ಮಂಗಳೂರು: ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯುತ್ತಿದೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

Upayuktha
0



ಮಂಗಳೂರು: ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಟೀಮ್ ಮಂಗಳೂರು ತಂಡದ ಆಶ್ರಯದಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿದೆ. ಫೆ.10 ಮತ್ತು 11ರಂದು ಎರಡು ದಿನಗಳ ಕಾಲ ಅಪರಾಹ್ನ 3ರಿಂದ 7ರವರೆಗೆ ಗಾಳಿಪಟ ಹಾರಾಟ ಮತ್ತು ಪ್ರದರ್ಶನ ನಡೆಯುತ್ತಿದೆ.


ಗಾಳಿಪಟ ಉತ್ಸವಕ್ಕೆ ಎಂಆರ್​ಪಿಎಲ್‌-ಒಎನ್‌ಜಿಸಿ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ದ.ಕ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಯ ಸಹಕಾರವಿದೆ.


ವಿದ್ಯುತ್ ದೀಪಗಳ ಬಣ್ಣಗಳ ಬೆಳಕಿನಲ್ಲಿಯೂ ಗಾಳಿಪಟ ಹಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. 'ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ' ಎಂಬ ಧ್ಯೇಯವಾಕ್ಯದಲ್ಲಿ ಸಾಮರಸ್ಯ, ಐಕ್ಯ ಭಾವಗಳಿಂದ ಗಾಳಿಪಟೋತ್ಸವ ನಡೆಯುತ್ತಿದೆ. ಮೊದಲ ದಿನ 1,000ಕ್ಕೂ ಅಧಿಕ ವಿವಿಧ ವಿನ್ಯಾಸ, ಗಾತ್ರಗಳಿಂದ ಕೂಡಿದ ಗಾಳಿಪಟಗಳು ಹಾರಾಡಿದವು. 


ಗಾಳಿಪಟ ಉತ್ಸವದಲ್ಲಿ ಟೀಮ್ ಮಂಗಳೂರು ತಂಡದ ಸಾಂಪ್ರದಾಯಿಕ ಗಾಳಿಪಟಗಳಾದ ಕಥಕ್ಕಳಿ, ಯಕ್ಷಗಾನ, ಭೂತಕೋಲಗಳೊಂದಿಗೆ ದೇಶ-ವಿದೇಶಗಳ ಅಧುನಿಕ ಶೈಲಿ ಹಾಗೂ ವಿನ್ಯಾಸದಿಂದ ಕೂಡಿದ ಅಮೀಬಾ, ಬೆಕ್ಕು, ಹಲ್ಲಿ, ಚಿರತೆ, ಹುಲಿ, ಕಥಕ್ಕಳಿ, ಬಟರ್ ಪ್ಲೈ ಟ್ರೈನ್ ಏರೋಪಾಯಿಲ್‌ ಗಾಳಿಪಟಗಳು ಹಾರಾಡಿದವು.


ಗಾಳಿಪಟ ಉತ್ಸವ ವೀಕ್ಷಿಸಲು ಬರುವವರಿಗೆ ಕೆಐಒಸಿಎಲ್ ಬಳಿಯಿಂದ ತಣ್ಣೀರುಬಾವಿ ಬೀಚ್‌ಗೆ ಆರು ಬಸ್ ಸೌಲಭ್ಯಗಳನ್ನು, ಸುಲ್ತಾನ್ ಬತ್ತೇರಿಯಿಂದ ದೋಣಿಯಲ್ಲಿ ಬರುವವರಿಗೂ ರಾತ್ರಿ 10ರವರೆಗೆ ದೋಣಿ ವ್ಯವಸ್ಥೆ ಮತ್ತು ಗಾಳಿಪಟ ಖರೀದಿಸುವರಿಗೆ ಕೈಟ್ ಮಳಿಗೆಗಳ ವ್ಯವಸ್ಥೆ ಮಾಡಲಾಗಿತ್ತು.



ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಥಾಯ್ಲೆಂಡ್‌ನ ಪಲವಾನ್ ಸುಕನ್‌ಲಯ, ಗ್ರೀಸ್‌ನ ಕೊನ್‌ಸ್ಟಂಟಿನ್ ರಾಟ್‌ಸ್, ಎಸ್ಟೋನಿಯಾದ ಆ್ಯಂಡ್ರಿಸ್ ಸೊಕ್, ಲಿಯಾ ರಿಡಲಿ, ಸ್ವೀಡನ್‌ ಆ್ಯಂಡ್ರೆಸ್ ಅಗ್ರೆನ್, ಇಂಡೋನೇಶ್ಯಾದ ಸರಿ ಸಬ್ಬಾ ಭಕ್ತಿ ಮದ್‌ಝಿದ್, ಟಿಂಟಾನ್ ಪ್ರಿಯಾಂಗೊರೊ, ವೆನಾಸ್ ಒಂಗೊವಿನೊಟೊ, ಮಲೇಶ್ಯಾದ ಮುಹಮ್ಮದ್ ಫಸ್ಟೀಲ್ ಬಿನ್ ಅಲಿ, ವಾನ್ ಅಹ್ಮದ್ ಅಳ್ಳವಿ ಬಿನ್ ವನ್ ಹುಸೇನ್ ಅವರನ್ನೊಳಗೊಂಡ ತಂಡಗಳು ಭಾಗವಹಿಸಿವೆ.


ಏಕದಾರದಲ್ಲಿ ಹಾರಿದ 101 ಬಟರ್ ಫ್ಲೈಗಳು: ಮುಂಬೈನ ಗೋಲ್ಡನ್ ಕೈಟ್ ಕ್ಲಬ್‌ ಸದಸ್ಯ, ಅಂತಾರಾಷ್ಟ್ರೀಯವಾಗಿ ಗಾಳಿಪಟ ಹಾರಾಟಗಾರ ಮಾತ್ರವಲ್ಲದೆ ವಿಶೇಷವಾಗಿ ಫೈಟರ್ ಕೈಟ್ ನಿಪುಣ ಎಂದೇ ಖ್ಯಾತಿ ಪಡೆದಿರುವ ಅಬ್ದುಲ್ ರವೂಫ್ ಈ ಬಾರಿ ಮಂಗಳೂರಿನ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಟೀಮ್ ಮಂಗಳೂರಿನ ಸರ್ವೇಶ್, "ಮಂಗಳೂರಿನಲ್ಲಿ ಏಳನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ತಣ್ಣೀರುಬಾವಿ ಬೀಚ್​ನಲ್ಲಿ ಗಾಳಿಯ ಒತ್ತಡ ಒಂದೇ ರೀತಿ ಇರುವುದರಿಂದ ಎಲ್ಲಾ ರೀತಿಯ ಗಾಳಿಪಟಗಳು ಇಲ್ಲಿ ಹಾರಾಡುತ್ತವೆ. 8 ದೇಶಗಳ 13 ಗಾಳಿಪಟ ತಂಡಗಳು ಮತ್ತು ನಮ್ಮ ದೇಶದ 5 ರಾಜ್ಯದ ತಂಡಗಳು ಉತ್ಸವದಲ್ಲಿ‌ ಭಾಗವಹಿಸಿದೆ" ಎಂದು ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top