ಫೆ.24: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಫಾತಿಮಾ ರಲಿಯಾ ಅವರ ಕವನ ಸಂಕಲನ ಬಿಡುಗಡೆ

Upayuktha
0



ಮಂಗಳೂರು : ಫಾತಿಮಾ ರಲಿಯಾ ಅವರ 'ಅವಳ ಕಾಲು ಸೋಲದಿರಲಿ' ಕವನ ಸಂಕಲನ ಫೆ.24 ಶನಿವಾರ ಸಂಜೆ‌ 3.00 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಖ್ಯಾತ ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆಯವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ಸುಧಾ ಆಡುಕಳ ಮಾತಾಡಲಿದ್ದಾರೆ. ವಿಲ್ಸನ್ ಕಟೀಲ್ ಮತ್ತು ಮುಆದ್ ಜಿ.ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 




ಈ ಪುಸ್ತಕವನ್ನು 'ಉಡುಗೊರೆ ಪ್ರಕಾಶನ' ಪ್ರಕಟಿಸಿದ್ದು ಇದು ಫಾತಿಮಾ ರಲಿಯಾರಚರ ಮೂರನೇ ಕೃತಿಯಾಗಿದೆ. ಹಿಂದಿನ ಎರಡು ಕೃತಿಗಳಾದ 'ಕಡಲು ನೋಡಲು ಹೋದವಳು' ಮತ್ತು 'ಒಡೆಯಲಾರದ ಒಡಪು' ಅನ್ನು ಕ್ರಮವಾಗಿ ಅಹರ್ನಿಶಿ ಪ್ರಕಾಶನ ಮತ್ತು ಸಂಕಥನ ಪ್ರಕಟಿಸಿದೆ. ಮೂರೂ ಕೃತಿಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top