ಶಾಸಕರಿಬ್ಬರ ಅಮಾನತತು ಮಾಡಿ ಎಂದ ಐವಾನ್ ಡಿಸೋಜಗೆ ತಿರುಗೇಟು
ಕಾವೂರು: ಕೇಸು ದಾಖಲಾದವರನ್ನು ಅಮಾನತು ಮಾಡುತ್ತಾ ಹೋದರೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಬೆಂಚುಗಳು ಖಾಲಿಯಾಗಲಿವೆ ಎಂದು ಶಾಸಕರಾದ ಡಾ. ಭರತ್ ಶೆಟ್ಟಿ ಟೀಕಿಸಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ಐವಾನ್ ಡಿಸೋಜ ಹಾಗೂ ಕೆಲವರು ಸ್ಪೀಕರ್ ಯು.ಟಿ ಖಾದರ್ ಅವರಿಗೆ ತನ್ನನ್ನು ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರನ್ನು ಅಮಾನತು ಮಾಡುವಂತೆ ಮನವಿ ಮಾಡಿದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೋಮುವಾದ ಕೇವಲ ಬಿಜೆಪಿಗೆ ಹಿಂದುಗಳಿಗೆ ಎಂದು ಲೇಬಲ್ ಅಂಟಿಸಿದಂತಿದೆ. ಶಾಲೆಯ ಶಿಕ್ಷಕಿಯ ತಪ್ಪು ತಿಳಿದೂ, ಸಮುದಾಯದ ಪರವಾಗಿ ಮಾತನಾಡುವ ಡಿಸೋಜಾ ಕೂಡ ಓರ್ವ ಕೋಮುವಾದಿಯಾಗಿದ್ದಾರೆ. ಹಲವಾರು ಪ್ರಕರಣದಲ್ಲಿ ಇದು ಸಾಬೀತಾಗಿದೆ ನಾವೂ ಕೂಡ ಅವರನ್ನು ಗಡಿಪಾರು ಮಾಡಿ ಎಂದು ಒತ್ತಾಯಸಬಹುದು ಎಂದು ತಿರುಗೇಟು ನೀಡಿದರು.
ಡಿಡಿಪಿಐ ಕಚೇರಿಗೆ ಮನವಿ ಕೊಡಲು ಹೋಗಿದ್ದ ನನ್ನ ಹಾಗೂ ಶರಣ್ ಪಂಪ್ ವೆಲ್ ಮೇಲೂ ಕೇಸು ಹಾಕಲಾಗಿದೆ. ಮನವಿ ನೀಡುವ, ಹೇಳಿಕೆ ವೀಡಿಯೋ ತಿರುಚಿ ಫಾರ್ವರ್ಡ್ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಹೆದರುವ ಪ್ರಶ್ನೆಯಿಲ್ಲ. ಕಾನೂನಾತ್ಮಕವಾಗಿಯೇ ಎದುರಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


