ಚಿಕ್ಕಬಳ್ಳಾಪುರ: ಭಾವೈಕ್ಯ ಯುವಜನ ಸಂಘ ಚಿಕ್ಕಬಳ್ಳಾಪುರದ ವತಿಯಿಂದ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕಿನ ದೊಮ್ಮಸಂದ್ರ, ಸೀಗೆಹಳ್ಳಿ ಗ್ರಾಮ ಪಂಚಾಯಿತಿ, ಕೃಷ್ಣರಾಜಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀವಜಲವನ್ನು ಉಳಿಸುವ ನಿಟ್ಟಿನಲ್ಲಿ ಸ್ತುತ್ಯರ್ಹ ಅಭಿಯಾನವೊಂದು ನಡೆಯುತ್ತಿದೆ.
ಜೀವ ಸಂಪನ್ಮೂಲ ಒಡಲಿಗೆ ತ್ಯಾಜ್ಯ. ಮಾಯವಾಗುತ್ತಿರುವ ದೊಮ್ಮಸಂದ್ರದಲ್ಲಿರುವ ಜೀವ ಸಂಪನ್ಮೂಲ. ಈಗಾಗಲೇ ಅಂತರ್ಜಲ ಮಟ್ಟ ಕುಸಿದಿರುವುದು ನಮಗೆಲ್ಲರಿಗೂ ತಿಳಿದಿರುವ ಸಂಗತಿ.
ಜೀವಸಂಪನ್ಮೂಲವನ್ನು ಸಂರಕ್ಷಿಸಲು ಹಾಗೂ ಪೋಲು ಮಾಡಬಾರದು ಎಂದು ನಲ್ಲಿಗಳಿಗೆ ಮೀಟರ್‌ಗಳನ್ನು ಅಳವಡಿಸುವ ಕಾರ್ಯ ಈಗ ನಡೆಯುತ್ತಿದೆ. ಈಗಾಗಲೇ ಜೀವಸಂಪನ್ಮೂಲಕ್ಕೆ ಒಡ್ಡನ್ನು ಕಟ್ಟಲಾಗಿದೆ. ಜೀವ ಸಂಪನ್ಮೂಲಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ.
ತ್ಯಾಜ್ಯಗಳಿಂದ ಮಾಯವಾಗುತ್ತಿರುವ ಜೀವ ಸಂಪನ್ಮೂಲದಿಂದ ಸುತ್ತ ಮುತ್ತಲಿನ ಜೀವಸಂಪನ್ಮೂಲಗಳಾದ ಬೋರ್ವೆಲ್ ಗಳಲ್ಲಿ ಬರುವ ಜೀವ ಕೆಲವೇ ದಿನಗಳಲ್ಲಿ ನಿಲ್ಲುತ್ತದೆ. ಬೋರ್ವೆಲ್ ಗಳಿಂದ ಬರುವ ಜೀವ ವಿಷಕಾರಿಯಾಗಿಯೂ ಮಾರ್ಪಾಡಾಗುತ್ತದೆ. ಜೀವಸಂಪನ್ಮೂಲದಲ್ಲಿನ ಜೀವ ರಾಶಿಗಳು ನಶಿಸಿಹೋಗಿವೆ, ನಶಿಸಿ ಹೋಗುತ್ತಿವೆ.
ಜೀವ ಸಂಪನ್ಮೂಲ ಇಲ್ಲದೆ ಕೇವಲ ಒಂದು ದಿನವಾದರೂ ಜೀವಿಸಲು ಸಾಧ್ಯವಾ? ಸಾಧ್ಯವೇ ಇಲ್ಲ ಅಲ್ಲವೆ? ನಮ್ಮ ಮುಂದಿನ ಪೀಳಿಗೆಯ ಕುರಿತು ಪ್ರತಿಯೊಬ್ಬರೂ ಸೂಕ್ಷ್ಮವಾಗಿ ಗಮನಿಸಬೇಕು. ಜೀವ ಸಂಪನ್ಮೂಲ- "ನೀರು" ಉಳಿಸುವ ಮತ್ತು ಸಂರಕ್ಷಣೆ ಮಾಡುವ ಬಗ್ಗೆ ಒಮ್ಮೆ ನಾವೆಲ್ಲರೂ ಆಲೋಚನೆ ಮಾಡೋಣ!
-ಪ್ರಜ್ವಲ್ ಕೆ.ಆರ್, ಚಿಕ್ಕಬಳ್ಳಾಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ