ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ, ಸರಸ್ವತಿನಗರ, ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಗೋವಿಂದರಾಜನಗರ ಪೊಲೀಸ್ ಠಾಣೆಯ ಹತ್ತಿರ, ನಾಗರಬಾವಿ ಮುಖ್ಯರಸ್ತೆ, ಬೆಂಗಳೂರಿನಲ್ಲಿ ಫೆಬ್ರವರಿ 14 ರಿಂದ 17ರ ವರೆಗೆ ವಿವಿಧ ಧಾರ್ಮಿಕ / ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಫೆಬ್ರವರಿ 14, ಬುಧವಾರದಂದು ಸಂಜೆ 6-00ಕ್ಕೆ ಶ್ರೀಪಾದರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಪ್ರಶಾಂತ ಭಾರ್ಗವಾಚಾರ್ಯರವರಿಂದ "ಶ್ರೀ ಹನುಮದ್ವಿಲಾಸ" ಪ್ರವಚನ ನಡೆಯಲಿದೆ. ಫೆಬ್ರವರಿ 15 ರಂದು ಗುರುವಾರ ಸಂಜೆ 6-00ಕ್ಕೆ ಶ್ರೀಪಾದರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಪ್ರಶಾಂತ ಭಾರ್ಗವಾಚಾರ್ಯರವರಿಂದ "ಶ್ರೀ ಹನುಮದ್ವಿಲಾಸ". ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಫೆಬ್ರವರಿ 16 ಶುಕ್ರವಾರದಂದು ಸಂಜೆ 6-00ಕ್ಕೆ ಪವಿತ್ರ ಗಾನ ವೃಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಪ್ರಶಾಂತ ಭಾರ್ಗವಾಚಾರ್ಯರವರಿಂದ "ಶ್ರೀ ಹನುಮದ್ವಿಲಾಸ" ಪ್ರವಚನ ನಡೆಯಲಿದೆ. ಫೆಬ್ರವರಿ 17 ಶನಿವಾರ ಸಂಜೆ 6-30ಕ್ಕೆ : "ಹರಿನಾಮ ಸಂಕೀರ್ತನೆ". ಗಾಯನ : ಶೃತಿ ಕಾರಕೋಡ್ಲು, ಪಿಟೀಲು : ಆಶ್ರಿತ್ ಕೃಷ್ಣ ಮೃದಂಗ : ಅನಿರುದ್ಧ ವಾಸುದೇವ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ