ಪೆರ್ಲ : ಕಳೆದ ಹಲವಾರು ವರ್ಷಗಳಿಂದ ಹದಗೆಟ್ಟು ನಾಡಿನ ಜನತೆಯ ಪ್ರಮುಖ ಬೇಡಿಕೆಯಾಗಿದ್ದ ಮಣಿಯಂಪಾರೆ -ದೇರಡ್ಕ-ಶಿರಿಯ -ಕುರೆಡ್ಕ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತಕ್ಕೊಳಪಡಿಸಿ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಇದರ ಅಂಗವಾಗಿ ಮಣಿಯಂಪಾರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ ಎಣ್ಮಕಜೆ ಪುತ್ತಿಗೆ ದ್ವಿ ಗ್ರಾಮ ಪಂಚಾಯತ್ ಗಳನ್ನು ಸಂಪರ್ಕಿಸುವ ಈ ರಸ್ತೆಯನ್ನು ಬೇಡಿಕೆ ಮೇರೆಗೆ ಪಿಎಂಜಿಎಸ್ ವೈ ಫೇಸ್ 3ಗೊಳಪಡಿಸಿ 7.61 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತಿದ್ದು ಸುಸಜ್ಜಿತ ರಸ್ತೆಯನ್ನಾಗಿಸಿ ಮುಂದಿನ ಐದು ವರ್ಷದ ಬಳಿಕ ಈ ರಸ್ತೆಯನ್ನು ಜಿಲ್ಲಾಪಂಚಾಯತಿಗೆ ಹಸ್ತಾಂತರಿಸಲಾಗುತ್ತದೆ ಎಂದರು.
ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಅಧ್ಯಕ್ಷತೆವಹಿಸಿದ್ದರು. ಎಣ್ಮಕಜೆ ಗ್ರಾಮ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ ಆಳ್ವ,ಕಾಸರಗೋಡು ಜಿ.ಪಂ.ಸದಸ್ಯ ನಾರಾಯಣ ನಾಯ್ಕ ಮಾತನಾಡಿದರು.
ಮಂಜೇಶ್ವರ ಬ್ಲೋಕ್ ಪಂ.ಸದಸ್ಯರಾದ ಬಟ್ಟು ಶೆಟ್ಟಿ, ಅನಿಲ್ ಕುಮಾರ್ ಕೆ.ಪಿ, ಎಣ್ಮಕಜೆ ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಭಿ ಹನೀಫ್, ಪಂ.ಸದಸ್ಯೆ ಉಷಾ ಕುಮಾರಿ, ಪುತ್ತಿಗೆ ಗ್ರಾ.ಪಂ.ಸದಸ್ಯರಾದ ಪ ಪಾಲಾಕ್ಷ ರೈ,ಆಶೀಫ್ ಆಲಿ ಕಂದಲ್,ಪ್ರೇಮಾ ಎಸ್.ರೈ, ಯೋಜನೆಯ ಅಸಿಸ್ಟೆಂಟ್ ಇಂಜಿನೀಯರ್ ಮಿತ್ರ ವಿ.ಸಭೆಯಲ್ಲಿ ಉಪಸ್ಥಿತರಿದ್ದರು. ಎಣ್ಮಕಜೆ ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ