ಬದಿಯಡ್ಕ ದಲ್ಲಿ ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ

Upayuktha
0



ಬದಿಯಡ್ಕ : SPYSS (ರಿ.) ಕರ್ನಾಟಕ ಹಾಗೂ  ಶ್ರೀ ಗಣೇಶ ಮಂದಿರ ಶಾಖೆ ಬದಿಯಡ್ಕ ಇದರ ವತಿಯಿಂದ ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಶ್ರೀ ಮಹಾವಿಷ್ಣು ದೇವಸ್ಥಾನ ಕೆಡೆಂಜಿ, ಬದಿಯಡ್ಕ ಇಲ್ಲಿ ಆಯೋಜಿಸಲಾಯಿತು.



ಈ ಕಾರ್ಯವನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಬ್ರಹ್ಮಶ್ರೀ ಪರೀಕ್ಷಿತ ಹೆಬ್ಬಾರ್  ಇವರು ದೀಪ ಪ್ರಜ್ವಲಿಸುವ ಮೂಲಕ  ಚಾಲನೆ ನೀಡಿದರು. ನಿತ್ಯಾಭ್ಯಾಸ, ಭಜನೆ, ಪಂಚಾಂಗ ಪಠಣ,  ಸೂರ್ಯ ನಮಸ್ಕಾರ, ಆಸನ ಅಭ್ಯಾಸ, ಸಾಮೂಹಿಕ ಅಗ್ನಿಹೋತ್ರವನ್ನು ನಡೆಸಲಾಯಿತು.



ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾದ  ಜಯರಾಮ ಅಣ್ಣ, ಮುಖ್ಯ ಶಿಕ್ಷಕರಾದ ಕುಮಾರ ಸುಬ್ರಹ್ಮಣ್ಯ ಅಣ್ಣ, ಸಂಚಾಲಕರಾದ ವಿಜಯ್ ಸಾಯಿ ಅಣ್ಣ, ಕವಿತ ಅಕ್ಕ ಇವರು ಉಪಸ್ಥಿತರಿದ್ದರು. ವಿದ್ಯಾಸರಸ್ವತಿ ಅಕ್ಕನವರು ನಿರೂಪಣೆ ಹಾಗೂ  ಕುಮಾರಿ ಭುವನೇಶ್ವರಿ ಅಕ್ಕನವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ಯೋಗ ಬಂಧುಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top