ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ನಾಟಕ ರಚಿಸಿದವರು ಬಿ.ಪುಟ್ಟಸ್ವಾಮಯ್ಯನವರು : ಎನ್.ಎಲ್.ಚನ್ನೇಗೌಡರು

Upayuktha
0

.   



ಹಾಸನ: ನಾಡಿನ ಹೆಸರಾಂತ ನಾಟಕಕಾರರು ಬಿ.ಪುಟ್ಟಸ್ವಾಮಯ್ಯನವರು 22 ನಾಟಕ 21 ಕಾದಂಬರಿಗಳನ್ನು ರಚಿಸಿದ್ದಾರೆ. ಇವರ ಸಮಕಾಲೀನ ನಾಟಕಕಾರರು ಶ್ರೀರಂಗರು, ಕೈಲಾಸಂ ಕುವೆಂಪು ಮೊದಲಾದವರು ಪಾಶ್ಚಾತ್ಯ ಸಾಹಿತ್ಯದಿಂದ ಪ್ರಭಾವಿತರಾಗಿದ್ದವರು. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ನಾಟಕಗಳನ್ನು ರಚಿಸಿದವರಲ್ಲಿ ಬಿ.ಪುಟ್ಟಸ್ವಾಮಯ್ಯ, ನಂಜನಗೂಡು ಶ್ರೀಕಂಠಶಾಸ್ತಿçಗಳು, ಬೆಳ್ಳಾವೆ ನರಹರಿ ಶಾಸ್ತಿçಗಳು ಪ್ರಮುಖರು. ಗುಬ್ಬಿ ಕಂಪನಿಗೆ 1933ರಲ್ಲಿ ಬರೆದ ಕುರುಕ್ಷೇತ್ರ  1934ರಲ್ಲಿ ಪ್ರಥಮ ಪ್ರಯೋಗಗೊಂಡು ಇಂದಿಗೂ ಹಳ್ಳಿ ನಗರಗÀಳಲ್ಲಿ  ಪ್ರದರ್ಶನವಾಗುತ್ತಿರುವುದು ಅದರ ಜನಪ್ರಿಯತೆ ಸಾಕ್ಷಿ ಎಂದು ನಾಟಕಕಾರ ಎಸ್.ಎಸ್. ಪುಟ್ಟೇಗೌಡರು ತಿಳಿಸಿದರು. 



ಹಾಸನ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 314ನೇ ತಿಂಗಳ ಸಾಹಿತ್ಯ ಕಾರ್ಯಕ್ರಮ ಹೆಚ್.ಜಿ.ಗಂಗಾಧರ್ ಅಧ್ಯಕ್ಷರು ಶ್ರೀ ಶಾರದ ಕಲಾಸಂಘ ಹಾಸನ  ಪ್ರಾಯೋಜಕತ್ವದಲ್ಲಿ ಹಾಸನಾಂಬ ಥಿಯಾಸಾಫಿಕಲ್ ಸೊಸೈಟಿ  ವಾಣಿವಿಲಾಸ ರಸ್ತೆ ಇಲ್ಲಿ ಭಾನುವಾರ ನಡೆದ ಉಪನ್ಯಾಸ ಮತ್ತು ಕವಿಗೋಷ್ಠಿಯಲ್ಲಿ ನಾಟಕಕಾರ ಬಿ.ಪುಟ್ಟಸ್ವಾಮಯ್ಯ ಮತ್ತು ಅವರ ಕುರುಕ್ಷೇತ್ರ ನಾಟಕ ಕುರಿತಾಗಿ ಮಾತನಾಡಿ ವಿಶ್ಲೇಷಿಸಿದರು.



ಕವಿ ಎನ್.ಎಲ್.ಚನ್ನೇಗೌಡರು ಮಾತನಾಡಿ ನಾಟಕದ ಮೇಷ್ಟುç ಮೂಲ ನಾಟಕದ ಸಂಭಾಷಣೆಗೆ ಹೆಚ್ಚು ಒತ್ತುಕೊಟ್ಟು  ಹಾಡುಗಳನ್ನು ಕಡಿಮೆ ಮಾಡಿದರೆ ಒಳಿತೆಂದರು. ನಾಟಕಕಾರ ಗೊರೂರು ಅನಂತರಾಜು ಮಾತನಾಡಿ  ರಂಗಭೂಮಿಯ ಚಟುವಟಿಕೆಗೆ ಶುದ್ಧ ಸಾಹಿತ್ಯ ಸ್ಫರ್ಶ ತಂದು ಹೊಸ ಆಯಾಮ ಮೂಡಿಸಿದರು ಪುಟ್ಟಸ್ವಾಮಯ್ಯನವರದು. 3 ಗಂಟೆ ಅವಧಿಯ ನಾಟಕ ರಂಗಗೀತೆಗಳ ವಿಸ್ತರಿಸುವಿಕೆಯಿಂದ 8 ಗಂಟೆ ದಾಟಿ ಬೆಳೆದಿದೆ. ವಿಮರ್ಶಕರ ಅಭಿಪ್ರಾಯ ಏನೇ ಇದ್ದರೂ ನಾಟಕದ ಮೇಷ್ಟುç ಹೊಸ ಹೊಸದಾಗಿ ಅಳವಡಿಸುತ್ತಾ ಬಂದ ರಂಗಗೀತೆಗಳೇ ನಾಟಕದಲ್ಲಿ  ಮೇಲುಗೈ ಸಾಧಿಸಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದರು. ಕವಿಗೋಷ್ಠಿಯಲ್ಲಿ ರೇಖಾ ಪ್ರಕಾಶ್, ಲಲಿತ ಎಸ್., ಮಂಜುನಾಥ್‌ಎA, ಸರೋಜ ಟಿ.ಎಂ. ಮಲ್ಲೇಶ್ ಜಿ. ಚೂಡಾಮಣಿ ಹೆಚ್.ಬಿ. ಅರ್ಪಿತ ಎಸ್. ಪದ್ಮಾವತಿ ವೆಂಕಟೇಶ್, ಯಮುನಾವತಿ ಹೆಚ್.ಕೆ. ಎನ್.ಎಲ್.ಚನ್ನೇಗೌಡ, ಗೊರೂರು ಅನಂತರಾಜು, ಎಂ.ವಿ.ಸೀತಮ್ಮ., ಕಾಮಾಕ್ಷಿ ಕವಿತೆ ವಾಚಿಸಿದರು. ವೆಂಕಟೇಗೌಡರು ಭೀಮನ ಪಾತ್ರದ ಹಾಡು ಹಾಡಿದರೆ ಪುಟ್ಟೇಗೌಡರು ಧುರ್ಯೋಧನ ಪಾತ್ರ ನಟಿಸಿದರು. ಗೊರೂರು ಧನಲಕ್ಷಿö್ಮ ಮತ್ತು ಶ್ರೀಕಾಂತ್ ಹಳೆಯ ಪೌರಾಣಿಕ  ಸಿನಿಮಾ ಹಾಡುಗಳಿಂದ ಮನ ಸೆಳೆದರು. ಹೆಚ್.ಜಿ.ಗಂಗಾಧರ್ ಎಸ್.ಪ್ರಭ ಭಕ್ತಿಗೀತೆ. ಹಚ್.ಕೆ.ಬಾಲಕೃಷ್ಣ ಜನಪದ ಗೀತೆ ಹಾಡಿದರು. ರಾಣಿ, ಪುಟ್ಟಮ್ಮ, ಎಸ್.ನಿರ್ಮಲ ಚಂದ್ರಶೇಖರ್, ತುಳಸಿ ಮುರಳೀದರ್, ಜಯಲಕ್ಷಿö್ಮ ಆರ್. ಠಾಕೂರ್. ವಿಶಾಲಾಕ್ಷಿ ಜಗದೀಶ್. ಶಾಮಲ, ಸಾವಿತ್ರಿ ಮೊದಲಾದವರ ಸಮೂಹ ಗೀತೆ ಪ್ರೇಕ್ಷಕರ ಮನ ಸೆಳೆಯಿತು. ಜಯದೇವಪ್ಪ, ಯಾಕೂಬ್, ಕುಮಾರ್, ಹೆಚ್,ಟಿ.ನಾರಾಯಣಚಾರ್, ಡಿ.ಸಿ.ತಿಪ್ಪೇಸ್ವಾಮಿ, ಮೀನಾಕ್ಷಿ ಇದ್ದರು. ಹೆಚ್.ಜಿ.ಗಂಗಾಧರ್ ಪ್ರಾರ್ಥಿಸಿದರು. ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು.   



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top