ಪೆರ್ಲದ ಬಡ್ಸ್ ಶಾಲೆಯಲ್ಲಿ ಎಣ್ಮಕಜೆ ಗ್ರಾ.ಪಂ.ವಿಕಲಚೇತನ ಕಲೋತ್ಸವ

Upayuktha
0



ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್‌ ಹಾಗೂ ಐಸಿಡಿಎಸ್ ನೇತೃತ್ವದಲ್ಲಿ ವಿಭಿನ್ನ ಸಾಮಾರ್ಥ್ಯದ ಮಕ್ಕಳ ಕಲೋತ್ಸವ  ಪೆರ್ಲ ಸಮೀಪದ ಕಾನದ ಸಾಂತ್ವನ ಬಡ್ಸ್ ಶಾಲೆಯಲ್ಲಿ ಜರಗಿತು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.  ಕಲೋತ್ಸವವನ್ನು ಉದ್ಘಾಟಿಸಿದರು.




ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ನಾರಾಯಣ ನಾಯ್ಕ,  ಬ್ಲೋಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ,  ಪಂ.ಸದಸ್ಯರಾದ ರೂಪವಾಣಿ ಆರ್.ಭಟ್, ಉಷಾ ಕುಮಾರಿ, ಕುಸುಮಾವತಿ, ರಾಮಚಂದ್ರ ಎಂ, ನವಜೀವನ ಸ್ಪೆಶಲ್ ಶಾಲೆಯ ಫಾದರ್ ಜೋಸ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. 



ಐಸಿಡಿಎಸ್ ಸೂಪರ್ ವೈಸರ್ ಪ್ರೇಮಲತ ಸ್ವಾಗತಿಸಿ ಬಡ್ಸ್ ಸ್ಪೆಶಲ್ ಶಾಲಾ ಪ್ರಾಂಶುಪಾಲೆ ಮರಿಯಾಂಬಿ ವಂದಿಸಿದರು. ಈ ಸಂದರ್ಭದಲ್ಲಿ ನಡೆದ ಮಕ್ಕಳ ಕಲಾ ಪ್ರದರ್ಶನದಲ್ಲಿ ಬಡ್ಸ್ ಶಾಲೆ ಹಾಗೂ ನವಜೀವನ ಸ್ಪೇಶಲ್ ಶಾಲಾ ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನಗೈದು ಜನ ಮನ ಸೂರೆಗೊಂಡರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top