ಸಾರ್ಥಕತೆಯ ಭಾವುಕ ವಿನಿಮಯ: ಮಹಾಂತ ನೃತ್ಯ ಗೋಪಾಲ್ ದಾಸ್‌ಜಿ ಜತೆ ಪೇಜಾವರ ಶ್ರೀಗಳ ಭೇಟಿ

Upayuktha
0

ಅಯೋಧ್ಯೆ: ಅಯೋಧ್ಯಾ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಜೀಯವರನ್ನು ಟ್ರಸ್ಟ್ ವಿಶ್ವಸ್ಥರಾದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅವರ ಆಶ್ರಮದಲ್ಲಿ ಶುಕ್ರವಾರ ಭೇಟಿ ಮಾಡಿದರು. ಈ ಸಂದರ್ಭ ಈರ್ವರೂ ಆತ್ಮೀಯ ಮಾತುಕತೆ ನಡೆಸಿ ಒಂದು ಮಹೋನ್ನತ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ ಧನ್ಯತೆಯನ್ನು ವ್ಯಕ್ತಪಡಿಸಿದರು.

 

ಶ್ರೀಗಳು ಅವರನ್ನು ಶಾಲು ಹಾರ ಸ್ಮರಣಿಕೆ ಸಹಿತ ಸತ್ಕರಿಸಿ ಟ್ರಸ್ಟ್ ನ ನೇತೃತ್ವ ವಹಿಸಿ ಅಮೂಲ್ಯ ಮಾರ್ಗದರ್ಶನ ನೀಡಿದ್ದಕ್ಕಾಗಿ ಅಭಿನಂದಿಸಿದರು. ಇದೆ ವೇಳೆ ಅವರ ಶಿಷ್ಯ ಮಹಾಂತ ಕಮಲನಯನ ದಾಸ್ ಜೀಯವರನ್ನೂ ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿ ಮಂಡಲೋತ್ಸವದ ಬಗ್ಗೆ ವಿವರಿಸಿ ಇವತ್ತಿನ ಮಂಡಲೋತ್ಸವದ ರಜತ ಕಲಶಪ್ರಸಾದ ನೀಡಿದರು. ಶ್ರೀಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದು ವೇದಘೋಷಗೈದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top