ರಾಜ್ಯ ಬಜೆಟ್‌ನಲ್ಲೂ ಅಡಿಕೆಗೆ ಅಂತಿಮ ನಮನ ಸಮರ್ಪಣೆ

Upayuktha
0



ರಾಜ್ಯದ ಅಡಿಕೆ ಬೆಳೆಯಲ್ಲಿ ಕಂಡು ಬರುವ ಮಾರಕ ರೋಗಗಳನ್ನು ನಿಯಂತ್ರಿಸಲು ಪೂರಕವಾದ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣ  ಚಟುವಟಿಕೆಗಳನ್ನು  ಕೇಂದ್ರ ಸರಕಾರದ ಸಹಯೋಗದೊಂದಿಗೆ ಕೈಗೊಳ್ಳಲಾಗುವುದು. ಪುನಃ ಸ್ಮಾರ್ಟ್ ಸೆಂಟೆನ್ಸ್ ಹಾಕಿ ಚಂಡನ್ನು ಕೇಂದ್ರದ ಅಂಗಳಕ್ಕೆ ಒದೆಯಲಾಗಿದೆ.



ಅನಾರೋಗ್ಯದ ತುಂಬ ಕ್ರಿಟಿಕಲ್ ಪರಿಸ್ಥಿತಿಯಲ್ಲಿ "ಆಸ್ಪತ್ರೆಯಲ್ಲಿ ಏನೂ ಮಾಡಕಾಗಲ್ಲ, ಡಿಸ್‌ಚಾರ್ಜ್ ಮಾಡಿ ಮನೆಗೆ ಕರ್ಕೊಂಡು ಹೋಗಿ.  ಇನ್ನೆಷ್ಟು ದಿನ ಇರ್ತಾರೆ ಅಂತ ಹೇಳೋಕಾಗಲ್ಲ. ದೇವರ ಮೇಲೆ ಬಾರ ಹಾಕಿ ಪ್ರಾರ್ಥನೆ ಮಾಡಿ." ಅಂತಾರಲ್ಲ ಹಾಗೆ,   ಸ್ಟೇಟ್ ಡಾಕ್ಟರ್, ಸೆಂಟ್ರಲ್ ಸರ್ಜನ್ ಇಬ್ಬರೂ ಅಡಿಕೆ ಎಲೆ ಚುಕ್ಕಿ, ಹಳದಿ ರೋಗದ ಬಗ್ಗೆ ಪರೋಕ್ಷವಾಗಿ ಅಂತಿಮ ತೀರ್ಮಾನ ಹೇಳಿಯಾಗಿದೆ. 



ಮಲೆನಾಡು-ಕರಾವಳಿಗಳಲ್ಲಿ ರೋಗಿಷ್ಟ ಅಡಿಕೆಯ  ಮಾನ-ಪ್ರಾಣ ಎರಡೂ ಕೊನೇ ಉಸಿರನ್ನು ಎಣಿಸುತ್ತಿವೆ, ಅಡಿಕೆ ತೋಟಗಳ ಒಂದೆರಡು ಫೋಟೋ ತೆಗೆದು ಇಟ್ಕೊಂಡಿರಿ,  ಸಂಬಂಧಿಕರಿಗೆಲ್ಲ ವಿಷಯ ತಿಳಿಸಿರಿ. 



- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top