ವಿವೇಕಾನಂದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶ್ರೀರಾಮೋತ್ಸವ-
‘ವೀರರಾಮ ಸ್ಮರಣೆ’
ಪುತ್ತೂರು : ರಾಮ ಧರ್ಮಾತ್ಮ, ನ್ಯಾಯವನ್ನು ಎತ್ತಿಹಿಡಿದವನು ಹಾಗೂ ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ. ಇಂತಹ ಮಹಾನ್ ಪುರುಷನ, ಶಾಂತಿಸ್ಥಾಪಕನ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲು ಕರಸೇವಕರು ಅನುಭವಿಸಿದ ಕಷ್ಟ ಶೋಚನೀಯ. ಶ್ರೀರಾಮನಿಗೆ ಭವ್ಯಮಂದಿರ ಕಟ್ಟಿಸುವುದು ಪ್ರತಿಯೊಬ್ಬ ಭಾರತೀಯನ ಕನಸಾಗಿತ್ತು. 30 ವರ್ಷಗಳ ಹಿಂದೆ ಪುರುಷೋತ್ತಮನಿಗೆ ಕರಸೇವಕರು ಮಾಡಿದ ಸೇವೆ ಇಂದಿಗೆ ಫಲಿಸಿದೆ. ರಾಮೋತ್ಸವ ಕೇವಲ ಆಚರಣೆಯ ಉದ್ದೇಶದಿಂದ ಮಾಡದೆ, ರಾಮನ ತತ್ವಗಳು ದಿನನಿತ್ಯದ ಬದುಕಿನಲ್ಲಿ ಪ್ರೇರಣೆಯಾಗಬೇಕು ಎಂದು ಪುತ್ತೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದಸ್ತಾವೇಜು ಬರಹಗಾರ ಹಾಗೂ ಸಮಿತಿಯ ಸದಸ್ಯ ಶೇಖರ್ ನಾರಾವಿ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಲಲಿತ ಕಲಾ ಸಂಘದ ಸಹಕಾರದೊಂದಿಗೆ ನಡೆದ ವೀರರಾಮ ಸ್ಮರಣೆಯಲ್ಲಿ ‘ಕರಸೇವಕರ ರಾಮ' ಎಂಬ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್, ಸದಸ್ಯ ಎರ್ಮುಂಜ ಶಂಕರ್ ಜೋಯಿಸ, ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯ್ಕ್, ಬೋಧಕ ಮತ್ತು ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಪ್ರೀಕ್ಷಿತ ಸ್ವಾಗತಿಸಿ, ಅರ್ಚನಾ ವಂದಿಸಿದರು. ಮಾನಸ ಎ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಸಭಾ ಕಾರ್ಯ್ರಮದ ಬಳಿಕ ಕಾಲೇಜಿನ ಲಲಿತಕಲಾ ಸಂಘದ ಸದಸ್ಯರಿಂದ ಶ್ರೀರಾಮ ಉಪಾಸನೆಯ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಉದ್ಘಾಟನೆ, ಗೌರವಾರ್ಪಣೆ
ಶ್ರೀ ರಾಮೋತ್ಸವ ಏಳನೇ ದಿನದ ಕಾರ್ಯಕ್ರಮವನ್ನು ಪದವಿ ವಿಭಾಗದ ಪರಿಚಾರಕಿ ಹೇಮಾ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕೊನೆಯಲ್ಲಿ ರಾಮ ಭಾವಪೂಜೆಯ ಮೂಲಕ ಕಾರ್ಯಕ್ರಮವು ಸಂಪನ್ನಗೊಂಡಿತು. ಜೊತೆಗೆ ಈ ಸಂದರ್ಭದಲ್ಲಿ ರಸಾಯನಶಾಸ್ತ್ರ ಪ್ರಯೋಗಾಲಯದ ಪರಿಚಾರಕ ನರೇಶ ಯು ಮತ್ತು ರವೀಂದ್ರ ಕಾರಂತ ಇವರಿಗೆ ಗೌರವ ಸಮರ್ಪಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ