ಯಶಸ್ವಿನಿ ಕೈಯಲ್ಲಿ ಮೂಡಿದ ರಾಮ ಮಂದಿರ ಪ್ರತಿಕೃತಿ

Upayuktha
0



ಯಾವುದೇ ಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಾದರೂ ಶ್ರದ್ಧೆ  ಅತೀಮುಖ್ಯವಾಗಿರುತ್ತದೆ. ಛಲ ಬಿಡದೆ ಪ್ರಯತ್ನಿಸಿದರೆ ನೂತನವಾದುದು ನಿರ್ಮಿಸಬಹುದು ಎನ್ನುವುದಕ್ಕೆ ಗಡಿನಾಡು ಕಾಸರಗೋಡಿನ ಬಜಕೂಡ್ಲು ನಿವಾಸಿನಿ ಯಶಸ್ವಿನಿಯವರು ಸಾಕ್ಷಿಯಾಗಿದ್ದಾರೆ. ಎಲ್ಲೆಡೆಯೂ ಅಯೋಧ್ಯೆ ಬಗೆಗೆ, ಶ್ರೀರಾಮಚಂದ್ರನ ಬಗೆಗೆ ಕಲಾಕೃತಿಗಳು ಮೂಡುತ್ತಿರುವ ಈ ಸಂದರ್ಭದಲ್ಲಿ, ಯಶಸ್ವಿನಿಯವರು ತಯಾರಿಸಿದ ರಾಮ‌ಮಂದಿರದ ಪ್ರತಿಕೃತಿಯೊಂದು ಕಣ್ಮನ ಸೆಳೆದಿದೆ.‌




ಇವರು ಅಯೋಧ್ಯೆಯ ಪವಿತ್ರ ದೇಗುಲ ರಾಮ ಮಂದಿರ ಪ್ರತಿಕೃತಿಯನ್ನು ಕಾರ್ಡ್ ಬೋರ್ಡ್ನಲ್ಲಿ ನಿರ್ಮಿಸಿದ್ದಾರೆ. ಐದು ದಿನಗಳ ಕಾಲ ನಿರಂತರ ಪ್ರಯತ್ನದಿಂದ ರಾಮ ಮಂದಿರಕ್ಕೆ ಕಾರ್ಡ್ ಬೋರ್ಡ್ ಸಹಾಯದಿಂದ ಮೂರ್ತರೂಪವನ್ನು ಕೊಟ್ಟಿದ್ದೇನೆ. ಕಾರ್ಡ್ ಬೋರ್ಡ್ ನಿಂದ ರಚಿಸಿದ ಈ ರಾಮ ಮಂದಿರಕ್ಕೆ ಬಣ್ಣ ಬಳಿಯಲು ಒಂದು ದಿನದ ಸಮಯವನ್ನು ತೆಗೆದುಕೊಂಡಿದ್ದೇನೆ ಎಂದು ಇವರು ಹೇಳುತ್ತಾರೆ.  




ಯೂಟ್ಯೂಬ್ ನಲ್ಲಿ ರಾಮನ ಪ್ರತಿಕೃತಿಯ ಬಗೆಗೆ ವಿಡಿಯೋ ಒಂದನ್ನು ನೋಡಿ, ತಾನೂ ಪ್ರಯತ್ನಿಸಬೇಕೆಂದು ಕಾರ್ಯಪ್ರವೃತ್ತಳಾದೆ. ಐದು ದಿನಗಳ ನಂತರ ರಾಮ ಮಂದಿರ  ತಯಾರಿಸಲು ಹೊರಟ ಪ್ರಯತ್ನ ಯಶಸ್ವಿಯಾಗಿದೆ ಎಂದು ಸಂತೋಷವಾಯಿತು. ರಾಮನೆಡೆಗಿನ ಭಕ್ತಿ ಈ ಮೂಲಕ ವ್ಯಕ್ತಪಡಿಸಲು ಸಾಧ್ಯವಾಯಿತು ಎಂಬ ಭಕ್ತಿಭಾವ ತುಂಬಿದೆ ಎಂದು ಯಶಸ್ವಿನಿಯವರು ಹೇಳುತ್ತಾರೆ.




ಯಶಸ್ವಿನಿ ಇವರಿಗೆ ಚಿತ್ರಕಲೆ, ಪೇಟಿಂಗ್, ಕೀ ಪಂಚ್ ತಯಾರಿಕೆ ಮುಂತಾದವುಗಳು ಆಸಕ್ತಿಯ ಕ್ಷೇತ್ರಗಳು. ತಮ್ಮ ಬಿಡುವಿನ ಸಮಯದಲ್ಲಿ ಈ ಕಲೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಿದ್ಧಿಯನ್ನು ಪಡೆದ ಇವರು, ಗ್ರಾಹಕರಿಗೆ ಅಗತ್ಯವಿರುವಂತೆ ಪರಿಕರಗಳನ್ನು ತಯಾರಿಸಿ ಮಾರಾಟವನ್ನು ನಡೆಸುತ್ತಿದ್ದಾರೆ.‌




ಪ್ರಸ್ತುತ ಯಶಸ್ವಿನಿ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮುಕ್ತ ಪದವಿ ವ್ಯಾಸಾಂಗವನ್ನು ಮಾಡುತ್ತಿದ್ದಾರೆ. ಜೊತೆಗೆ ಟಿಟಿಸಿ ಪರೀಕ್ಷೆಯ ಸಿದ್ಧತೆಯಲ್ಲೂ ತೊಡಗಿದ್ದಾರೆ. ಇವರು ಬಜಕೂಡ್ಲು ನಿವಾಸಿ ಚಂದ್ರಶೇಖರ್ ಹಾಗೂ ಯಶೋಧಾ ದಂಪತಿಗಳ ಪುತ್ರಿ. 



-ಪಂಚಮಿ ಬಾಕಿಲಪದವು 

ತೃತೀಯ ಬಿ.ಎ, ಪತ್ರಿಕೋದ್ಯಮ ವಿಭಾಗ 

ಅಂಬಿಕಾ ಮಹಾವಿದ್ಯಾಲಯ ಪುತ್ತೂರು




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top