ವೇದಾಂತ ಬಾಂಡ್‍ದಾರರಿಗೆ ಮರುಪಾವತಿ ಪೂರ್ಣ

Upayuktha
0



ಮಂಗಳೂರು: ತನ್ನ ಬಾಂಡ್ ಹೊಂದಿರುವವರಿಗೆ ಮರುಪಾವತಿಯನ್ನು ಈ ತಿಂಗಳ ಏಳರಂದು ಪೂರ್ಣಗೊಳಿಸಲಾಗಿದೆ ಎಂದು ವೇದಾಂತ ರಿಸೋರ್ಸಸ್ ಲಿಮಿಟೆಡ್ (ವಿಆರ್‍ಎಲ್) ಪ್ರಕಟಿಸಿದೆ. ಈ ವರ್ಷದ ಆರಂಭದಲ್ಲಿ ಸ್ವೀಕರಿಸಿದ ಒಪ್ಪಿಗೆಗಳಿಗೆ ಅನುಗುಣವಾಗಿ 3.2 ಶತಕೋಟಿ ಡಾಲರ್ ಮೌಲ್ಯದ  ಬಾಂಡ್‍ಗಳ ಪರಿಪಕ್ವತೆಯನ್ನು 2029 ಕ್ಕೆ ಯಶಸ್ವಿಯಾಗಿ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.


ವಿಆರ್‍ಎಲ್ ಸಾಲದ ಪರಿಕಪಕ್ವತೆ ಹೆಚ್ಚು ಸಮವಾಗಿ ಪಸರಿಸುತ್ತಿದೆ ಎನ್ನುವುದನ್ನು ಬಿಂಬಿಸುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ. ವೇದಾಂತ ಸಮೂಹವು ಕಳೆದ ಸೆಪ್ಟೆಂಬರ್‍ನಲ್ಲಿ ಗಮನಾರ್ಹವಾದ ವಿಭಜನೆ ಮತ್ತು ಮರುಸಂಘಟನೆಯ ಯೋಜನೆಯನ್ನು ಘೋಷಿಸಿತ್ತು. ಇದು ವೇದಾಂತ ಸಮೂಹವನ್ನು 17 ಪ್ರಮುಖ ಉದ್ಯಮಗಳಲ್ಲಿ ಮರು ಸಂಯೋಜಿಸುವ ಯೋಜನೆಯಾಗಿತ್ತು.


ಪ್ರತಿಯೊಂದು ವ್ಯವಹಾರವು ವಿಶ್ವ ದರ್ಜೆಯ ನಿರ್ವಹಣಾ ನಾಯಕತ್ವವನ್ನು ಹೊಂದಿದೆ, ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವುದರಿಂದ ಆಮದು ಪರ್ಯಾಯ ಮತ್ತು ದೇಶೀಯ ಬೇಡಿಕೆಯನ್ನು ಪೂರೈಸುವುದು ಪ್ರಮುಖ ಪ್ರತಿಪಾದನೆಯಾಗಿದೆ. ಅವು ಸಾಂಸ್ಥಿಕ ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಉತ್ತಮ ಗುಣಮಟ್ಟದ ಮತ್ತು ವೈವಿಧ್ಯಮಯ ಹೂಡಿಕೆ ಅವಕಾಶಗಳನ್ನು ಸಹ ನೀಡುತ್ತವೆ. ಅನುಷ್ಠಾನದ ಪ್ರಗತಿಯನ್ನು ಸಕಾಲದಲ್ಲಿ ನವೀಕರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top