಾನ ಕಲಿಯಲು ಆರಂಭಿಸಿದೆ. 2008ರಲ್ಲಿ ತಂದೆ ಕೆರೆಕಾಡು ಮೇಳ ಕಟ್ಟಿದರು. ತಮ್ಮ ಅಜಿತ್ ಕೆರೆಕಾಡು, ತಂಗಿ ಅನ್ವಿತಾ ಅವರೂ ಯಕ್ಷಗಾನ ಕಲಿಯಲು ಪ್ರಾರಂಭಿಸಿದರು. ಹೀಗೆ ಯಕ್ಷಗಾನ ಕಲಿಯಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಅಭಿಜಿತ್ ಕೆರೆಕಾಡು.


14.09.1995ರಂದು ಜಯಂತ್ ಅಮೀನ್ ಹಾಗೂ ಪ್ರೇಮಲತ ಇವರ ಮಗನಾಗಿ ಜನನ. M.Com ಪದವಿಯನ್ನು ಪೂರೈಸಿ ಪ್ರಸ್ತುತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗಣೇಶ ಕೊಲೆಕಾಡಿ, ಕೃಷ್ಣಮೂರ್ತಿ ರಾವ್, ಸತೀಶ್ ಪಿ ಆಚಾರ್ಯ, ಪ್ರಸಾದ್ ಚೇರ್ಕಾಡಿ, ಆನಂದ ಗುಡಿಗಾರ್ ಕೆರ್ವಾಶೆ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಗಣೇಶ್ ಭಟ್ ನೆಕ್ಕರೆಮೂಲೆ, ಮಧೂರು ರಾಮಪ್ರಕಾಶ ಕಲ್ಲೂರಾಯ ಇವರ ಯಕ್ಷಗಾನ ಗುರುಗಳು.


ವಿಷ್ಣು, ಈಶ್ವರ, ರಾಮ, ಮಾಲಿನಿ, ದೇವಿ, ನಂದಿನಿ, ಯಶೋಮತಿ, ರಾವಣ, ನರಕಾಸುರ, ಮಹಿಷ, ವೀರಭದ್ರ, ಶತ್ರುಪ್ರಸೂಧನ, ಶುಂಭ, ಇಂದ್ರಜಿತು, ಅತಿಕಾಯ, ಹಿರಣ್ಯಾಕ್ಷ, ರಕ್ತಬೀಜ, ಕರ್ಣ, ಕೃಷ್ಣ ಲೀಲೆಯ ವಿಜಯ, ಬಪ್ಪನಾಡು ಕ್ಷೇತ್ರ ಮಹಾತ್ಮೆಯ ಅಣ್ಣಯ್ಯ ಬೆಲ್ಚಡ, ಗುರುಶಿಷ್ಯರ ಪಾತ್ರ ಹೀಗೆ ರಂಗದಲ್ಲಿ ಪುಂಡು, ಸ್ತ್ರೀ, ಹಾಸ್ಯ, ಕಿರೀಟ, ಬಣ್ಣ ಎಲ್ಲಾ ಪ್ರಕಾರದ ವೇಷ ನಿರ್ವಹಿಸಿದ ಕೀರ್ತಿ ಅಭಿಜಿತ್ ಕೆರೆಕಾಡು ಅವರದು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಮೂಲ ಪ್ರತಿಯನ್ನು ನೋಡಿ, ಪುಸ್ತಕ ಓದಿ, ಭಾಗವತರು ಹಾಗೂ ಹಿರಿಯ ಕಲಾವಿದರಲ್ಲಿ ಕೇಳಿ ತಿಳಿದುಕೊಂಡು ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಅಭಿಜಿತ್ ಕೆರೆಕಾಡು.


ದೇವೀ ಮಹಾತ್ಮೆ, ಕರ್ಣಾರ್ಜುನ ಕಾಳಗ, ಶ್ರೀ ದೇವಿ ಬನಶಂಕರಿ, ನಳ ದಮಯಂತಿ ಇತ್ಯಾದಿ ನೆಚ್ಚಿನ ಪ್ರಸಂಗಗಳು.

ಕರ್ಣ,ಅತಿಕಾಯ, ಇಂದ್ರಜಿತು, ಮಹಿಷ ಇತ್ಯಾದಿ ನೆಚ್ಚಿನ ವೇಷಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಪ್ರಸ್ತುತ ಯಕ್ಷಗಾನ ಕಲಾವಿದರ ಸಂಖ್ಯೆ ಜಾಸ್ತಿ ಆಗಿದೆ, ಮೇಳಗಳು ಜಾಸ್ತಿ ಆಗಿದೆ,  ಪ್ರದರ್ಶನಗಳು ಜಾಸ್ತಿ ಆಗಿದೆ. ಯಕ್ಷಗಾನ ದಿನದಿಂದ ದಿನಕ್ಕೆ ವಿಜ್ರಂಭಿಸುತ್ತಿದೆ. ಕಾಲಮಿತಿ ಪ್ರದರ್ಶನದಿಂದಾಗಿ ಯಕ್ಷಗಾನಕ್ಕೆ ತುಂಬಾ ಪ್ರೇಕ್ಷಕರು ಸಿಗ್ತಾ ಇದ್ದಾರೆ.  ಅಂತೆಯೇ ಕಾಲಮಿತಿ ಪ್ರದರ್ಶನದಲ್ಲಿ ಪ್ರಸಂಗದ ಆಯ್ದ ಭಾಗಗಳು ಮಾತ್ರ ಪ್ರದರ್ಶಿಸಲ್ಪಡುವುದು ಕೆಲವರು ಬೇಸರವನ್ನು ವ್ಯಕ್ತಪಡಿಸುತ್ತಾ ಇದ್ದಾರೆ.


ಸನ್ಮಾನ ಹಾಗೂ ಪ್ರಶಸ್ತಿ:-

♦ಕೆರೆಕಾಡು ಮೇಳದಲ್ಲಿ ಅನೇಕ ಸನ್ಮಾನಗಳು.

♦ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ವತಿಯಿಂದ ಸನ್ಮಾನ.

♦ ರಂಗಭೂಮಿ ಫೈನ್ ಆರ್ಟ್ ಮುಂಬಯಿಯಿಂದ ಸನ್ಮಾನ.

♦ ಮೂಕಾಂಬಿಕಾ ಮಂದಿರ ಘನ್ಸೋಲಿಯಲ್ಲಿ ಸನ್ಮಾನ.

♦ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಸನ್ಮಾನ.


ಮುಂದಿನ ದಿನಗಳಲ್ಲಿ ಹಿಮ್ಮೇಳದಲ್ಲಿ ಕಾಣಿಸಿಕೊಳ್ಳುವ ಯೋಜನೆ ಇದೆ.

ಪುಸ್ತಕ ಓದುವುದು Short film or documentary ಮಾಡುವುದು ಹಾಗೂ ಸಮಯ ಇರುವಾಗ ಕಾವೂರು ಮನೋಜ್ ಶಾಂತಿಯವರಿಂದ ನಾಗಮಂಡಲದ ಬಗ್ಗೆ ಅಧ್ಯಯನ ಮಾಡುವುದು ಇವರ ಹವ್ಯಾಸಗಳು.


ಬಪ್ಪನಾಡು ಮೇಳ, ಮುಂಡ್ಕೂರು ಮೇಳ, ಗುತ್ಯಮ್ಮ ಮೇಳ (ಬಡಗು), ಕಟೀಲು ಮೇಳದಲ್ಲಿ ಕೆಲವೊಮ್ಮೆ ವೇಷ ಮಾಡಿದ ಅನುಭವ. ಹವ್ಯಾಸಿ/ಅತಿಥಿ ಕಲಾವಿದರ ಕೂಡುವಿಕೆಯ ಆಟಕ್ಕೆ ಹಾಗೂ ಬಡಗಿನ ಕಲಾವಿದರೊಂದಿಗೂ ಕೂಡಾಟದಲ್ಲಿ ವೇಷ ಮಾಡಿದ ಅನುಭವ ಇದೆ ಎಂದು ಹೇಳುತ್ತಾರೆ ಅಭಿಜಿತ್ ಕೆರೆಕಾಡು.


ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಅಭಿಜಿತ್ ಕೆರೆಕಾಡು.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top